×
Ad

ಎಸೆಸೆಲ್ಸಿ ಫಲಿತಾಂಶ ಸುಧಾರಣೆಯಲ್ಲಿ ವಿಜಯನಗರ ಜಿಲ್ಲೆಯ ಪ್ರಗತಿ ಶ್ಲಾಘನೀಯ : ಸಚಿವ ಝಮೀರ್‌ ಅಹ್ಮದ್‌

Update: 2025-05-03 22:06 IST

ಝಮೀರ್‌ ಅಹ್ಮದ್‌ 

ವಿಜಯನಗರ (ಹೊಸಪೇಟೆ) : ನಮ್ಮ ವಿಜಯನಗರ ಜಿಲ್ಲೆ ಈ ಬಾರಿ ಎಸೆಸೆಲ್ಸಿ ಫಲಿತಾಂಶದಲ್ಲಿ 27ನೇ ಸ್ಥಾನದಿಂದ 19 ನೇ ಸ್ಥಾನಕ್ಕೆ ಪ್ರಗತಿ ಸಾಧಿಸಿರುವುದು ಶ್ಲಾಘನೀಯ ಎಂದು ಸಚಿವ ಝಮೀರ್‌ ಅಹ್ಮದ್‌ ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೆ ಅಭಿನಂಧನೆಗಳು. ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದ ಯಶವಂತ ಮತ್ತು ನಿಹಾರ್ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 1 ಲಕ್ಷರೂ ನಗದು ಮತ್ತು ದ್ವಿಚಕ್ರವಾಹನ ಉಡುಗೊರೆಯಾಗಿ ನೀಡುತ್ತೇನೆ. ಉಳಿದ 12 ವಿದ್ಯಾರ್ಥಿಗಳಿಗೆ ದ್ವಿಚಕ್ರ ವಾಹನವನ್ನು ನೀಡುವ ಮೂಲಕ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತೇನೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News