×
Ad

ಮಹಿಳೆಯ ಅನುಮಾನಾಸ್ಪದ ಸಾವು; ದೂರು ದಾಖಲು

Update: 2023-10-10 19:48 IST

ಭಟ್ಕಳ: ಪತಿಯ ಮನೆಯ ತೋಟದ ಬಾವಿಯಲ್ಲಿ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಈ ಕುರಿತಂತೆ ಮೃತ ಮಹಿಳೆಯ ಸಹೋದರ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು ವರದಿಯಾಗಿದೆ.

ಭಟ್ಕಳ ತಾಲೂಕಿನ ಕಟಗಾರಕೊಪ್ಪದಲ್ಲಿ ಗಂಡನ ಮನೆಯ ತೋಟದ ಬಾವಿಯೊಂದರಲ್ಲಿ ಲಕ್ಷ್ಮೀ ವೆಂಕಟೇಶ ಗೊಂಡ(32) ಎಂಬುವವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಈಕೆ ಕಳೆದ ಒಂದುವರೆ ವರ್ಷದ ಹಿಂದೆ ಮುರ್ಡೇಶ್ವರದ ಕಟಗಾರಕೊಪ್ಪದ ಅತ್ತಿಬಾರ ಗ್ರಾಮದ ವೆಂಕಟೇಶ ರಾಮಾ ಗೊಂಡ ಜೊತೆ ಮದುವೆ ಆಗಿದ್ದರು. ರವಿವಾರ ರಾತ್ರಿ 7 ರಿಂದ 7.30 ರ ಸುಮಾರಿಗೆ ಅತ್ತಿಬಾರದ ತೋಟದ ಬಾವಿಯಲ್ಲಿ ಬಿದ್ದು ಮೃತ ಪಟ್ಟಿದ್ದಾಳೆ. ಆದರೆ ತನ್ನ ಅಕ್ಕ ಯಾವ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ನನಗೆ ಅನುಮಾನವಿದ್ದು, ಸಾವಿಗೆ ನಿಜವಾದ ಕಾರಣವನ್ನು ತಿಳಿಯಲು ತನಿಖೆ ಮಾಡಿ ಮಾಡಬೇಕೆಂದು ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ಮೃತ ಮಹಿಳೆಯ ಸೋಹದರ ಜನ್ನ ತಿಮ್ಮಪ್ಪ ಗೊಂಡ ದೂರು ದಾಖಲಿಸಿದ್ದಾರೆ.

ತನ್ನ ಪತ್ನಿಯ ಸಾವಿನ ವಿಚಾರ ತಿಳಿದ ವೆಂಕಟೇಶ್ ರಾಮಾ ಗೊಂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಆತನ ಕುಟುಂಬದವರು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಮಾಹಿತಿ ಇದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ತಹಸೀಲ್ದಾರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಸಿಪಿಐ ಸಂತೋಷ ಕಾಯ್ಕಿಣಿ, ಪಿಎಸೈ ಮಂಜುನಾಥ ಹಾಗೂ ಪೋಲೀಸ ಸಿಬ್ಬಂದಿಗಳು ಅತ್ತಿಬಾರ ಗ್ರಾಮದ ಮೃತ ಮಹಿಳೆಯ ಮನೆಗೆ ತೆರಳಿ ಸ್ಥಳ ಪರಿಶೀಲನೆ ಮಾಡಿ ಪಂಚನಾಮೆಯನ್ನು ನಡೆಸಿದ್ದು. ಮೃತ ದೇಹವನ್ನು ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾಗಿ ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News