×
Ad

ಘಟಿಕೋತ್ಸವ: ಭಟ್ಕಳ ಅಂಜುಮನ್ ಕಾಲೇಜು ವಿದ್ಯಾರ್ಥಿ ಶ್ರೇಯಸ್ ನಾಯಕ್ ಗೆ 3 ಗೋಲ್ಡ್ ಮೆಡಲ್

Update: 2023-10-29 18:28 IST

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇದರ 73ನೇ ಘಟಿಕೋತ್ಸವ ಸಮಾರಂಭ ಅ.30ರಂದು ಧಾರವಾಡ ದಲ್ಲಿ ಜರುಗಲಿದ್ದು ಭಟ್ಕಳದ ಅಂಜುಮನ್ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಶ್ರೇಯಸ್ ಆರ್.ನಾಯಕ 3 ಗೋಲ್ಡ್ ಮೆಡಲ್ ಹಾಗೂ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನಗದು ಬಹುಮಾನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಅಂಜುಮನ್ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಪ್ರೋ.ಆರ್.ಎಸ್.ನಾಯಕ ರ ಪುತ್ರನಾಗಿರುವ ಶ್ರೇಯಸ್.ಆರ್.ನಾಯಕ 2022-23ನೇ ಸಾಲಿನಲ್ಲಿ ಅಂಜುಮನ್ ಪದವಿ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿಯನ್ನು ಪೂರ್ಣಗೊಳಿಸಿದ್ದಾರೆ.

ಅರ್ಥಶಾಸ್ತ್ರ(ಐಚ್ಚಿಕ) ವಿಷಯದಲ್ಲಿ ಮಲ್ಲಪ್ಪ ಸಂಕಾಲ್ ಗೋಲ್ಡ್ ಮೆಡಲ್, ಬಿ.ಎ.ಕನ್ನಡ (ಅಚ್ಚಿಕ) ಮಿರ್ಜಿ ಅನ್ನರಾವ್ ಗೋಲ್ಡ್ ಮೆಡಲ್, ಬಿ.ಎ ಕನ್ನಡ (ಐಚ್ಚಿಕ) ಮಲ್ಲಪ್ಪ ಲಿಂಗಪ್ಪ ಸ್ಮಾರಕ ಗೋಲ್ಡ್ ಮೆಡಲ್ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ.

ಇವರ ಯಶಸ್ಸಿಗೆ ಕಾಲೇಜು ಪ್ರಾಂಶುಪಾಲರು, ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News