ವಸತಿ ನಿಲಯ ಬದುಕಿನ ಜೀವಾನಾನುಭ ಕಲಿಸಿಕೊಡುತ್ತದೆ: ಎಂ.ಆರ್. ಮಾನ್ವಿ
ಭಟ್ಕಳ: ವಸತಿ ನಿಲಯಗಳಲ್ಲಿ ಎಲ್ಲ ಧರ್ಮಿಯ ವಿದ್ಯಾರ್ಥಿಗಳು ಕೂಡಿ ಬಾಳುವುದನ್ನು ಕಲಿತು ತಮ್ಮ ಜೀವನಾನುಭವ ವನ್ನು ರೂಪಿಸಿಕೊಳ್ಳುತ್ತಾರೆ. ಇದು ಒಂದು ರೀತಿಯ ಮಿನಿ ಭಾರತ ಇದ್ದಂತೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಹೇಳಿದರು.
ಅವರು ಶುಕ್ರವಾರ ಸಂಜೆ ಸಾಗರ ರಸ್ತೆಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಮಾಸಿಕ ಕಿಟ್ ವಿತರಿಸಿ ಮಾತನಾಡಿದರು.
ಪಾಲಕರು ನಿಮ್ಮ ಭವಿಷ್ಯ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದ್ದಾರೆ. ಸರ್ಕಾರ ನಿಮ್ಮ ಭವಿಷ್ಯಕ್ಕಾಗಿ ಸಾಕಷ್ಟು ಹಣ ಕರ್ಚು ಮಾಡುತ್ತಿದೆ. ನಿಮ್ಮನ್ನು ನಂಬಿಕೊಂಡಿರುವ ನಿಮ್ಮ ಮಾತಾಪಿತರಿಗೆ ಯಾವತ್ತೂ ಮೋಸಮಾಡಬೇಡಿ. ಇಲ್ಲಿ ನಿಮಗೆ ಸಾಕಷ್ಟು ಸಮಯಾವಕಾಶ ಲಭಿಸಿದ್ದು ಅದನ್ನು ಸದೂಪಯೋಗಿಸಿಕೊಂಡು ಉತ್ತಮ ಅಂಕಗಳನ್ನು ಪಡೆದುಕೊಂಡು ಭವಿಷ್ಯ ದಲ್ಲಿ ಮುನ್ನೆಡೆಯಿರಿ ಎಂದು ಅವರು ಕರೆ ನೀಡಿದರು.
ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತೀರ್ಣಾಧಿಕಾರಿ ಹಾಗೂ ವಸತಿ ನಿಲಯದ ಪ್ರಭಾರಿ ಶಮ್ಸುದ್ದೀನ್ ಮಾತನಾಡಿ, ಸರ್ಕಾರದ ಎಲ್ಲ ಸೌಲಭ್ಯಗಳನ್ನು ನಿಮಗೆ ಒದಗಿಸುವಲ್ಲಿ ನಾನು ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ನಿಮಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಉತ್ತಮ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ಸಮಯವನ್ನು ದುರೂಪಗಿಸದೆ ಚೆನ್ನಾಗಿ ಅಭ್ಯಾಸ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ವಿದ್ಯಾರ್ಥಿ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ ವಂದಿಸಿದರು.