×
Ad

FIFA 2026 | ಯಾರ ಮುಡಿಗೇರಲಿದೆ ಗೋಲ್ಡನ್ ಬೂಟ್; 7 ಗೋಲುಗಳೊಂದಿಗೆ ಮೆಸ್ಸಿ, ಎಂಬಾಪೆ, ಹಾಲಂಡ್ ಸಮರ

►ಹ್ಯಾರಿ ಕೇನ್ ತೀವ್ರ ಪೈಪೋಟಿ ►ಫಿಫಾ ವಿಶ್ವಕಪ್‌ಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದವರು ಯಾರು?

Update: 2026-07-06 18:49 IST

ಲಿಯೊನೆಲ್ ಮೆಸ್ಸಿ  ,  ಕೈಲಿಯನ್ ಎಂಬಾಪೆ  | Photo Credit : PTI

ಬ್ರೆಝಿಲ್ ವಿರುದ್ಧ ನಾರ್ವೆಯ 16ರ ಸುತ್ತಿನ ಗೆಲುವಿನಲ್ಲಿ ಡಬಲ್ ಗೋಲು ಬಾರಿಸಿದ ಹಾಲೆಂಡ್ ರವಿವಾರ ಮೆಸ್ಸಿ-ಎಂಬಾಪೆ ಮಹಾಸಮರಕ್ಕೆ ಸಮಬಲದಲ್ಲಿ ಬಂದು ನಿಂತಿದ್ದಾರೆ.

ಫಿಫಾ ವಿಶ್ವಕಪ್ 2026ರಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿಯ ಕಣದಲ್ಲಿ ಲಿಯೊನೆಲ್ ಮೆಸ್ಸಿ ಮತ್ತು ಕೈಲಿಯನ್ ಎಂಬಾಪೆ ಜೊತೆಗೆ ನಾರ್ವೆಯ ಆಟಗಾರ ಎರ್ಲಿಂಗ್ ಹಾಲೆಂಡ್ ಅವರೂ ಸೇರಿದ್ದಾರೆ. ಮೂರು ದಿನಗಳ ಕಾಲ ಫ್ರೆಂಚ್ ದಿಗ್ಗಜ ಕೈಲಿಯನ್ ಎಂಬಾಪೆ ಮತ್ತು ಅರ್ಜೆಂಟಿನಾದ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿ ತಲಾ ಏಳು ಗೋಲುಗಳೊಂದಿಗೆ ಪಂದ್ಯಾವಳಿಯ ಅತಿ ಹೆಚ್ಚು ಗೋಲ್ ಹೊಡೆದವರ ಸ್ಪರ್ಧೆಯಲ್ಲಿ ಪರಸ್ಪರ ಜೊತೆಯಾಗಿದ್ದರು. ಆದರೆ ಬ್ರೆಝಿಲ್ ವಿರುದ್ಧ ನಾರ್ವೆಯ 16ರ ಸುತ್ತಿನ ಗೆಲುವಿನಲ್ಲಿ ಡಬಲ್ ಗೋಲು ಬಾರಿಸಿದ ಹಾಲೆಂಡ್ ರವಿವಾರ ಇವರಿಬ್ಬರ ಜೊತೆಗೆ ಸಮಬಲದಲ್ಲಿ ಬಂದು ನಿಂತಿದ್ದಾರೆ.

ವಿಶ್ವಕಪ್ನ ನಾಕೌಟ್ ಹಂತ ಪ್ರಾರಂಭವಾದಾಗ ಅರ್ಜೆಂಟಿನಾ ಶುಕ್ರವಾರ ಕೇಪ್ ವರ್ಡೆಯನ್ನು ಸೋಲಿಸಿದಾಗ ಮೆಸ್ಸಿ ಏಳು ಗೋಲುಗಳನ್ನು ತಲುಪಿದ ಮೊದಲಿಗರಾದರು. ಆದರೆ ಒಂದು ದಿನದ ನಂತರ ಫ್ರಾನ್ಸ್ ಪೆರಾಗ್ವೆಯನ್ನು ಸೋಲಿಸಿದಾಗ ಎಂಬಾಪೆ ಅವರನ್ನು ಸರಿಗಟ್ಟಿದರು.

ರವಿವಾರ ತಡರಾತ್ರಿ ಮೆಕ್ಸಿಕೊ ವಿರುದ್ಧ ಇಂಗ್ಲೆಂಡ್ನ ರೋಮಾಂಚಕ 3-2 ಗೆಲುವಿನಲ್ಲಿ ಗೋಲು ಗಳಿಸಿದ ನಂತರ ಇಂಗ್ಲೆಂಡ್ನ ಹ್ಯಾರಿ ಕೇನ್ ತಮ್ಮ ಗೋಲುಗಳ ಸಂಖ್ಯೆಯನ್ನು ಆರಕ್ಕೆ ತಲುಪಿಸಿದರು. ಸ್ಪೇನ್ನ ಮೈಕೆಲ್ ಒಯಾರ್ಜಾಬಲ್ ಮತ್ತು ಎಂಬಾಪೆ ಅವರ ತಂಡದ ಸಹ ಆಟಗಾರ ಉಸ್ಮಾನ್ ಡೆಂಬೆಲೆ ತಲಾ ನಾಲ್ಕು ಗೋಲುಗಳಿಂದ ಮುನ್ನಡೆಯುತ್ತಿದ್ದಾರೆ.

ಗೋಲ್ಡನ್ ಬೂಟ್ ಪ್ರಶಸ್ತಿ ಎಂದರೇನು?

ಫಿಫಾದ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ಪಂದ್ಯಾವಳಿಯ ಕೊನೆಯಲ್ಲಿ ಅತಿಹೆಚ್ಚು ಗೋಲು ಗಳಿಸುವ ಆಟಗಾರರಿಗೆ ನೀಡಲಾಗುತ್ತದೆ. 2022ರ ವಿಶ್ವಕಪ್ನಲ್ಲಿ ಖತರ್ನಲ್ಲಿ ಎಂಟು ಗೋಲುಗಳನ್ನು ಗಳಿಸಿದ ಫ್ರಾನ್ಸ್ನ ಎಂಬಾಪೆ ಗೋಲ್ಡನ್ ಬೂಟ್ ಗೆದ್ದಿದ್ದರು. ಪಂದ್ಯಾವಳಿಯ ಕೊನೆಯಲ್ಲಿ ಇಬ್ಬರು ಆಟಗಾರರು ಒಂದೇ ಸಂಖ್ಯೆಯ ಗೋಲುಗಳಲ್ಲಿ ಸಮಬಲ ಸಾಧಿಸಿದರೆ, ಹೆಚ್ಚು ಅಸಿಸ್ಟ್ಗಳನ್ನು ಹೊಂದಿರುವ ಆಟಗಾರ ಪ್ರಶಸ್ತಿ ಗೆಲ್ಲುತ್ತಾರೆ.

ಈ ವಿಚಾರದಲ್ಲೂ ಸಮಬಲ ಸಾಧಿಸಿದರೆ ತಮ್ಮ ಗೋಲುಗಳನ್ನು ಮತ್ತು ಅಸಿಸ್ಟ್ಗಳನ್ನು ಕನಿಷ್ಠ ನಿಮಿಷಗಳಲ್ಲಿ ಮಾಡಿದ ಆಟಗಾರನಿಗೆ ಗೋಲ್ಡನ್ ಬೂಟ್ ಸಿಗುತ್ತದೆ.

2026ರ ವಿಶ್ವಕಪ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಯಾರು?

* ಕೈಲಿಯನ್ ಎಂಬಾಪೆ (ಫ್ರಾನ್ಸ್) – 7 ಗೋಲುಗಳು, 2 ಅಸಿಸ್ಟ್‌ಗಳು

* ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) – 7 ಗೋಲುಗಳು, 0 ಅಸಿಸ್ಟ್‌ಗಳು

* ಎರ್ಲಿಂಗ್ ಹಾಲೆಂಡ್ (ನಾರ್ವೆ) – 7 ಗೋಲುಗಳು, 0 ಅಸಿಸ್ಟ್‌ಗಳು

* ಹ್ಯಾರಿ ಕೇನ್ (ಇಂಗ್ಲೆಂಡ್) – 6 ಗೋಲುಗಳು, 1 ಅಸಿಸ್ಟ್

* ಉಸ್ಮಾನ್ ಡೆಂಬೆಲೆ (ಫ್ರಾನ್ಸ್) – 4 ಗೋಲುಗಳು, 2 ಅಸಿಸ್ಟ್‌ಗಳು

* ಮೈಕೆಲ್ ಒಯಾರ್ಜಬಲ್ (ಸ್ಪೇನ್) – 4 ಗೋಲುಗಳು, 1 ಅಸಿಸ್ಟ್

ಪ್ರಸ್ತುತ ವಿಶ್ವಕಪ್ ಆಟಗಾರರು ಎಷ್ಟು ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದಾರೆ?

ಎಂಬಾಪೆ, ಕೇನ್ ಮತ್ತು ಜೇಮ್ಸ್ ರೊಡ್ರಿಗಸ್ ಈಗಾಗಲೇ ಒಂದು ಬಾರಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದಾರೆ. ಇಂಗ್ಲೆಂಡ್ನ ಕೇನ್ 2018ರಲ್ಲಿ ರಷ್ಯಾದಲ್ಲಿ ಪ್ರಶಸ್ತಿ ಗೆದ್ದರೆ, ಕೊಲಂಬಿಯದ ರೊಡ್ರಿಗಸ್ 2014ರಲ್ಲಿ ಬ್ರೆಝಿಲ್ ವಿಶ್ವಕಪ್ನಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರರಾಗಿದ್ದರು.

ಒಂದೇ ವಿಶ್ವಕಪ್ನಲ್ಲಿ ಅತಿಹೆಚ್ಚು ಗೋಲು ಗಳಿಸಿದವರು ಯಾರು?

1958ರಲ್ಲಿ ಸ್ವೀಡನ್ನಲ್ಲಿ ನಡೆದ ಪಂದ್ಯಾವಳಿಯಲ್ಲಿ 13 ಗೋಲುಗಳನ್ನು ಗಳಿಸಿದ ಫ್ರೆಂಚ್ ಫಾರ್ವರ್ಡ್ ಜಸ್ಟ್ ಫಾಂಟೈನ್ ಇಂದಿಗೂ ದಾಖಲೆ ಉಳಿಸಿಕೊಂಡಿದ್ದಾರೆ. 1954ರಲ್ಲಿ ಸ್ವಿಝರ್ಲ್ಯಾಂಡ್ನ ವಿಶ್ವಕಪ್ನಲ್ಲಿ ಸ್ಯಾಂಡರ್ ಕೋಸಿಸ್ 11 ಗೋಲು ಗಳಿಸಿದ್ದರು. 1970 ಮೆಕ್ಸಿಕೊ ವಿಶ್ವಕಪ್ನಲ್ಲಿ ಪಶ್ಚಿಮ ಜರ್ಮನಿಯ ಗೆರ್ಡ್ ಮುಲ್ಲರ್ 10 ಗೋಲುಗಳನ್ನು ಗಳಿಸಿದ್ದರು.

ಫಿಫಾ ವಿಶ್ವಕಪ್ಗಳಲ್ಲಿ ಅತಿಹೆಚ್ಚು ಗೋಲು ಗಳಿಸಿದವರು ಯಾರು?

ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) – 20

ಕೈಲಿಯನ್ ಎಂಬಾಪೆ (ಫ್ರಾನ್ಸ್) – 19

ಮಿರೋಸ್ಲಾವ್ ಕ್ಲೋಸ್ (ಜರ್ಮನಿ) – 16

ರೊನಾಲ್ಡೊ (ಬ್ರೆಝಿಲ್) – 15

ಹ್ಯಾರಿ ಕೇನ್ (ಇಂಗ್ಲೆಂಡ್) ಮತ್ತು ಗೆರ್ಡ್ ಮುಲ್ಲರ್ (ಪಶ್ಚಿಮ ಜರ್ಮನಿ) – 14

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News