×
Ad

ಭಟ್ಕಳ: ತಾಯಿ -ಮಗಳು ಆತ್ಮಹತ್ಯೆ

Update: 2024-07-16 10:13 IST

ಸಾಂದರ್ಭಿಕ ಚಿತ್ರ

ಭಟ್ಕಳ, ಜು.16: ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಂಡು ನೊಂದ ತಾಯಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲ್ವಡಿಕವೂರ್ ಗ್ರಾ.ಪಂ. ವ್ಯಾಪ್ತಿಯ ಸರ್ಪನಕಟ್ಟೆ ಎಂಬಲ್ಲಿ ಸೋಮವಾರ ಜರುಗಿದೆ.

ಸರ್ಪನಕಟ್ಟೆ ಗೋರಿಕಲ್ ಮನೆಯ ನಿವಾಸಿ ಕೃಷ್ಣಮ್ಮ ನಾರಾಯಣ ನಾಯ್ಕ(55) ಹಾಗೂ ಅವರ ಪುತ್ರಿ ಮಾದೇವಿ ದೊಡ್ಡಯ ನಾಯ್ಕ (37) ಆತ್ಮಹತ್ಯೆ ಮಾಡಿಕೊಂಡವರು.

ಸೋಮವಾರ ಮನೆಯ ಸದಸ್ಯರೆಲ್ಲರೂ ಮದುವೆ ಸಮಾರಂಭಕ್ಕೆ ಹೋಗಿದ್ದ ವೇಳೆ ಮಾದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ತಾಯಿ ಕೃಷ್ಣಮ್ಮ ಕೂಡ ಮನೆಗೆ ವಾಪಸ್ಸಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಾದೇವಿಯವರಿಗೆ ವಿವಾಹ ಆಗಿ 14 ವರ್ಷವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕಳೆದ 12 ವರ್ಷಗಳಿಂದ ಮಾದೇವಿ ತನ್ನ ತಾಯಿಯ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಮಾದೇವಿ, 'ತನ್ನ ಸಾವಿಗೆ ಯಾರೂ ಕೂಡ ಕಾರಣರಲ್ಲ' ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News