×
Ad

ಹೊಸಪೇಟೆ | 'ಮನೆಗೊಂದು ಗ್ರಂಥಾಲಯ' ಯೋಜನೆಗೆ ಚಾಲನೆ

Update: 2026-01-15 18:41 IST

ಹೊಸಪೇಟೆ: "ಪುಸ್ತಕಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಾಗೂ ಓದುವ ಸಂಸ್ಕೃತಿಯನ್ನು ಮನೆಮನಗಳಲ್ಲಿ ಬೆಳೆಸಲು ಕರ್ನಾಟಕ ಪುಸ್ತಕ ಪ್ರಾಧಿಕಾರವು 'ಮನೆಗೊಂದು ಗ್ರಂಥಾಲಯ' ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಪ್ರಾಧಿಕಾರದ ಅಧ್ಯಕ್ಷೆ ಡಾ.ಮಾನಸ ತಿಳಿಸಿದರು.

ನಗರದ ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಮಠದ ಆವರಣದಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರ ಹಾಗೂ ವಿಜಯನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಮನೆಗೊಂದು ಗ್ರಂಥಾಲಯ" ಸದಸ್ಯರ ನೇಮಕ ಪ್ರಮಾಣಪತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ನಿಷ್ಠಿ ರುದ್ರಪ್ಪ ಮಾತನಾಡಿ, ಈ ಯೋಜನೆಯ ಮೂಲಕ ರಾಜ್ಯದ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸಲು ಪ್ರಾಧಿಕಾರ ಮುಂದಾಗಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಅವರು, ಪುಸ್ತಕ ಸಂಸ್ಕೃತಿಯು ಸಮಾಜದ ಪ್ರಗತಿಯ ಪ್ರತಿಬಿಂಬವಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಜಯನಗರ ಜಿಲ್ಲೆಯ ಮನೆಗೊಂದು ಗ್ರಂಥಾಲಯ ಸಂಚಾಲಕರನ್ನಾಗಿ ಎಂ.ಉಮಾಮಹೇಶ್ವರ, ಹುಲಿಯಪ್ಪನವರ ಬಸವರಾಜ ಹರಪನಹಳ್ಳಿ, ವೀರಮ್ಮ ಹಿರೇಮಠ ಹೊಸಪೇಟೆ, ಎಲ್.ಹಾಲ್ಯಾನಾಯಕ, ಬಿ.ಕಿರಣ್ ಕುಮಾರ್, ಎಸ್.ಎಂ.ರಿಯಾಝ್‌ ಪಾಷಾ ಕೂಡ್ಲಿಗಿ, ಗಣೇಶ ಹವಾಲ್ದಾರ್ ಹಗರಿಬೊಮ್ಮನಹಳ್ಳಿ, ಬಿ.ಹೆಚ್. ಶರಣಪ್ಪ ಕೊಟ್ಟೂರು, ಬಿ.ಕೆ. ಮುರಳೀಧರ, ಇವರುಗಳನ್ನು ಸದಸ್ಯರನ್ನಾಗಿ ನೇಮಕ ಮಾಡಿ ಪ್ರಮಾಣ ಪತ್ರ ನೀಡಲಾಯಿತು.

ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಡಾ.ಗುಂಡಿ ಮಾರುತಿ, ಹಿರಿಯ ಸಾಹಿತಿ ಟಿ.ಯಮನಪ್ಪ ಹಾಗೂ ಶೋಭಾ ಶಂಕರಾನಂದ ಉಪಸ್ಥಿತರಿದ್ದರು.

ಎಲ್.ಹಾಲ್ಯಾನಾಯಕ ಸ್ವಾಗತಿಸಿದರು, ವೀರಮ್ಮ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು ಮತ್ತು ಉಮಾಮಹೇಶ ವಂದನಾರ್ಪಣೆ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News