×
Ad

ಜರ್ಮನಿ ವೀಸಾ ನಿಯಮಗಳನ್ನು ಬಿಗಿಗೊಳಿಸಿದ ನಂತರ ಹೊಸ ತಾಣ ಹುಡುಕುತ್ತಿರುವ ಭಾರತೀಯ ವಿದ್ಯಾರ್ಥಿಗಳು

Update: 2025-12-30 18:21 IST

ಸಾಂದರ್ಭಿಕ ಚಿತ್ರ | Photo Credit : freepik

ಅಪ್ಲಿಕೇಶನ್ ಟ್ರೆಂಡ್ಗಳನ್ನು ಗಮನಿಸಿರುವ ಶಿಕ್ಷಣ ಸಲಹೆಗಾರರ ಪ್ರಕಾರ ಭಾರತೀಯ ವಿದ್ಯಾರ್ಥಿಗಳು ಇದೀಗ ಜರ್ಮನಿ ಹೊರತಾದ ಸ್ಥಳಗಳನ್ನು ಹುಡುಕುತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ವಿದ್ಯಾರ್ಥಿಗಳ ವೀಸಾಗೆ ಸಂಬಂಧಿಸಿ ಜರ್ಮನಿ ವಸತಿ ನಿಯಮಗಳನ್ನು ಬಿಗಿಗೊಳಿಸಿದೆ. ಜರ್ಮನ್ ಶೈಕ್ಷಣಿಕ ವಿನಿಮಯ ಸೇವೆಗೆ (ಡಿಎಎಡಿ) ಸಂಬಂಧಿಸಿದ ನಡೆಯಿಂದಾಗಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. DAADಯ ದತ್ತಾಂಶದ ಪ್ರಕಾರ 2023ರಲ್ಲಿ ಜರ್ಮನಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ದಾಖಲಾತಿ 49,000ಕ್ಕೆ ಏರಿದೆ. ಬಹುತೇಕ ವಿದ್ಯಾರ್ಥಿಗಳು ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಪ್ರಾಕೃತಿಕ ವಿಜ್ಞಾನಗಳ ಕೋರ್ಸ್ಗಳಿಗೆ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿದ್ದಾರೆ. ಆದರೆ ದಾಖಲಾತಿಯಲ್ಲಿ ಏರಿಕೆಯಾಗುತ್ತಿದ್ದಂತೆಯೇ ವಿದ್ಯಾರ್ಥಿಗಳ ವೀಸಾ ರದ್ದತಿ ಮತ್ತು ಗಡೀಪಾರು ನೋಟೀಸುಗಳನ್ನು ಕೊಡುವುದು ಕಂಡುಬರುತ್ತಿದೆ. ಹೀಗಾಗಿ ಜರ್ಮನಿ ಕಡಿಮೆ ಅಪಾಯವಿರುವ ಅಧ್ಯಯನ ಕೇಂದ್ರವೇ ಎನ್ನುವುದನ್ನು ಮತ್ತೊಮ್ಮೆ ಪರಿಶೀಲಿಸಬೇಕಾಗುತ್ತದೆ.

ಜರ್ಮನಿಯಲ್ಲಿ ಏನು ಬದಲಾಗಿದೆ?

ಜರ್ಮನಿ ಅಧಿಕಾರಿಗಳು ಇದೀಗ ನಿಯಮಗಳನ್ನು ಶಿಸ್ತಿನಿಂದ ಅನುಸರಿಸಲು ಆರಂಭಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು, ಇದೀಗ ಕಠಿಣವಾಗಿ ಅಳವಡಿಸಲಾಗುತ್ತಿದೆ.

- ವ್ಯಕ್ತಿಗತವಾಗಿ ಕಾಲೇಜಿಗೆ ಹೋಗಿ ಪಡೆಯಬೇಕಾದ ಮಾನ್ಯತೆ ಹೊಂದಿದ ದಾಖಲಾತಿಯನ್ನು ಗುರುತಿಸಲಾಗುತ್ತಿದೆ.

- ಸಮಯಕ್ಕೆ ಸರಿಯಾಗಿ ಶೈಕ್ಷಣಿಕ ಪ್ರಗತಿಯನ್ನು ಗಮನಿಸಲಾಗಿದೆ.

- ಪರವಾನಗಿ ನೀಡಿರುವ ಉದ್ಯೋಗದ ಕಾರ್ಯಕಾರಿ ಗಂಟೆಗಳ ಅನುಸರಣೆ ಮುಖ್ಯವಾಗುತ್ತಿದೆ.

- ಬ್ಲಾಕ್ಡ್ ಖಾತೆಗಳ ಮೂಲಕ ಹಣಕಾಸು ವ್ಯವಹಾರಕ್ಕೆ ಸಾಕಷ್ಟು ಹಣ ಇರುವುದನ್ನು ಪರಿಶೀಲಿಸಲಾಗುತ್ತಿದೆ.

ಅಧಿಕೃತ ಪ್ರಕಟಣೆ ಇಲ್ಲ

ನೂರಾರು ವಿದ್ಯಾರ್ಥಿಗಳನ್ನು ಜರ್ಮನಿಯಿಂದ ಗಡೀಪಾರು ಮಾಡಲಾಗಿದೆ. ಮುಖ್ಯವಾಗಿ ಪ್ರೋಗ್ರಾಂಗೆ ಅರ್ಹತೆ ಮತ್ತು ವಸತಿ ನಿಯಮ ಅನುಸರಣೆಯನ್ನು ಪ್ರಶ್ನಿಸಲಾಗಿದೆ. ಆದರೆ ಅಧಿಕೃತವಾಗಿ ಜರ್ಮನ್ ಸರ್ಕಾರ ಅಥವಾ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯನ್ನು ಹೊರಡಿಸಿಲ್ಲ.

ಜರ್ಮನಿ ಏಕೆ ಆದ್ಯತೆಯ ದೇಶ

ಭಾರತೀಯ ವಿದ್ಯಾರ್ಥಿಗಳಿಗೆ ಜರ್ಮನಿ ಐತಿಹಾಸಿಕವಾಗಿ ನಾಲ್ಕು ವಿಷಯಗಳಲ್ಲಿ ಆದ್ಯತೆಯ ದೇಶವಾಗಿದೆ. ಆದರೆ ಅದೇ ಈಗ ಸಮಸ್ಯೆಯನ್ನೂ ಸೃಷ್ಟಿಸುತ್ತಿದೆ.

ಮೊದಲನೆಯದು ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಕನಿಷ್ಠ ಅಥವಾ ಶೂನ್ಯ ಟ್ಯೂಶನ್ ಶುಲ್ಕ ವಿಧಿಸಲಾಗುತ್ತದೆ. ಮುನಿಚ್ನ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಆಚೆನ್ ವಿಶ್ವವಿದ್ಯಾಲಯ ನಿರಂತರವಾಗಿ ಜಾಗತಿಕ ರ‍್ಯಾಂಕಿಂಗ್ನಲ್ಲಿ ಸ್ಥಾನ ಪಡೆದಿವೆ.

ಎರಡನೆಯದಾಗಿ ಎಪಿಎಸ್ ಪ್ರಮಾಣಪತ್ರ ವ್ಯವಸ್ಥೆ. 2022ರಿಂದ ಭಾರತೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೌಲ್ಯಮಾಪನ ಕೇಂದ್ರದ ಪ್ರಮಾಣಪತ್ರ ಕಡ್ಡಾಯವಾಗಿದೆ. ಇವು ಶೈಕ್ಷಣಿಕ ಅರ್ಹತೆಗಳನ್ನು ಪರಿಶೀಲಿಸಲು ವಿನ್ಯಾಸಗೊಳಿಸಲಾಗಿದ್ದರೂ, ಪ್ರಕ್ರಿಯೆ ವಿಳಂಬ ಮತ್ತು ದಾಖಲೀಕರಣದ ದೋಷದಿಂದಾಗಿ ವಿದ್ಯಾರ್ಥಿಗಳ ವೇಳಾಪಟ್ಟಿಯ ಮೇಲೆ ಪರಿಣಾಮ ಬೀರಿದೆ.

ಮೂರನೆಯದಾಗಿ ಮುಖ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಗ್ಲಿಷ್ನಲ್ಲಿ ಕಲಿಸುವ ಸ್ನಾತಕೋತ್ತರ ಕಾರ್ಯಕ್ರಮ. ಕಲಿಕೆ ಇಂಗ್ಲಿಷ್ನಲ್ಲಿದ್ದರೂ ವಿಶ್ವವಿದ್ಯಾಲಯಗಳು ಮತ್ತು ಪ್ರಾಧಿಕಾರಗಳು ಜರ್ಮನಿ ಭಾಷೆ ಬಾರದೆ ಇರುವುದರಿಂದ ತರಬೇತಿಗಳು, ಅರೆಕಾಲಿಕ ಕೆಲಸ ಮತ್ತು ಸ್ಥಳೀಯ ಆಡಳಿತ ಪ್ರಕ್ರಿಯೆಗಳಲ್ಲಿ ಸಮಸ್ಯೆಯಾಗಲಿದೆ.

ಅಂತಿಮವಾಗಿ ಬ್ಲಾಕ್ಡ್ ಖಾತೆಗಳ ಅಗತ್ಯ. ಅಂದರೆ ವಿದ್ಯಾರ್ಥಿಗಳು ಜೀವನ ವೆಚ್ಚಕ್ಕಾಗಿ ಸಾಕಷ್ಟು ಹಣ ಇಟ್ಟುಕೊಂಡಿರಬೇಕು, ಮತ್ತು ಇದನ್ನು ಅನುಸರಿಸುವಲ್ಲಿ ವಿಫಲವಾಗುವುದರ ಮೇಲೆ ಹೆಚ್ಚು ನಿಗಾ ಇಡಲಾಗುತ್ತಿದೆ.

ವೀಸಾ ರದ್ದತಿ ಕುರಿತು ವ್ಯಕ್ತಿಗತ ವಿವರ

ಯುರೋಪ್ನ ಮಾಧ್ಯಮ ವರದಿಗಳ ಪ್ರಕಾರ ಕೆಲವು ವಿದ್ಯಾರ್ಥಿಗಳ ವೀಸಾ ರದ್ದತಿಯಾಗಿದೆ. ಮುಖ್ಯವಾಗಿ ಅಧಿಕಾರಿಗಳು ಹೇಳಿರುವ ಪ್ರಕಾರ ವಿದ್ಯಾರ್ಥಿಗಳು ಪೂರ್ಣಾವಧಿಯ, ಕಾಲೇಜಿಗೆ ಹೋಗಿ ವಿದ್ಯಾಭ್ಯಾಸ ಮಾಡಬೇಕಿರುವ ಕೋರ್ಸ್ಗಳಿಗೆ ದಾಖಲಾಗದೆ ಇರುವುದರಿಂದ ವೀಸಾ ರದ್ದಾಗಿದೆ.

ಜರ್ಮನಿ ದೇಶಾದ್ಯಂತ ಗಡೀಪಾರಿಗೆ ಚಾಲನೆ ನೀಡಿದೆ ಎಂದು ಅರ್ಥವಲ್ಲ. ಅಲ್ಲದೆ, ಭಾರತ ಕೇಂದ್ರಿತವಾಗಿ ಜರ್ಮನಿ ಯಾವುದೇ ಆದೇಶಗಳನ್ನು ಹೊರಡಿಸಿಲ್ಲ. ವಿದ್ಯಾರ್ಥಿಗಳು ಮತ್ತು ಕುಟುಂಬಗಳು ಜರ್ಮನಿಗೆ ವಿದ್ಯಾಭ್ಯಾಸಕ್ಕೆ ನಿರ್ಧರಿಸುವಾಗ ಇದನ್ನು ಗಮನದಲ್ಲಿರಿಸಬೇಕು.

ಜರ್ಮನಿ ಹೊರತಾದ ತಾಣಗಳು

ಅಪ್ಲಿಕೇಶನ್ ಟ್ರೆಂಡ್ಗಳನ್ನು ಗಮನಿಸಿರುವ ಶಿಕ್ಷಣ ಸಲಹೆಗಾರರ ಪ್ರಕಾರ ಭಾರತೀಯ ವಿದ್ಯಾರ್ಥಿಗಳು ಇದೀಗ ಜರ್ಮನಿ ಹೊರತಾದ ಸ್ಥಳಗಳನ್ನು ಹುಡುಕುತ್ತಿದ್ದಾರೆ.

ಫ್ರಾನ್ಸ್ ಕ್ಯಾಂಪಸ್ ಅಡಿಯಲ್ಲಿರುವ ಕೇಂದ್ರೀಕೃತ ದಾಖಲಾತಿ ಮತ್ತು ವೀಸಾ ವ್ಯವಸ್ಥೆಯಿಂದಾಗಿ ಹೆಚ್ಚು ಆಕರ್ಷಣೀಯ ಕೇಂದ್ರವಾಗಿದೆ.

ಒಂದು ವರ್ಷದ ಸ್ನಾತಕೋತ್ತರ ಪ್ರೋಗ್ರಾಂಗಳಿಂದಾಗಿ ಐರ್ಲ್ಯಾಂಡ್ ಆದ್ಯತೆಯ ತಾಣವಾಗಿದೆ. ಟ್ಯೂಷನ್ ಶುಲ್ಕ ಹೆಚ್ಚಾಗಿದ್ದರೂ ವಿದ್ಯಾಭ್ಯಾಸದ ನಂತರ ಕೆಲಸಕ್ಕೆ ಅವಕಾಶವಿರುವ ಕಾರಣ ಉತ್ತಮ ತಾಣವೆನಿಸಿದೆ.

ನೆದರ್ಲ್ಯಾಂಡ್ಸ್ನಲ್ಲಿ ಇಂಗ್ಲಿಷ್ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಇರುವ ಕಾರಣದಿಂದ ಔದ್ಯಮಿಕವಾಗಿ ಉತ್ತಮ ಅವಕಾಶಗಳಿವೆ. ಕೋರ್ಸ್ ಮಧ್ಯೆ ಅನಿಶ್ಚಿತತೆಗಳು ಕಡಿಮೆ ಇರುತ್ತವೆ.

ಆಸ್ಟ್ರೇಲಿಯ ಮತ್ತೊಂದು ಆಕರ್ಷಣೀಯ ತಾಣವಾಗಿದೆ. ಅಲ್ಲಿಯೂ ವೀಸಾ ರಿಕ್ಯಾಲಿಬರೇಶನ್ ಅಂದರೆ ವಿದ್ಯಾಭ್ಯಾಸದ ನಂತರ ಕೆಲಸದ ವೀಸಾಗೆ ಹೊಂದಾಣಿಕೆ ಮಾಡುವ ಅವಕಾಶವಿದೆ.

ಜರ್ಮನಿಯ ಆಕರ್ಷಣೆ ಕಡಿಮೆ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜರ್ಮನಿ ಅತಿ ಆಕರ್ಷಣೀಯ ತಾಣವಾಗಿರಲಿದೆ. ಆದರೆ ಇತ್ತೀಚೆಗಿನ ದಿನಗಳ ಬೆಳವಣಿಗೆಯ ನಂತರ ತನ್ನ ಆಕರ್ಷಣೆ ಕಳೆದುಕೊಳ್ಳಬಹುದು. ಕಡಿಮೆ ಟ್ಯೂಷನ್ ಶುಲ್ಕ ಎಂದ ಮಾತ್ರಕ್ಕೆ ಆಡಳಿತ ವ್ಯವಹಾರದ ಸುಗಮವಾಗಿರುತ್ತದೆ ಎಂದು ಅರ್ಥವಲ್ಲ. ವಿದ್ಯಾರ್ಥಿಗಳ ಮಟ್ಟಿಗೆ ವೀಸಾ ಸಾಧ್ಯತೆ, ಅನುಸರಣೆ ವಿಚಾರದಲ್ಲಿ ಸ್ಪಷ್ಟತೆ ಮತ್ತು ನಿಯಂತ್ರಿತ ದಾಖಲಾತಿ ಪ್ರಕ್ರಿಯೆ ಮುಖ್ಯವಾಗಿರುತ್ತದೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News