×
Ad

ವಿಜಯನಗರ | ನಗರಸಭೆಯ ಪರಿಷ್ಕೃತ ಶುಲ್ಕ ನಿಗಧಿ : ಆಕ್ಷೇಪಣೆಗೆ ಅರ್ಜಿ ಆಹ್ವಾನ

Update: 2025-05-12 20:12 IST

ವಿಜಯನಗರ(ಹೊಸಪೇಟೆ) : ನಗರದ ನಗರಸಭೆ ಹೊಸಪೇಟೆ ವ್ಯಾಪ್ತಿಯಲ್ಲಿ ಬರುವ ಉದ್ದಿಮೆ ಪರವಾನಿಗೆಯ ಶುಲ್ಕ ಸೇರಿದಂತೆ 2025-26ನೇ ಸಾಲಿನಿಂದ ಜಾರಿಗೆ ಬರುವಂತೆ ಧರಗಳನ್ನು ನಿಗದಿಪಡಿಸಿ ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕಾರ ಧರಗಳನ್ನು ಪರಿಷ್ಕೃತಗೊಳಿಸಿರುತ್ತದೆ.

ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು, ಸಲಹೆಗಳಿದ್ದಲ್ಲಿ ಮೇ 21 ರೊಳಗಾಗಿ ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ನಗರ ಸಭೆಗೆ ಸಲ್ಲಿಸುವುದು. ಅವಧಿ ಮೀರಿ ಬಂದ ಆಕ್ಷೇಪಣೆಗಳನ್ನು ಪರಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯ ಆರೋಗ್ಯ ಶಾಖೆಯನ್ನು ಸಂಪರ್ಕಿಸಿ ಪಡೆಯತಕ್ಕದ್ದು ಹಾಗೂ ಪರಿಷ್ಕೃತ ದರಪಟ್ಟಿಯನ್ನು ಕಾರ್ಯಾಲಯದ ಸೂಚನಾ ಫಲಕದಲ್ಲಿ ಲಗತ್ತಿಸಿದೆ ಎಂದು ನಗರಸಭೆ ಪೌರಯುಕ್ತರಾದ ಚಂದ್ರಪ್ಪರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News