×
Ad

ದಿ ನ್ಯೂ ಇಂಗ್ಲಿಷ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ದಸರಾ ಕ್ರೀಡಾಕೂಟದಲ್ಲಿ ಅತ್ಯುತ್ತಮ ಸಾಧನೆ

Update: 2025-09-04 19:18 IST

ಭಟ್ಕಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಟ್ಕಳ ಇವರ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಸರ್ಕಾರಿ ಪೌಢ ಶಾಲೆ ಗೊರ್ಟೆಯಲ್ಲಿ ನಡೆದ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದಿ ನ್ಯೂ ಇಂಗ್ಲೀಷ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ.

ಬಾಲಕರ ವಿಭಾಗದಲ್ಲಿ ಅಕ್ಷಯ ಎನ್ ಕೆಲ್ಸಿ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು, 200 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಪ್ರಮೋದ ಜಿ. ನಾಯ್ಕ 400 ಮೀ ಓಟದಲ್ಲಿ ಪ್ರಥಮ, 800 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ, 4x400 ರೀಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಜಯಂತ ನಾಯ್ಕ 800 ಮೀ ಮತ್ತು 1500 ಮೀ ಓಟಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸುಜಯ್ ಗಣಾಚಾರಿ 1500 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 4x100 ರೀಲೆಯಲ್ಲಿ ಅಕ್ಷಯ ಕೆಲ್ಸಿ, ತ್ರಿಶಾಂಕ ನಾಯ್ಕ, ಹಿತೇಶ ನಾಯ್ಕ ಮತ್ತು ಶಿವರಾಜ ಮೊಗೇರ ತಂಡ ಪ್ರಥಮ ಸ್ಥಾನ ಪಡೆದಿದೆ. ಬಾಲಕರ ವಾಲಿಬಾಲ್ ತಂಡವು ಪ್ರಥಮ ಸ್ಥಾನ ಪಡೆದಿದೆ.

ಬಾಲಕಿಯರ ವಿಭಾಗದಲ್ಲಿ ಧನ್ಯಾ ಡಿ. ಗೊಂಡ 100 ಮೀ ಓಟದಲ್ಲಿ ದ್ವಿತೀಯ, 200 ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವನೀತಾ 200 ಮೀ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. 400 ಮೀ ಓಟದಲ್ಲಿ ಮೋನಿಕಾ ದೇವಾಡಿಗ ಪ್ರಥಮ, 800 ಮೀ ಓಟದಲ್ಲಿ ಹಿತಾಶ್ರೀ ದ್ವಿತೀಯ ಸ್ಥಾನ ಪಡೆದಿದ್ದಾರೆ. 1500 ಮೀ ಓಟದಲ್ಲಿ ದೀಕ್ಷಾ ದೇವಾಡಿಗ ಪ್ರಥಮ, ಮೇಘನಾ ನಾಯ್ಕ ದ್ವಿತೀಯ ಸ್ಥಾನ ಪಡೆದಿದ್ದಾರೆ. 4x100 ಮೀ ರೀಲೆಯಲ್ಲಿ ಧನ್ಯಾ ಗೊಂಡ ಮತ್ತು ದೀಪಶ್ರೀ ಪ್ರಥಮ ಸ್ಥಾನ ಗಳಿಸಿದ್ದಾರೆ. 4x400 ರೀಲೆಯಲ್ಲಿ ದೀಕ್ಷಾ ದೇವಾಡಿಗ ಪ್ರಥಮ ಸ್ಥಾನ ಪಡೆದಿದ್ದಾರೆ. ಎತ್ತರ ಜಿಗಿತದಲ್ಲಿ ಚಂದ್ರಕಲಾ ನಾಯ್ಕ ದ್ವಿತೀಯ, ಈಟಿ ಎಸೆತದಲ್ಲಿ ರಕ್ಷಾ ನಾಯ್ಕ ದ್ವಿತೀಯ ಸ್ಥಾನ ಪಡೆದಿದ್ದಾರೆ. ಗುಂಪು ಆಟಗಳಲ್ಲಿ ಬಾಲಕಿಯರ ತಂಡ ತ್ರೋಬಾಲ್, ಕಬಡ್ಡಿ ಮತ್ತು ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ, ಖೋ ಖೋದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ್ ವಿ. ನಾಯ್ಕ, ಮಾನೇಜಿಂಗ್ ಟ್ರಸ್ಟಿಯವರಾದ ಆರ್.ಜಿ. ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ರಾಜೇಶ್ ನಾಯ್ಕ, ಪ್ರಾಂಶುಪಾಲ  ಡಾ. ವಿರೇಂದ್ರ ಶ್ಯಾನಭಾಗ ಮತ್ತು ಬೋಧಕ-ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News