×
Ad

ವಿಜಯನಗರ: ಸರ್ಕಾರಿ ಶಾಲಾ ಮಕ್ಕಳಿಗೆ ದಾನಿಗಳಿಂದ ಸಮವಸ್ತ್ರ ಕೊಡುಗೆ

Update: 2025-09-03 17:44 IST

ವಿಜಯನಗರ: ಸರ್ಕಾರಿ ಶಾಲೆ ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವದ ಅತ್ಯಗತ್ಯ. ದಾನಿಗಳು, ಸಂಘ- ಸಂಸ್ಥೆಗಳ ನೆರವಿನೊಂದಿಗೆ ಸರ್ಕಾರಿ ಶಾಲೆಯಲ್ಲಿ ವಿಭಿನ್ನ ರೀತಿಯಲ್ಲಿ ಪ್ರಗತಿಯತ್ತ ಕೊಂಡೊಯ್ಯುತ್ತಿರುವ 88-ಮುದ್ದಾಪುರ ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ 88- ಮುದ್ಲಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಅವರು ವಿದ್ಯಾರ್ಥಿಗಳಿಗೆ ಕೊಡಮಾಡಿದ ಸ್ಪೋರ್ಟ್ಸ್ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲಾ ಶಿಕ್ಷಕರು ಎಂದರೆ, ಬಹುತೇಕ ತಮ್ಮ ಕೆಲಸವಾಯಿತು ಎಂಬಂತೆ ಸೀಮಿತರಾಗಿರುತ್ತಾರೆ. ಆದರೆ, ಬಹುಮುಖಿ ಪ್ರತಿಭೆಯಾಗಿ ಗುರುತಿಸಿಕೊಳ್ಳುವ ಶಾಲೆಯ ಮುಖ್ಯಶಿಕ್ಷಕ ಕೆ.ಬಸವರಾಜ್ ಮತ್ತು ಎಸ್.ರಮೇಶ್ ಅವರು ಬೋಧನೆ ಜೊತೆಗೆ ಮಕ್ಕಳಿಕೆ ಕಲಿಕಾ ಸಾಮಗ್ರಿ, ಶಾಲೆಯ ಮೂಲ ಸೌಕರ್ಯ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಬೇಡಿಕೆಗೆ ನೆರವಾಗಿರುವ ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಅವರೂ ಅಭಿನಂದನಾರ್ಹರು. ಮುಂದಿನ ವಾರದೊಳಗೆ ಶಾಲೆಯ ಎಲ್ಲಾ ಮಕ್ಕಳಿಗೆ ವೈಯಕ್ತಿಕವಾಗಿ ಶಾಲಾ ಬ್ಯಾಗ್ ಒದಗಿಸುವುದಾಗಿ ಭರವಸೆ ನಿಡಿದರು.

ನಗರಸಭೆ ಸದಸ್ಯ ಬಿ.ಜೀವರತ್ನಂ ಮಾತನಾಡಿ, ಸ್ವಾಮಿ ವಿವೇಕಾನಂದರ ಆಶಯ ನುಡಿಯಂತೆ ಉತ್ತಮನಾಗು, ಉಪಕಾರಿಯಾಗಬೇಕು. ವಿದ್ಯೆ ಬದುಕಿಗೆ ದೀಪವಿದ್ದಂತೆ ಉತ್ತಮ ಶಿಕ್ಷಣ ಪಡೆದು. ಉನ್ನತ ಸ್ಥಾನಕ್ಕೇರಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಡಾ.ಮೃತ್ಯುಂಜಯ ರುಮಾಲೆ ಮಾತನಾಡಿದರು.

ವೇದಿಕೆ ಮೇಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಶುರಾಮಪ್ಪ, ಉಪಾಧ್ಯಕ್ಷ ದುರುಗಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಲ್ಲಯ್ಯ, ಸಿ.ಆರ್.ಪಿ ಮಹ್ಮದ್ ಇಮ್ರಾನ್, ಶಾಲೆಯ ಮುಖ್ಯಗುರು ಕೆ.ಬಸವರಾಜ, ವಾರ್ಡಿನ ಪ್ರಮುಖರಾದ ಶೇಷಪ್ಪ, ಪಂಪಾಪತಿ, ವೆಂಕಣ್ಣಶೆಟ್ಟು, ಬೆನಕಾಪುರ ಶಾಲೆಯ ಶಿಕ್ಷಕರಾದ ಡಾ.ಪಿ.ದಿವಾಕರ ನಾರಾಯಣ, ಶಾಲೆಯ ಸಹಶಿಕ್ಷಕರಾದ ಎಸ್.ರಮೇಶ್, ಸಿ.ಎಸ್.ರಾಧಾ. ಪಾರ್ವತಿ ವಿ.ಬಿ.ಉಪಸ್ತಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News