×
Ad

ವ್ಯವಹಾರದಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಸ್ಮಾರ್ಟ್ ಆಗಿದ್ದಾರೆ: ಅನಿವಾಸಿ ಉದ್ಯಮಿ ಯುನೂಸ್ ಕಾಝಿಯಾ

Update: 2025-01-16 17:55 IST

ಭಟ್ಕಳ: ಜ.11ರಿಂದ ಐದು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ನಡೆದ ಇಂಡಿಯನ್ ನವಾಯತ್ ಫೋರಂ ನ ಐಎನ್‌ಎಫ್ ಟ್ರೇಡ್ ಎಕ್ಸಪೋ-2025 ಬುಧವಾರ ರಾತ್ರಿ ತೆರೆ ಕಂಡಿತು.

ಐದು ದಿನಗಳ ಕಾಲ ಭಟ್ಕಳದಲ್ಲಿ ನಡೆದ ಇಂಡಿಯನ್ ನವಾಯತ್ ಫೋರಂ (ಐಎನ್‌ಎಫ್) ಟ್ರೇಡ್ ಎಕ್ಸಪೋ-2025 ಅನ್ನು ಬುಧವಾರ ರಾತ್ರಿ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಸಮಾಪ್ತಿಗೊಂಡಿತು. ಅನೇಕ ವಿಶೇಷತೆ ಗಳಿಂದ ಕೂಡಿದ ಟ್ರೇಡ್ ಎಕ್ಸಪೋಗೆ ಸುಮಾರು 50,000 ಜನರು ಭೇಟಿ ನೀಡಿದ್ದು, ಸಮುದಾಯದಲ್ಲಿ ವ್ಯಾಪಾರೋತ್ಸಾಹ ವನ್ನು ಹೆಚ್ಚಿಸಲು ಪ್ರೇರಣೆಯಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅನಿವಾಸಿ ಉದ್ಯಮಿ ಹಾಗೂ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುನೂಸ್ ಕಾಝಿಯಾ, ಮಹಿಳೆಯರ ವ್ಯಾಪಾರ ಮತ್ತು ಉದ್ಯಮದಲ್ಲಿ ಆಸಕ್ತಿಯನ್ನು ಪ್ರಸ್ತಾಪಿಸಿದರು. "ಭಟ್ಕಳದ ಮಹಿಳೆಯರು ಪುರುಷರಿಗಿಂತ ವ್ಯಾಪಾರದಲ್ಲಿ ಹೆಚ್ಚು ಬುದ್ಧಿವಂತರಾಗಿದ್ದಾರೆ. ಅವರು ಅಮೇರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ತಮ್ಮದೇ ಸ್ವಂತ ವ್ಯಾಪಾರ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ" ಎಂದರು.

ಭಟ್ಕಳದ ನವಾಯತ್ ಸಮುದಾಯವು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ. "ಭಟ್ಕಳ ಬಿರಿಯಾನಿ, ತನ್ನ ವಿಶಿಷ್ಟ ಸುವಾಸನೆ ಮತ್ತು ರುಚಿಯಿಂದಲೇ ಜಗತ್ತಿನಾ ದ್ಯಂತ ಹೆಸರಾಗಿದೆ. ಇದನ್ನು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡಿ, ವ್ಯಾಪಾರಿಕವಾಗಿ ಬಳಸಿಕೊಳ್ಳಬೇಕಾಗಿದೆ" ಎಂದು ಅವರು ಸಲಹೆ ನೀಡಿದರು.

ಐಎನ್‌ಎಫ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಯುನೂಸ್ ಕಾಝಿಯಾ, "ಈ ಸಂಸ್ಥೆ ವ್ಯಾಪಾರಿಗಳಿಗೆ ಮಾರ್ಗದರ್ಶನ ಒದಗಿಸುವಲ್ಲಿ ಶ್ರೇಷ್ಠ ಕೆಲಸ ಮಾಡುತ್ತಿದೆ. ಮಾರುಕಟ್ಟೆ ಅವಶ್ಯಕತೆಗಳನ್ನು ಪೂರೈಸಲು ನವೀನ ಯೋಜನೆಗಳನ್ನು ರೂಪಿಸುವ ಮೂಲಕ ಸ್ಥಳೀಯ ಉದ್ಯಮವನ್ನು ಉತ್ತೇಜಿಸಬೇಕು," ಎಂದು ಅವರು ಕರೆ ನೀಡಿದರು.

ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಿಯಾಗಿದ್ದವರು ಈಗ ಭಟ್ಕಳದ ಕಡೆಗೆ ಮುಖ ಮಾಡುತ್ತಿದ್ದು ಅವರು ವ್ಯಾಪಾರದಲ್ಲಿ ತೊಡ ಗಿಸಿಕೊಳ್ಳುತ್ತಿದ್ದಾರೆ ಸ್ಥಳೀಯ ಮಹಿಳೆಯರು ಮನೆಯಲ್ಲಿದ್ದುಕೊಂಡೇ ತಮ್ಮ ವ್ಯಾಪಾರವನ್ನು ಮಾಡುತ್ತಿದ್ದಾರೆ ಅವರಿಗೆ ಮಾರ್ಗದರ್ಶನದ ಕೊರತೆಯಿದೆ ಐಎನ್‌ಎಫ್ ಸಂಸ್ಥೆಯು ವ್ಯಾಪಾರಕ್ಕೆ ಬೇಕಾದ ಎಲ್ಲ ರೀತಿಯ ಮಾರ್ಗದರ್ಶನ ವನ್ನು ನೀಡುವುದರ ಜೊತೆಗೆ ಉತ್ಪಾದನೆಗೆ ಮಾರುಕಟ್ಟೆಯನ್ನು ಒದಗಿಸುವ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಎಸ್.ಎಂ.ಅರ್ಷದ್ ಮೊಹತೆಶಮ್, ಭಟ್ಕಳದಲ್ಲಿ ಟ್ರೇಡ್ ಎಕ್ಸಪೋಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಐವತ್ತು ಸಾವಿರಕ್ಕೂ ಹೆಚ್ಚು ಜನರು ಐದು ದಿನಗಳಲ್ಲಿ ಎಕ್ಸಪೋಗೆ ಸಂದರ್ಶಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳೂರು ಉಡುಪಿ ಬೆಂಗಳೂರು ನಗರಗಳಲ್ಲಿ ಎಕ್ಸಪೋ ಆಯೋಜಿಸುವ ಯೋಜನೆ ಇದೆ ಎಂದರು.

ರಿಬ್ಕೋ ಕಂಪನಿಯ ರುಮೇಝ್ ಶಾಬಂದ್ರಿ, ಮಾಝ್ ಜುಕಾಕೋ, ಮುಯೀದ್ ಕಾಡ್ಲಿ, ಸೈಯ್ಯದ್ ಗುಫ್ರಾನ್ ಲಂಕಾ ಮತ್ತಿತರರು ಇದ್ದರು.

ಭಟ್ಕಳದ ವ್ಯಾಪಾರಿಕೆ ಸಮುದಾಯದ ಸಾಂಸ್ಕೃತಿಕ ಹಾಗೂ ಆರ್ಥಿಕ ಪ್ರಗತಿಗೆ ಈ ಎಕ್ಸಪೋ ನೂತನ ಹಾದಿ ತೆರೆದಿದೆ. ಉದ್ಯಮಿಗಳ ನಡುವೆ ಜಾಗೃತಿ ಮೂಡಿಸುವ ಜೊತೆಗೆ, ಜಾಗತಿಕ ಮಾರುಕಟ್ಟೆಗಳಿಗೆ ದಾರಿ ತೋರಿಸುವ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಹೊಸ ತಂತ್ರಜ್ಞಾನಗಳ ಪ್ರದರ್ಶನ, ಮತ್ತು ವ್ಯಾಪಾರಿಕ ಬೋಧನೆ ಕಾರ್ಯಾಗಾರಗಳು ಜನರಿಗೆ ಮಾದರಿ ಪ್ರೇರಣೆಯಾಗಿ ಕಾರ್ಯನಿರ್ವಹಿಸಿತು.

ಭಟ್ಕಳದ ನವಾಯತ್ ಸಮುದಾಯವು ತನ್ನ ವ್ಯಾಪಾರ ಚಟುವಟಿಕೆಗಳಲ್ಲಿ ಹೊಸ ಪರಿಕಲ್ಪನೆಗಳನ್ನು ರೂಪಿಸಿ, ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಶಕ್ತಿ ಪ್ರದರ್ಶಿಸಲು ಈ ಎಕ್ಸಪೋ ಒಂದು ಉತ್ಕೃಷ್ಟ ವೇದಿಕೆ ಒದಗಿಸಿದೆ. ಐಎನ್‌ಎಫ್ ಟ್ರೇಡ್ ಎಕ್ಸಪೋ-2025 ಯಶಸ್ಸು, ಭಟ್ಕಳದ ವ್ಯಾಪಾರಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲು ಹೊಸ ಪ್ರೇರಣೆಯಾಗಿದೆ.

ಈ ಐದು ದಿನಗಳಲ್ಲಿ ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದ 120ಕ್ಕೂ ಹೆಚ್ಚು ವಿತರಕರು, ವ್ಯಾಪಾರಿಗಳಿಗೆ ಮತ್ತು ಗ್ರಾಹಕ ರಿಗೆ ತಮ್ಮ ಉತ್ಪನ್ನ ಮತ್ತು ಸೇವೆಗಳನ್ನು ಪ್ರಚುರಪಡಿಸಿದರು. ಮಳಿಗೆಗಳಿಂದ ಹಿಡಿದು, ಹೊಟ್ಟೆ ಬಡಿಸುವ ಆಹಾರ ಮಳಿಗೆಗಳವರೆಗೆ ಈ ವೇದಿಕೆ ವ್ಯಾಪಾರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉತ್ತಮ ಸಂಯೋಜನೆ ನೀಡಿತು.










Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News