ನದಿಗೆ ಬಿದ್ದು ಯುವಕ ಮೃತ್ಯು
Update: 2025-11-10 21:23 IST
ಸಾಂದರ್ಭಿಕ ಚಿತ್ರ
ಅಮಾಸೆಬೈಲು, ನ.10: ಹೊಳೆಯಲ್ಲಿ ಮೀನು ಹಿಡಿಯಲು ಹೋದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನ.9ರಂದು ಬೆಳಗ್ಗೆ ಶೇಡಿಮನೆ ಗ್ರಾಮದ ಜೆ.ಜೆ. ಎಸ್ಠೇಟ್ ಸಮೀಪದ ಮಾವಿನಕಾಡು ಎಂಬಲ್ಲಿ ನಡೆದಿದೆ.
ಮೃತರನ್ನು ಹೆಂಗವಳ್ಳಿಯ ಗುರ್ಕಯ ನಾಯ್ಕ ಎಂಬವರ ಮಗ ಸುರೇಶ ನಾಯ್ಕ(29) ಎಂದು ಗುರುತಿಸಲಾಗಿದೆ.
ಗುರ್ಕಯ ಗೆಳೆಯರೊಂದಿಗೆ ಹೆಂಗವಳ್ಳಿ ಶೇಡಿಮನೆ ಪರಿಸರದ ವಿಮಲನದಿಯಲ್ಲಿ ಮೀನು ಹಿಡಿಯಲು ಹೋಗಿದ್ದು, ಈ ವೇಳೆ ಅವರು ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.