ಹರಪನಹಳ್ಳಿ | ವಿವಿಧ ಬೇಡಿಕೆಗಳ ಈಡೇರಿಕೆಗೆ ಕುರುಬ ಸಮಾಜದಿಂದ ಸಚಿವ ಬೈರತಿ ಸುರೇಶ್‌ಗೆ ಮನವಿ
Update: 2025-12-30 15:33 IST
ಹರಪನಹಳ್ಳಿ: ಪಟ್ಟಣದ ಕನಕ ಭವನದ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ತಮ್ಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿ ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕೆಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ತಾಲೂಕು ಕುರುಬ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಗೋಣಿಬಸಪ್ಪ, ಉಪಾಧ್ಯಕ್ಷ ವಸಂತಪ್ಪ, ಕಾರ್ಯದರ್ಶಿ ಪರಶುರಾಮ, ಗಣೇಶ್ ಪೈಲ್ವಾನ್, ಜೋಗಿನ ಭರತೇಶ್, ಬಸವರಾಜ್ ಹುಲಿಯಪ್ಪನವರ್, ರಮೇಶ್ ಸೇರಿ ಇತರರು ಉಪಸ್ಥಿತರಿದ್ದರು.