ಸೆ.13ರಂದು ಹೊಸಪೇಟೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ
ವಿಜಯನಗರ(ಹೊಸಪೇಟೆ) : ಹೊಸಪೇಟೆ ನಗರದ 110/11ಕೆವಿ ಸಂಕ್ಲಾಪುರ ವಿದ್ಯತ್ ವಿತರಣಾ ಕೇಂದ್ರದಲ್ಲಿ ಸೆ.13 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದುರಸ್ತಿ ಕಾರ್ಯಗಳನ್ನು ಹಮ್ಮಿಕೊಂಡಿರುವುದರಿಂದ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೊಸಪೇಟೆ ಜೆಸ್ಕಾಂ ಕಾರ್ಯ ಮತ್ತು ಪಾಲನಾ ನಗರ ವಿಭಾಗದ ಕಾರ್ಯನಿರ್ವಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ವ್ಯಾಪ್ತಿಗೆ ಒಳಪಡುವ ಸುತ್ತ ಮುತ್ತಲಿನ ಪ್ರದೇಶಗಳಾದ ಬಳ್ಳಾರಿ ರೋಡ್, ಸಿರ್ಸಿನಕಲ್ಲು, ನಿಯಾಜಿ ನಗರ, ಅಜಾದ್ ನಗರ, ಈಶ್ವರ ನಗರ, ಜೆ.ಪಿ.ನಗರ, ಅರವಿಂದ ನಗರ, ಬಸ್ ಡಿಪೋ ಏರಿಯಾ, ಸಾಯಿ ಕಾಲೋನಿ, ಕೊಂಡನಾಯಕನಹಳ್ಳಿ, ಅನಂತಶಯನಗುಡಿ, ಸಂಕ್ಲಾಪುರ ಇಂಡಸ್ಟ್ರಿಯಲ್ ಏರಿಯಾ, ಕರ್ನಾಟಕ ಆಯಿಲ್ ಫ್ಯಾಕ್ಟರಿ ಏರಿಯಾ, ಕಾರಿಗನೂರ, ವಿನಾಯಕ ನಗರ, ಆಕಾಶವಾಣಿ, ಪಾರ್ವತಿ ನಗರ, ವಾಲ್ಮೀಕಿ ನಗರ, ಸಂಡೂರು ರೋಡ್, ರಾಮಾ ಟಾಕೀಸ್ ಏರಿಯಾ, ಚಲವಾದಿ ಕೇರಿ, ಉಕ್ಕಡಕೇರಿ, ಚಿತ್ರಕೇರಿ, ಮ್ಯಾಸಕೇರಿ, ಬಾಣದಕೇರಿ, ಜಂಬುನಾಥಹಳ್ಳಿ, ಮಾರುತಿ ಕಾಲೋನಿ, ಸಂಕ್ಲಾಪುರ, ಸಾಯಿಬಾಬಾ ಗುಡಿ ಏರಿಯಾ, ಡ್ಯಾಮ್ ರೋಡ, ಟಿಬಿಡ್ಯಾಮ್, ನಿಶಾನಿ ಕ್ಯಾಂಪ್, ಇ.ವಿ.ಕ್ಯಾಂಪ್, ಎನ್.ಸಿ ಕಾಲೋನಿ, ಗಾಂಧಿ ಕಾಲೋನಿ, ವಿವೇಕಾನಂದ ನಗರ, ಎ.ಪಿ.ಎಂ.ಸಿ ಏರಿಯಾ, ಹರಿಹರ ರೋಡ್, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಎಸ್.ಪಿ.ಕಾರ್ಯಾಲಯ, ಚಪ್ಪರದಹಳ್ಳಿ, 100 ಹಾಸಿಗೆ ಆಸ್ಪತ್ರೆ, ಎಂ.ಜೆ.ನಗರ, ಎಸ್.ಆರ್ ನಗರ, ಭಗತ್‌ಸಿಂಗ್ ನಗರ, ಹಾಗೂ ನಗರಸಭೆ ವ್ಯಾಪ್ತಿಯ ಎಲ್ಲಾ ಕುಡಿಯುವ ನೀರಿನ ಘಟಕಗಳು. ಗೋಕುಲ ನಗರ, ಕಲ್ಲಹಳ್ಳಿ, ರಜಾಪುರ, ಜಿ.ಜಿ ಕ್ಯಾಂಪ, ಕಣಿವೆರಾಯನಗುಡಿ, ವ್ಯಾಸನಕೆರೆ, ಕಾಕುಬಾಳು, ಗುಡ್ಲುವದ್ದಿಗೆರೆ, ಪಿ.ಕೆ ಹಳ್ಳಿ, ಸಂಕ್ಲಾಪುರ, ನಾಗೇನಹಳ್ಳಿ, ಬಸವನದುರ್ಗ, ಹೊಸೂರು, ಇಪ್ಪಿತ್ತೇರಿ ಮಾಗಣಿ, ನರಸಾಪುರ, 118 ಡಣಾಪುರ, ಶುಭಲಾಭ ಕೈಗಾರಿಕೆಗಳು, ವಡ್ಡರಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲ್ಲಿದ್ದು, ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.