×
Ad

ರಷ್ಯಾದ ಒಳಪ್ರದೇಶಗಳ 5 ವಾಯುನೆಲೆಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ; 40 ವಿಮಾನಗಳಿಗೆ ಹಾನಿ

Update: 2025-06-02 07:26 IST

PC: x.com/Garden_Heart_07

ಮಾಸ್ಕೊ: ರಷ್ಯಾದ ಒಳಪ್ರದೇಶಗಳ ಐದು ವಾಯು ನೆಲೆಗಳನ್ನು ಗುರಿ ಮಾಡಿ ಉಕ್ರೇನ್ ಭಾನುವಾರ ಡ್ರೋನ್ ದಾಳಿ ನಡೆಸಿದೆ. ಇದುವರೆಗೆ ಉಕ್ರೇನ್ ನಡೆಸಿದ ಅತಿದೊಡ್ಡ ಡ್ರೋನ್ ದಾಳಿ ಇದಾಗಿದೆ.

"ಇಂದು ಕೀವ್ ಅಡಳಿತ ಮುರ್ಮಾನ್ಸ್ಕ್, ಇರ್ಕುತ್ಸ್ಕ್, ಇವಾನೊವಾ, ರ್ಯಾಝನ್ ಮತ್ತು ಅಮೂರ್ ಪ್ರದೇಶಗಳ ವಾಯುಕ್ಷೇತ್ರಗಳ ಮೇಲೆ ಎಫ್ಪಿವಿ ಡ್ರೋಣ್ಗಳ ಮೂಲಕ ಭಯೋತ್ಪಾದಕ ದಾಳಿ ನಡೆಸಿವೆ. ಈ ಎಲ್ಲ ದಾಳಿಗಳನ್ನು ಹಿಮ್ಮೆಟ್ಟಿಸಲಾಗಿದೆ. ಸೈನಿಕರ ಅಥವಾ ನಾಗರಿಕರ ಯಾವುದೇ ಜೀವಹಾನಿಗಳು ಸಂಭವಿಸಿಲ್ಲ. ಡ್ರೋನ್ ದಾಳಿಯಲ್ಲಿ ಒಳಗೊಂಡ ಕೆಲವರನ್ನು ಬಂಧಿಸಲಾಗಿದೆ" ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆ ನೀಡಿದೆ.

ಈ ದಾಳಿಯಿಂದಾಗಿ ಹಲವು ವಿಮಾನಗಳಿಗೆ ಬೆಂಕಿ ತಗುಲಿವೆ ಎಂದು ರಷ್ಯಾ ಹೇಳಿದೆ. "ವಾಯುನೆಲೆಗಳ ಸನಿಹದಲ್ಲಿ ಉಗ್ರಗಾಮಿಗಳಿಂದ ಎಫ್‌ಪಿವಿ ಡ್ರೋನ್ ಉಡಾವಣೆಯ ಕಾರಣದಿಂದಾಗಿ, ಹಲವು ವಿಮಾನಗಳಿಗೆ ಬೆಂಕಿ ಹತ್ತಿಕೊಂಡಿದೆ. ಆದರೆ ಅಗ್ನಿಶಾಮಕ ಪಡೆಗಳು ಇದನ್ನು ಆರಿಸಿವೆ ಎಂದು ಹೇಳಿಕೊಂಡಿದೆ.

ಆದರೆ ಕನಿಷ್ಠ 40 ವಿಮಾನಗಳು ಹಾನಿಗೀಡಾಗಿವೆ. ಇದರಲ್ಲಿ ಅಣ್ವಸ್ತ್ರ ಸಾಮ‌ರ್ಥ್ಯದ ಟಿಯು-95 ಹಾಗೂ ಟಿಯು-22 ಬಾಂಬರ್ಗಳು ಸೇರಿವೆಎಂದು ಉಕ್ರೇನ್ ಹೇಳಿದೆ.

ಸೈಬೀರಿಯಾದ ಶ್ರಿಡ್ನಿ ಗ್ರಾಮದಲ್ಲಿರುವ ಸೇನಾ ಘಟಕದ ಮೇಲೆ ನಡೆದಿರುವ ದಾಳಿ, ಈ ಬಗೆಯ ಮೊಟ್ಟಮೊದಲ ದಾಳಿಯಾಗಿದೆ ಎಂದು ರಷ್ಯಾದ ಇರ್ಕುತ್ಸ್ಕ್ ಪ್ರದೇಶದ ಗವರ್ನರ್ ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News