×
Ad

ದೇಶದ 18 ಲಕ್ಷಕ್ಕೂ ಮಿಕ್ಕಿ ಅರಣ್ಯವಾಸಿಗಳ ಭೂಮಿ ಹಕ್ಕಿನ ಭವಿಷ್ಯ ನಿರ್ಧಾರ: ರವೀಂದ್ರ ನಾಯ್ಕ

ಅ.10ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಅಂತಿಮ ವಿಚಾರಣೆ

Update: 2025-09-04 19:22 IST

ಶಿರಸಿ: ಸುಪ್ರೀಂ ಕೋರ್ಟ್‌ ನಲ್ಲಿ ಪರಿಸರ ಸಂಘಟನೆಗಳು 2008 ರಲ್ಲಿ ದಾಖಲಿಸಿದ ಸಾರ್ವಜನಿಕ ಹಿತಸಕ್ತಿಯ ಅರ್ಜಿಯ ಅಂತಿಮ ವಿಚಾರಣೆ ಅ.10 ರಂದು ಜರುಗಲಿದೆ. ಸುಪ್ರೀಂ ಕೊರ್ಟನ ಆದೇಶವು ದೇಶಾದ್ಯಂತ ತಿರಸ್ಕಾರಗೊಂಡಿರುವ ಸುಮಾರು 18 ಲಕ್ಷಕ್ಕೂ ಮಿಕ್ಕಿ ಅರಣ್ಯವಾಸಿಗಳ ಭೂಮಿ ಹಕ್ಕಿನ ಭವಿಷ್ಯ ನಿರ್ಧರಿಸಲಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಅರಣ್ಯ ಭೂಮಿ ಹಕ್ಕು ಕಾನೂನಿನ ಮೌಲ್ಯತೆವನ್ನ ಪ್ರಶ್ನೀಸಿ ಹಾಗೂ ಕಾಯಿದೆಯ ಅಡಿಯಲ್ಲಿ ತಿರಸ್ಕರಿಸಿದ ಅರಣ್ಯ ವಾಸಿಗಳ ಸಾಗುವಳಿ ಕ್ಷೇತ್ರದಿಂದ ಒಕ್ಕಲೆಬ್ಬಿಸಿ ಅತಿಕ್ರಮಿಸಿರುವ ಅರಣ್ಯ ಕೇತ್ರವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿ ಸಬೇಕೆಂಬ ದೇಶದ ಎಂಟು ಪರಿಸರ ಸಂಘಟನೆಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸುಪ್ರೀಂ ಕೊರ್ಟನಲ್ಲಿ ಅಂತಿಮ ವಿಚಾರಣೆಗೆ ಅಕ್ಟೋಬರ್ 10 ರಂದು ನಿಗಧಿಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಸುಪ್ರೀಂ ಕೊರ್ಟನಲ್ಲಿ ಪರಿಸರವಾದಿಗಳು ಸಲ್ಲಿಸಿದ ಸಾರ್ವ ಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಅರಣ್ಯವಾಸಿಗಳ ಪರವಾಗಿ ಸೆಪ್ಟೇಂಬರ, 2019 ರಂದು ಸೇರಲ್ಪಟ್ಟಿರುವುದು ವಿಶೇಷ. ಅ.10 ರಂದು ಅರಣ್ಯವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆಯು ವಾದ ಮಂಡಿಸಲಿದೆ. ಸುಪ್ರಿಂ ಕೊರ್ಟನಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎಚ್. ಎನ್ ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ಹಿರಿಯ ವಕೀಲ ತಂಡವು ಹೋರಾಟಗಾರರ ವೇದಿಕೆಯ ಪರವಾಗಿ ವಾದ ಮಂಡಿಸಲಿದೆ ಎಂದು ಅವರು ಹೇಳಿದರು.

ದೇಶದಲ್ಲಿ 1,855,792 ಅರಣ್ಯವಾಸಿ ಕುಟುಂಬ ಅತಂತ್ರದ ಭೀತಿ:

ದೇಶಾದ್ಯಂತ 21 ರಾಜ್ಯಗಳಲ್ಲಿ 51,04,904 ಅರ್ಜಿಗಳನ್ನ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ದಾಖಲಿಸಿದ್ದು, ಅವುಗಳಲ್ಲಿ 25,03,453 ಅರ್ಜಿಗಳಿಗೆ ಸಾಗುವಳಿ ಹಕ್ಕು ನೀಡಿದ್ದು, ಬಂದಿರುವಂತಹ ಅರ್ಜಿಗಳಲ್ಲಿ ಈಗಾಗಲೇ 1,8,55,792 ಅರ್ಜಿಗಳನ್ನ ತಿರಸ್ಕರಿಸಲಾಗಿದೆ. ಅಲ್ಲದೇ, 7,45,659 ಅರ್ಜಿಗಳು ವಿಚಾರಣೆಗೆ ಬಾಕಿ ಇದೆ ಎಂಬ ಅಂಶ ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯ ಪ್ರಕಟಣೆಯಲ್ಲಿ ತಿಳಿದು ಬರುತ್ತದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News