×
Ad

ಅಂಕೋಲಾ: ಗುಡ್ಡ ಕುಸಿತ ಪ್ರಕರಣ, ಓರ್ವ ಮಹಿಳೆಯ ಮೃತದೇಹ ಪತ್ತೆ

Update: 2024-07-23 09:59 IST

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬೆಳಗ್ಗೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಇದರಿಂದ ಒಟ್ಟು ಸಾವಿನ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ

ಈಗಾಗಲೇ ಏಳು ಮೃತದೇಹ ಪತ್ತೆಯಾಗಿತ್ತು. ಈ ಮೃತ ದೇಹದ ಕೈಯಲ್ಲಿ ಬಳೆ ಮತ್ತು ಸೊಂಟದ ಮೇಲಿನ ಬಟ್ಟೆಯ ಮೇಲೆ ಪತ್ತೆ ಮಾಡಬಹುದಾಗಿದೆ. ಗಂಗಾವಳಿ ನದಿ ತೀರದ ಉಳುವರೆ ಗ್ರಾಮದ ಸಣ್ಣಿ ಗೌಡ ಎನ್ನುವ ಮಹಿಳೆ ನಾಪತ್ತೆಯಾಗಿದ್ದರು. ಮೃತದೇಹ ಆಕೆಯದ್ದೇ? ಎಂದು ಅವಳ ಕುಟುಂಬದವರು ಪತ್ತೆ ಮಾಡಬೇಕಿದೆ. ಉಳಿದವರ ಮೃತದೇಹ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News