×
Ad

ಅಂಕೋಲಾ: ಅರ್ಜುನ್‌ ಪತ್ತೆಗೆ ಅಡ್ವಾನ್ಸ್ಡ್ ಡ್ರೋನ್ ಬಳಕೆ

Update: 2024-07-25 14:04 IST

ಕಾರವಾರ: ಅರ್ಜುನ್‌ ನನ್ನು ಪತ್ತೆ ಮಾಡಲು ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ದೆಹಲಿಯಿಂದ ತರಿಸಲಾಗಿದೆ.

ಶಿರೂರಿನಲ್ಲಿ ಕುಸಿತವಾಗಿರುವ ಗುಡ್ಡ ಹರಿದು ಗಂಗಾವಳಿ ನದಿ ತಳಭಾಗದಲ್ಲಿ ಅರ್ಜುನ್ ಸಂಚರಿಸುತ್ತಿದ್ದ ಲಾರಿ ಅವಶೇಷ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಖಚಿತ ಪಡಿಸಿದ್ದಾರೆ. ಅದನ್ನು ಮೇಲೆತ್ತಲು ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿದೆ. ಮಿಲಿಟರಿ ಪಡೆಯವರು ಲಾರಿ ಮೇಲೆತ್ತಲು ಶ್ರಮಿಸುತ್ತಿದ್ದಾರೆ.

ಗಂಗಾವಳಿ ನದಿ ಮೇಲ್ಬಾಗದಲ್ಲಿ ನೇವಿ ಹಾಗೂ ಮಿಲಿಟರಿ ಪಡೆಯ ಹೆಲಿಕಾಪ್ಟರ್ ಮೂಲಕ ಪರಿಶೀಲನೆ ಕೈಗೊಳ್ಳಲಾಗಿದೆ. ನದಿ ಅಂಚಿನ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಸುತ್ತಮುತ್ತಲಿನ ಮಾಹಿತಿ ಪಡೆಯಲಾಗುತ್ತಿದೆ.‌  ಸ್ಥಳದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಮೊಬೈಲ್ ಸಿಗ್ನಲ್‌ನಿಂದ ಕಾರ್ಯಾಚರಣೆಗೆ ಅಡ್ಡಿ ಆಗುವ ಆತಂಕದ ಹಿನ್ನಲೆ ಕಟ್ಟುನಿಟ್ಟಿನ ಕ್ರಮಕೂಗೊಳ್ಳಲಾಗಿದೆ. ನದಿ ಆಳದಲ್ಲಿರುವ ಲಾರಿ ಮೇಲೆತ್ತುವುದು ರಕ್ಷಣಾ ಕಾರ್ಯಪಡೆಗೆ ಬಹುದೊಡ್ಡ ಸವಾಲಾಗಿದೆ. 600ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News