ಭಟ್ಕಳ: ಮೊಗೇರ್ ಕೇರಿಯಲ್ಲಿ ದೋಣಿ ದುರಂತ; ಮೀನುಗಾರ ಮೃತ್ಯು
Update: 2025-07-14 18:13 IST
ಭಟ್ಕಳ: ತಾಲೂಕಿನ ಬೆಳಕೆ ಅಳಿವೆಕೋಡಿಯ ಮೊಗೇರ್ ಕೇರಿಯಲ್ಲಿ ಸೋಮವಾರ ನಡೆದ ದೋಣಿ ದುರಂತದಲ್ಲಿ ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತ ಮೀನುಗಾರ ಮಾದೇವ ಗೊಯ್ದ ಮೊಗೇರ್ (56) ಎಂದು ಗುರುತಿಸಲಾಗಿದೆ.
ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದ ದೋಣಿ ಮುಳುಗಿದ್ದು, ಈ ವೇಳೆ ಮಾದೇವ ಗೊಯ್ದ ಸಾವನ್ನಪ್ಪಿ ದ್ದಾರೆ. ದೋಣಿಯೊಂದಿಗೆ ಬಲೆಯೂ ದಡಕ್ಕೆ ಬಂದು ಬಿದ್ದಿದೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮೀನುಗಾರಿಕೆ ಸಹಾಯಕ ನಿರ್ದೇಶಕ ರೇಣುಕಾಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಭಟ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ದುರಂತದಿಂದ ಸ್ಥಳೀಯ ಮೀನುಗಾರ ಸಮುದಾಯದಲ್ಲಿ ಆತಂಕ ಮೂಡಿದ್ದು, ಘಟನೆಯ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.