×
Ad

ಮೌಲ್ಯಯುತ ಶಿಕ್ಷಣದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯ: ಗೋಪಾಲಕೃಷ್ಣ ಶಂಕರ್ ಹೆಗಡೆ

Update: 2025-06-19 18:36 IST

ಭಟ್ಕಳ: “ಬದುಕು ಕಟ್ಟುವ ಮೌಲ್ಯಗಳನ್ನು ಒಳಗೊಂಡ ಶಿಕ್ಷಣದ ಅವಶ್ಯಕತೆ ಇದೆ. ಇದನ್ನು ಗುರುಗಳಿಂದ ವಿದ್ಯಾರ್ಥಿಗಳು ಸಂಪಾದಿಸಿಕೊಳ್ಳಬೇಕು,” ಎಂದು ಶಿರಾಲಿಯ ಜನತಾ ವಿದ್ಯಾಲಯದ ಪ್ರಾಂಶುಪಾಲ ಗೋಪಾಲಕೃಷ್ಣ ಶಂಕರ್ ಹೆಗಡೆ ಹೇಳಿದರು.

ಅವರು ಭಟ್ಕಳ ತಾಲೂಕಿನ ಜಾಲಿಯ ಶ್ರೀ ವೆಂಕಟೇಶ್ವರ ನಾಮಧಾರಿ ವಿದ್ಯಾ ವರ್ಧಕ ಸಭಾಭವನದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಟ್ಕಳ ಆಯೋಜಿಸಿದ್ದ 2024-25ನೇ ಸಾಲಿನ ಕಾಲೇಜು ವಾರ್ಷಿ ಕೋತ್ಸವ ಮತ್ತು ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಡಿಸಿ ಸದಸ್ಯ ರಮೇಶ ಗೊಂಡ, ಸೋಮಯ್ಯಗೊಂಡ, ಮಂಜಪ್ಪ ನಾಯ್ಕ್, ಮತ್ತು ರಮೇಶ ನಾಯ್ಕ್ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ನಾಗೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, “ಕಾಲೇಜಿನ ಸೌಲಭ್ಯಗಳು ಎಲ್ಲಾ ಬಡ ವಿದ್ಯಾರ್ಥಿಗಳಿಗೆ ದೊರೆಯಬೇಕು. ಸಚಿವ ಮಂಕಾಳ ವೈದ್ಯ ಅವರು ಕಾಲೇಜಿನ ಕಟ್ಟಡಕ್ಕೆ 1.5 ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಅವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಕಾಲೇಜನ್ನು ಅತ್ಯುತ್ತಮವಾಗಿ ರೂಪಿಸಬಹುದು,” ಎಂದರು.

ಅಣ್ಣಪ್ಪ ನಾಯ್ಕ್ ನಿರ್ವಹಿಸಿದರೆ, ಸುರೇಶ್ ಮೆಟಗಾರ ಕಾರ್ಯಕ್ರಮದ ಮುನ್ನೂಟವನ್ನು ಪ್ರಸ್ತುತಪಡಿ ಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕುಮಾರಿ ರೂಪಾ ನಾಯ್ಕ್ ಸ್ವಾಗತ ಗೀತೆ ಹಾಡಿದರು, ರೋಹಿತ್ ನಾಯ್ಕ್ ವಂದನಾರ್ಪಣೆ ಮಾಡಿದರು, ಮತ್ತು ಕುಮಾರಿ ವಿಜೇತ ನಾಯ್ಕ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News