×
Ad

ವಿನ್ ಟೀಮ್ ಗ್ಲೋಬಲ್‌ನ ಭಟ್ಕಳ ಶಾಖಾ ಕಚೇರಿ ಉದ್ಘಾಟನೆ

Update: 2025-06-13 21:03 IST

ಭಟ್ಕಳ: ವಿನ್ ಟೀಮ್ ಗ್ಲೋಬಲ್‌ನ ಭಟ್ಕಳ ಶಾಖಾ ಕಚೇರಿಯನ್ನು ಗುರುವಾರ ಭಟ್ಕಳ ಜಮಾತುಲ್ ಮುಸ್ಲಿಮೀನ್ ನ ಪ್ರಧಾನ ಕಾಝಿ ಮೌಲಾನ ಅಬ್ದುಲ್ ರಬ್ ಖತೀಬಿ ನದ್ವಿ ಅವರು ಪ್ರಾರ್ಥನೆ ನೆರವೇರಿ ಸುವುದರ ಮೂಲಕ ಉದ್ಘಾಟಿಸಿದರು. ಹಿರಿಯ ಎಂಜಿನಿಯರ್ ಅರ್ಷದ್ ಕಾಡ್ಲಿ ಅವರು ರಿಬ್ಬನ್ ಕತ್ತರಿಸಿ ಕಚೇರಿಯ ಉದ್ಘಾಟನೆಗೆ ಚಾಲನೆ ನೀಡಿದರು.

ವಿನ್ ಟೀಮ್ ಗ್ಲೋಬಲ್ ಎಂಬ ಈ ಮಾಹಿತಿ ತಂತ್ರಜ್ಞಾನ ಸಲಹಾ ಮತ್ತು ಎಂಜಿನಿಯರಿಂಗ್ ಕಂಪನಿಯನ್ನು 2004-08ರ ಬ್ಯಾಚ್‌ನ ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ ವಸೀಮ್ ಅಹ್ಮದ್ ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿ ನೋಂದಾಯಿತ ಕಚೇರಿಯನ್ನು ಹೊಂದಿರುವ ಈ ಕಂಪನಿಯ ಭಟ್ಕಳ ಶಾಖಾ ಕಚೇರಿಯು, ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಮ್ಯಾನೇಜ್‌ಮೆಂಟ್‌ನ ಹಳೆ ವಿದ್ಯಾರ್ಥಿಗಳಾದ ಎಂಜಿನಿಯರ್‌ಗಳಿಗೆ ಕಾರ್ಯನಿರ್ವಹಣಾ ಕೇಂದ್ರವಾಗಿದೆ.

ಈ ಕಚೇರಿಯು ಆರಂಭದಲ್ಲಿ ಭಟ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಸರ್ವಿಸ್‌ನೌ ತಂತ್ರಜ್ಞಾನ ಕಲಿಯುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಸ್ವಯಂ-ಪರಿಶೀಲಿತ ಪ್ರಮಾಣೀಕರಣ ಪರೀಕ್ಷೆಗೆ ಉತ್ತಮ ವೈ-ಫೈ, ಬೆಳಕಿನ ವ್ಯವಸ್ಥೆ ಮತ್ತು ಆಸನಗಳ ಸೌಲಭ್ಯವನ್ನು ಒದಗಿಸುವ ಗುರಿಯೊಂದಿಗೆ ಸ್ಥಾಪನೆಯಾಗಿತ್ತು. ಈಗ ಇದು ಕಂಪನಿಯ ಎಂಜಿನಿಯರ್‌ಗಳಿಗೆ ಸಕ್ರಿಯ ಕಾರ್ಯಕ್ಷೇತ್ರವಾಗಿ ರೂಪುಗೊಂಡಿದೆ.

ಉದ್ಘಾಟನಾ ಸಮಾರಂಭದಲ್ಲಿ ಅಂಜುಮನ್ ಕಲಾ, ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕೆ. ಸಿ. ನಝೀರ್ ಅಹ್ಮದ್, ಅಂಜುಮನ್ ಎಂಜಿನಿಯರಿಂಗ್ ಕಾಲೇಜಿನ ತರಬೇತಿ ಮತ್ತು ಉದ್ಯೋಗಾಧಿ ಕಾರಿ ಶ್ರೀಶೈಲ್ ಭಟ್, ಎಂಜಿನಿಯರ್ ಸಾದಿಕ್ ಅಹ್ಮದ್ ಸೇರಿದಂತೆ ವಿನ್ ಟೀಮ್ ಗ್ಲೋಬಲ್‌ನ ಸಿಬ್ಬಂದಿ ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.

ಈ ಕಚೇರಿಯ ಸ್ಥಾಪನೆಯು ಭಟ್ಕಳದ ಯುವ ಎಂಜಿನಿಯರ್‌ಗಳಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮುನ್ನಡೆ ಯಲು ಪ್ರಮುಖ ವೇದಿಕೆಯಾಗಲಿದೆ ಎಂದು ಕಂಪನಿಯ ಸ್ಥಾಪಕ ವಸೀಮ್ ಆಹ್ಮದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News