×
Ad

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೊಸಪೇಟೆ ತಾಲೂಕು ಸಮಿತಿ ಪುನರ್ ರಚನೆ

Update: 2025-12-31 16:49 IST

ವಿಜಯನಗರ: ನಗರದ ಅಂಬೇಡ್ಕರ್ ಭವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) 47/74-75 ಸಂಘಟನೆಯ ವತಿಯಿಂದ ಹೊಸಪೇಟೆ ತಾಲೂಕು ಪದಾಧಿಕಾರಿಗಳ ಸಮಿತಿಯನ್ನು ಪುನರ್ ರಚಿಸಲಾಯಿತು.

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ಸಂಚಾಲಕರಾದ ಎಸ್. ದುರುಗೇಶ್, ಸಂಘಟನಾ ಸಂಚಾಲಕರಾದ ಹೆಚ್.ಬಿ. ಶ್ರೀನಿವಾಸ್ (ಮರಿಯಮ್ಮನಹಳ್ಳಿ), ಕಂದಗಲ್ ಪರಶುರಾಮ್, ತುಂಬಾರಗುದ್ದಿ ದುರುಗೇಶ್ ಹಾಗೂ ಹಿರಿಯ ದಲಿತ ನಾಯಕರಾದ ಗೋವಿಂದರಾಜ್, ಶಾಮ್‌ರಾಜ್, ಬಿ.ಎಡ್. ಹನುಮಂತಪ್ಪ, ಉದಯಕುಮಾರ ಅವರ ಉಪಸ್ಥಿತಿಯಲ್ಲಿ ತಾಲೂಕು ಸಮಿತಿಯನ್ನು ಪುನರ್ ರಚಿಸಲಾಯಿತು.

ಹೊಸಪೇಟೆ ತಾಲೂಕು ಸಂಚಾಲಕರಾಗಿ ಎಂ.ವಿರುಪಾಕ್ಷಿ, ಸಂಘಟನಾ ಸಂಚಾಲಕರಾಗಿ ಎಚ್. ಈರಣ್ಣ, ಗಾದಿಗನೂರು ನಾಗರಾಜ್, ಹಾರುವನಹಳ್ಳಿ ನಾಗರಾಜ್, ಪಕ್ಕೀರಪ್ಪ, ಹನುಮನಹಳ್ಳಿ ಮಂಜುನಾಥ, ಶ್ರೀನಿವಾಸ ನಂದಿಬಂಡೆ ಅವರನ್ನು ನೇಮಕ ಮಾಡಲಾಯಿತು. ಅಲ್ಲದೆ ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾಗಿ ಡಾ. ಆನಂದ್ ಹಾಗೂ ಸಂಘಟನಾ ಸಂಚಾಲಕರಾಗಿ ಎಚ್.ಕೆ. ಈಶ್ವರ್ ಅವರನ್ನು ನೇಮಿಸಲಾಯಿತು.

ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಶುಭಹಾರೈಸಿದ ನಾಯಕರು, ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಜೊತೆಗೆ ಗ್ರಾಮ ಶಾಖೆಗಳನ್ನು ಪುನರ್ ರಚಿಸುವ ಮೂಲಕ ಹೊಸಪೇಟೆ ತಾಲೂಕಿನಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಸಕ್ರಿಯಗೊಳಿಸಬೇಕೆಂದು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News