ಹರಪನಹಳ್ಳಿ | ನಗರಸಭೆಯ ಆಡಳಿತಾಧಿಕಾರಿಯಾಗಿ ಕವಿತಾ ಎಸ್.ಮನ್ನಿಕೇರಿ ಅಧಿಕಾರ ಸ್ವೀಕಾರ
Update: 2025-12-27 12:23 IST
ಹರಪನಹಳ್ಳಿ : ತಾಲ್ಲೂಕಿನ ನಗರಸಭೆಯ ಆಡಳಿತಾಧಿಕಾರಿಯಾಗಿ ವಿಜಯನಗರ ಜಿಲ್ಲಾಧಿಕಾರಿಯಾದ ಕವಿತಾ ಎಸ್.ಮನ್ನಿಕೇರಿಯವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ನಗರಸಭೆಯ ಆಡಳಿತ ಮಂಡಳಿಯ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿಯವರನ್ನು ನೇಮಕ ಮಾಡಿದ ಹಿನ್ನಲೆಯಲ್ಲಿ ಇಲ್ಲಿಯ ಪೌರಾಯುಕ್ತ ರೇಣುಕಾ ಎಸ್.ದೇಸಾಯಿ ಅವರು ವಿಜಯನಗರ ಜಿಲ್ಲಾ ಕೇಂದ್ರಕ್ಕೆ ತೆರಳಿ ಡಿಸಿಯವರಿಗೆ ಆಡಳಿತಾಧಿಕಾರಿ ಅಧಿಕಾರ ಹಸ್ತಾಂತರದ ನಿಯಮಗಳನ್ನು ಪೂರ್ಣಗೊಳಿಸಿದರು.