×
Ad

ಶಿರೂರಿನ‌ ಘಟನೆಯಲ್ಲಿ ರಾಜಕೀಯ ಬೇಡ: ಶಾಸಕ ಆರ್.ವಿ ದೇಶಪಾಂಡೆ

Update: 2024-07-21 14:26 IST

ಅಂಕೋಲಾ: ಶಿರೂರಿನ‌ ಘಟನೆಯಲ್ಲಿ ರಾಜಕೀಯ ಮಾಡಬಾರದು ಎಂದು ಶಾಸಕ ಆರ್.ವಿ ದೇಶಪಾಂಡೆ ಹೇಳಿದ್ದಾರೆ.

ಶಿರೂರಿನ ಗುಡ್ಡ ಕುಸಿದ ಸ್ಥಳಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ಈ ದುರಂತದಲ್ಲಿ ಅನಾವಶ್ಯಕ ಚರ್ಚೆ ಮಾಡಬಾರದು. ಈಗಾಗಲೇ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಕಾಣೆಯಾದ ಅರ್ಜುನ್ ಅವರ ಕುಟುಂಬದವರು ತಿಳಿಸಿದ ಲೊಕೋಷನ್ ನಲ್ಲಿಯೇ ಶೋಧ ಕಾರ್ಯ ನಡೆಯುತ್ತಿದೆ‌ ಎಂದರು.

ವೈಜ್ಞಾನಿಕವಾಗಿ ಅಭಿವೃದ್ಧಿ ಕಾರ್ಯ ಮಾಡಬೇಕು.‌ ಅದಕ್ಕೆ ಸೂಕ್ತ ಚರ್ಚೆಯ ಅವಶ್ಯಕತೆ ಇದೆ. ದುರಂತದಲ್ಲಿ ಈಗಾಗಲೇ ಎಂಟು ಜನರು ಮೃತರಾಗಿದ್ದಾರೆ. ಶೋಧ ಕಾರ್ಯ ಪಕ್ಷಾತೀತವಾಗಿ ನಡೆಯುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News