×
Ad

ವಿಜಯನಗರ | ಅಟಲ್‌ಜೀ ಮೃಗಾಲಯಕ್ಕೆ ‘ರೇವಾ’ ಗಂಡು ಹುಲಿ ಆಗಮನ

Update: 2025-06-26 22:32 IST

ವಿಜಯನಗರ(ಹೊಸಪೇಟೆ) : ಕಲ್ಯಾಣ ಕರ್ನಾಟಕ ವಿಭಾಗದ ಏಕೈಕ ಸಫಾರಿ ಹೊಂದಿರುವ ಕಮಲಾಪುರದ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಗೆ ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಿಂದ ‘ರೇವಾ’ ಎಂಬ ಗಂಡು ಹುಲಿ ನವ ಅತಿಥಿಯಾಗಿ ಗುರುವಾರ ಆಗಮಿಸಿದೆ ಎಂದು ಕಾರ್ಯ ನಿರ್ವಾಹಕ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಡಾ.ರಾಜೇಶ್ ನಾಯ್ಕ ತಿಳಿಸಿದ್ದಾರೆ.

ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ಪ್ರವಾಸಿಗರಿಗೆ ವೀಕ್ಷಿಸಲು ಅನುವು ಮಾಡಿಕೊಡಲು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಿಂದ ಒಂದು ಗಂಡು ಹುಲಿ ಮತ್ತು ಒಂದು ಗಂಡು ನೀರು ಕುದುರೆಯನ್ನು ಹಸ್ತಾಂತರಿಸಿಕೊಳ್ಳಲು ಕೇಂದ್ರ ಮೃಗಾಲಯ ಪ್ರಾಧಿಕಾರ ನವದೆಹಲಿ ಅನುಮತಿ ನೀಡಿದೆ.

ಗುರುವಾರದಂದು ರೇವಾ ಎಂಬ ಹೆಸರಿನ ಗಂಡು ಹುಲಿ ಅತಿಥಿಯಾಗಿ ಆಗಮಿಸಿದೆ. ಮುಂದಿನ ದಿನಗಳಲ್ಲಿ ನೀರು ಕುದರೆ ಆಗಮಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News