×
Ad

ನೇಪಾಳದಲ್ಲಿ ಸಿಲುಕಿದ ವಿಜಯನಗರ, ಬಳ್ಳಾರಿ ಜಿಲ್ಲೆಯ 22ಕ್ಕೂ ಹೆಚ್ಚು ಮಂದಿ

Update: 2025-09-11 14:59 IST

ಹೊಸಪೇಟೆ : ಹಿಂಸಾತ್ಮಕ ಪ್ರತಿಭಟನೆಯಿಂದ ನಲುಗಿರುವ ನೇಪಾಳದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆ, ಬಳ್ಳಾರಿ ಜಿಲ್ಲೆ ಸೇರಿದಂತೆ 22ಕ್ಕೂ ಅಧಿಕ ಜನ  ಸಿಲುಕಿ ಸ್ವದೇಶಕ್ಕೆ  ಬರಲು ಪರದಾಟ ಅನುಭವಿಸುವಂತಾಗಿದೆ.

 ಹೊಸಪೇಟೆಯ ಎಂಪಿ ಪ್ರಕಾಶ್ ನಗರದ ಗಿರೀಶ್, ರೇಖಾ, ಲೀನಿಸ್, ನಿತಾಶ, ರೇಖಾ, ಪುರುಷೋತ್ತಮ, ಸುಮ, ರೂಪ, ರಾಹುಲ್ ಮತ್ತು ಗೀತಾಂಜಲಿ ಇವರೆಲ್ಲ ಒಂದೇ ಕುಟುಂಬದವರು. ಪ್ರದೀಪ್ ಮತ್ತು ಮಲ್ಲಿಕಾರ್ಜುನ್ ಹೊಸಪೇಟೆಯ ರಾಣಿಪೇಟೆಯ ಮೂಲದವರು. ಉಳಿದವರು ಜಿಂದಾಲ್ ನೌಕರರು ಎಂಬ ಮಾಹಿತಿ ಸದ್ಯಕ್ಕೆ ಲಭ್ಯ ಆಗಿದೆ. ಎಲ್ಲರೂ ಸುರಕ್ಷಿತವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಅಂತ ಹೇಳಲಾಗುತ್ತಿದೆ‌.

ನೇಪಾಳದ ಪೋಕ್ರಾ ನಗರದಿಂದ ರಾಜಧಾನಿ ಕಠ್ಮಂಡುವಿಗೆ ಎರಡು ದಿ‌ನದ ಹಿಂದೆ ತೆರಳಿದ್ದ ಇವರನ್ನು ಮಿಲಿಟರಿ ಸಹಾಯದಿಂದ ಭಾರತಕ್ಕೆ ಬರಲು ತಯಾರಿ ನೆಡೆಸಲಾಗುತ್ತಿದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News