ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್: ಭಟ್ಕಳದ ಮಾರ್ಷಲ್ ಆರ್ಟ್ಸ್ ಕೋಚಿಂಗ ಸೆಂಟರ್ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ
Update: 2026-08-18 20:58 IST
ಭಟ್ಕಳ: ಉಡುಪಿಯ ಕಟ್ಪಾಡಿಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಟ್ಕಳದ ಮಾರ್ಷಲ್ ಆರ್ಟ್ಸ್ ಕೋಚಿಂಗ ಸೆಂಟರ್ ನ ವಿದ್ಯಾರ್ಥಿಗಳೂ ಅತ್ಯುತ್ತಮ ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಕಟಾ ಮತ್ತು ಕುಮಟೆ ವಿವಿಧ ವಯೋಮಾನ ವಿಭಾಗದಲ್ಲಿ ತನ್ವಿತ್ ಆ ನಾಯ್ಕ್ ಪ್ರಥಮ, ಪ್ರಜ್ವಲ್ ನಾಯ್ಕ್ ಪ್ರಥಮ, ಕೌಶಲ್ ಮೊಗೇರ್ ಪ್ರಥಮ, ಪ್ರೀತಮ್ ನಾಯ್ಕ್ ಪ್ರಥಮ, ದರ್ಶಿತ್ ನಾಯ್ಕ್ ದ್ವಿತೀಯ, ಇಂದ್ರೇಜ್ ನಾಯ್ಕ್ ದ್ವಿತೀಯ ಆರ್ ವಿ ನಾಯ್ಕ್ ದ್ವಿತೀಯ, ವಿವೇಕ್ ನಾಯ್ಕ್ ಪ್ರಥಮ ಕಂದ ನಾಯ್ಕ್ ದ್ವಿತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ಇವರ ಸಾಧನೆಗೆ ಶಾಲಾ ಮುಖ್ಯೋಪಾದ್ಯಾಯರು, ಶಿಕ್ಷಕ ವೃಂದದವರು, ಊರವರು ಹರ್ಷ ವ್ಯಕ್ತಪಡಿಸಿದ್ದಾರೆ. ಕರಾಟೆ ಶಿಕ್ಷಕರಾದ ಅಶೋಕ್ ನಾಯ್ಕ ಹಾಗೂ ವೆಂಕಟೇಶ್ ಎಂ. ಇವರಿಗೆ ತರಬೇತಿ ನೀಡಿದ್ದರು.