×
Ad

ಹೊಸಪೇಟೆ | ಯುವಕ ಕಾಣೆ : ಪ್ರಕರಣ ದಾಖಲು

Update: 2025-09-16 22:08 IST

ವಿಜಯನಗರ (ಹೊಸಪೇಟೆ), ಸೆ.16: ಹೊಸಪೇಟೆ ನಗರದ ದೇವಾಂಗಪೇಟೆ ನಿವಾಸಿ ರಘುನಂದನ್ (28) ಎಂಬ ವ್ಯಕ್ತಿ ಬೈಕ್‌ನಲ್ಲಿ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ : ಕಾಣೆಯಾದ ರಘುನಂದನ್‌ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಕಪ್ಪು ಮೈಬಣ್ಣ ಹೊಂದಿದ್ದು ಕನ್ನಡ ಮಾತನಾಡುತ್ತಾನೆ. ಮನೆಯಿಂದ ಹೊರಡುವಾಗ ಹಸಿರು ಬಣ್ಣದ ತುಂಬತೋಳಿನ ಅಂಗಿ ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾನೆ. ಬಲಗೈಯಲ್ಲಿ ಸಂಸ್ಕೃತದಲ್ಲಿ “ಓಂ ಗಣೇಶ” ಟ್ಯಾಟೂ ಇದೆ.

ಈ ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಲ್ಲಿ ಪಟ್ಟಣ ಪೊಲೀಸ್ ಠಾಣೆ ಪಿಐ 08394-224033, 948080574, ಡಿಎಸ್‌ಪಿ 08394-224204, 9480805720 ಹಾಗೂ ಎಸ್‌ಪಿ 9480805700 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News