×
Ad

ವಿಜಯನಗರ |ಮಗುವಿನ ಜೊತೆ ಮಹಿಳೆ ನಾಪತ್ತೆ : ಪ್ರಕರಣ ದಾಖಲು

Update: 2025-08-18 19:30 IST

ವಿಜಯನಗರ : ಹಡಗಲಿ ತಾಲೂಕಿನ ಹೊಸ ನವಲಿಯ ನಿವಾಸಿ ಮಹಿಳೆಯೋರ್ವರು ತನ್ನ 1 ತಿಂಗಳ ಮಗುವಿನೊಂದಿಗೆ ನಾಪತ್ತೆಯಾಗಿದ್ದು, ಈ ಕುರಿತು ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ 5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಕರಿ ನೀಲಿ ಬಣ್ಣದ ಸೀರೆ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.  

ನಾಪತ್ತೆಯಾದ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ cpihadagali@ksp.gov.in ಇ-ಮೇಲ್ ಸಂಖ್ಯೆ ಅಥವಾ 9480805737 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಡಗಲಿ ಇನ್ಸ್‌ಪೆಕ್ಟರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News