×
Ad

ಕರುಳಿನ ಆರೋಗ್ಯಕ್ಕೆ ಉತ್ತಮ ಸಕ್ಕರೆ ಯಾವುದು?

Update: 2025-12-28 15:28 IST

ಸಾಂದರ್ಭಿಕ ಚಿತ್ರ | Photo Credit : freepik.com

ಎಲ್ಲಾ ಆರೋಗ್ಯ ತಜ್ಞರು ಸಕ್ಕರೆ ಸೇವನೆಯನ್ನು ಕಡಿಮೆಗೊಳಿಸಬೇಕು ಎಂದೇ ಸಲಹೆ ನೀಡಿದ್ದಾರೆ. ರುಚಿಗಾಗಿ ಬಳಸುವ ಸಕ್ಕರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸಬಹುದು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ವಯಸ್ಕರು ಮತ್ತು ಮಕ್ಕಳು ಸಕ್ಕರೆ ಸೇವನೆ ಪ್ರಮಾಣವನ್ನು ಪ್ರತಿದಿನ 58 ಗ್ರಾಂಗಳಷ್ಟು ಅಥವಾ 14 ಚಮಚ ಅಥವಾ ಶೇ 5ರಿಂದ ಶೇ 10ರಷ್ಟು ಒಟ್ಟು ಕ್ಯಾಲರಿಗೆ ಸೀಮಿತಗೊಳಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಎಲ್ಲಾ ಆರೋಗ್ಯ ತಜ್ಞರು ಸಕ್ಕರೆ ಸೇವನೆಯನ್ನು ಕಡಿಮೆಗೊಳಿಸಬೇಕು ಎಂದೇ ಸಲಹೆ ನೀಡುತ್ತಾರೆ. ರುಚಿಗಾಗಿ ಬಳಸುವ ಸಕ್ಕರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಏರಿಸಬಹುದು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು! ಆದರೆ ಸಂಸ್ಕರಿತ ಸಕ್ಕರೆಯ ಬಳಕೆ ಬದಲಿಸಿದಲ್ಲಿ ಸಿಹಿಯನ್ನು ತೊಡೆದು ಹಾಕಿದ್ದೀರಿ ಎಂದು ಅರ್ಥವಲ್ಲ. ನಿಮ್ಮ ಸಿಹಿಯ ಬಯಕೆಗೆ ನೈಸರ್ಗಿಕವಾಗಿ ಬೇಕಾದಷ್ಟು ಆರೋಗ್ಯಕರ ಬದಲಿಗಳು ಸಿಗುತ್ತವೆ.

ಬೆಂಗಳೂರಿನ ಸಿಎಂಐ ಆಸ್ಪತ್ರೆಯಲ್ಲಿ ವೈದ್ಯಕೀಯ ಜಠರಕರುಳಿನಶಾಸ್ತ್ರ (ಗ್ಯಾಸ್ಟ್ರೋಎಂಟರಾಲಜಿ) ಸಲಹಾತಜ್ಞರಾದ ಡಾ ಅನುಪಮ ಎನ್‌ಕೆ ಹೇಳುವ ಪ್ರಕಾರ,” ಜಠರಕರುಳಿನತಜ್ಞರ ದೃಷ್ಟಿಕೋನದಲ್ಲಿ ಸಿಹಿ ಮುಖ್ಯವಾಗಿ ಜೀರ್ಣಕ್ರಿಯೆ, ಕರುಳಿನ ಆರೋಗ್ಯ, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಮತ್ತು ದೀರ್ಘಕಾಲೀನ ಕರುಳಿನ ಸಮತೋಲನ ತಪ್ಪಿಸುವಲ್ಲಿ ಪರಿಣಾಮ ಬೀರುವುದು ಆಗಿರುತ್ತದೆ. ಯಾವುದೇ ಸಿಹಿ ಸಂಪೂರ್ಣ ಹಾನಿಕರವಲ್ಲ. ಆದರೆ ಮಧ್ಯಮ ಪ್ರಮಾಣದಲ್ಲಿ ಸೇವಿಸುವುದು ಮುಖ್ಯವಾಗುತ್ತದೆ.”

ಜಠರಕರುಳಿಗೆ ಯಾವ ಸಿಹಿ ಉತ್ತಮ?

ವೈಟ್ ಶುಗರ್ (ಬಿಳಿ ಸಕ್ಕರೆ) ಕರುಳಿನ ಆರೋಗ್ಯದ ಮೇಲೆ ಅತಿ ಕೆಟ್ಟ ಪರಿಣಾಮ ಬೀರುತ್ತದೆ. ಅದು ಬಹಳ ಸಂಸ್ಕರಿತ ಆಹಾರ ಮತ್ತು ಹಾನಿಕರ ಕರುಳಿನ ಬ್ಯಾಕ್ಟೀರಿಯಕ್ಕೆ ನೆಲೆ ನೀಡುತ್ತದೆ. ಅದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಅಸಿಡಿಟಿ, ಗ್ಯಾಸ್ ಮತ್ತು ಉರಿಯೂತ ಹೆಚ್ಚಾಗಬಹುದು. ನಿಯಮಿತವಾಗಿ ಸೇವಿಸುವುದಿಂದ ಆಸಿಡ್ ರಿಫ್ಲಕ್ಸ್ ಹೆಚ್ಚಾಗಬಹುದು, ಕರುಳಿನ ಉರಿಯೂತದ ಲಕ್ಷಣಗಳೂ ಮತ್ತು ಫ್ಯಾಟಿ ಲಿವರ್ ರೋಗಕ್ಕೆ ಕಾರಣವಾಗಬಹುದು.

ಬ್ರೌನ್ ಶುಗರ್ (ಕಂದು ಸಕ್ಕರೆ)ಯು ವೈಟ್ ಶುಗರ್‌ನಿಂದ ಸ್ವಲ್ಪ ಮಟ್ಟಿಗೆ ಉತ್ತಮ. ಅದು ಕರುಳಿನಲ್ಲಿ ಸಂಸ್ಕರಿತ ಸಕ್ಕರೆಯಂತೆಯೇ ಪರಿಣಾಮ ಬೀರುತ್ತದೆ. ಹೊಟ್ಟೆ ಉಬ್ಬರಿಸುವಿಕೆ ಮತ್ತು ಆಮ್ಲೀಯತೆ ತರುತ್ತದೆ. ಸಣ್ಣ ಪ್ರಮಾಣದಲ್ಲಿರುವ ಖನಿಜಗಳಿಂದ ಜೀರ್ಣಾಂಗ ವ್ಯವಸ್ಥೆಯ ರಕ್ಷಣೆಯಾಗದು.

ಬೆಲ್ಲ ಕಡಿಮೆ ಸಂಸ್ಕರಿತ ಆಹಾರ ಮತ್ತು ಸಕ್ಕರೆಗಿಂತ ಬೇಗನೆ ಜೀರ್ಣವಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಬಳಸಿದರೆ ಕರುಳಿನ ಚಲನೆಗಳಿಗೆ ನೆರವಾಗಬಹುದು. ಆದರೆ ಅತಿಯಾಗಿ ಸೇವಿಸಿದರೆ ಗ್ಯಾಸ್, ಬೇಧಿ ಮತ್ತು ಆಮ್ಲೀಯತೆಗೆ ಕಾರಣವಾಗಬಹುದು. ಮುಖ್ಯವಾಗಿ ಸೂಕ್ಷ್ಮ ಹೊಟ್ಟೆಗಳಿದ್ದವರಿಗೆ ಸಮಸ್ಯೆ ಕಂಡುಬರಬಹುದು.

ಜೇನುತುಪ್ಪವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಿದರೆ ಉತ್ತಮ. ಅದರಲ್ಲಿರುವ ಬ್ಯಾಕ್ಟೀರಿಯವಿರೋಧಿ ತತ್ವಗಳು ಕರುಳಿನ ಸಮಸ್ಯೆ ಗುಣಪಡಿಸಲು ನೆರವಾಗಬಹುದು. ಆದರೆ ಅತಿಯಾದರೆ ಅಧಿಕ ಫ್ರಕ್ಟೋಸ್ ಇರುವುದರಿಂದ ಹೊಟ್ಟೆ ಉಬ್ಬರಿಸುವಿಕೆ, ಬೇಧಿ, ರಿಫ್ಲಕ್ಸ್ ಕಂಡುಬರಬಹುದು.

ಎರೊಥ್ರಿಟಾಲ್ ಅನ್ನು ಮುಖ್ಯವಾಗಿ ಸಣ್ಣ ಕರುಳಿನಲ್ಲಿ ಹೀರಿಕೊಳ್ಳುವುದರಿಂದ ಕರುಳಿನ ಆರೋಗ್ಯಕ್ಕೆ ಸುರಕ್ಷಿತ. ಸಕ್ಕರೆ ಆಲ್ಕೋಹಾಲ್‌ಗಿಂತ ಕಡಿಮೆ ಗ್ಯಾಸ್ ತರುತ್ತದೆ. ಹಾಗಿದ್ದರೂ ದೊಡ್ಡ ಪ್ರಮಾಣದಲ್ಲಿ ಸೇವಿಸಿದರೆ ಸೂಕ್ಷ್ಮ ಹೊಟ್ಟೆಯಿರುವವರಿಗೆ ಅಹಿತಕರ ಭಾವನೆ ತರಬಹುದು.

ಸ್ಟೆವಿಯಾ (ಮಧುವಂತ) ರಕ್ತದ ಸಕ್ಕರೆ ಪ್ರಮಾಣದ ಮೇಲೆ ಹಾನಿ ತರದು. ಜೀರ್ಣಕ್ರಿಯೆಗೆ ಉತ್ತಮ. ಆದರೆ ಸಂಸ್ಕರಿತ ಸ್ಟೆವಿಯ ಉತ್ಪನ್ನಗಳಿಂದ ಹೊಟ್ಟೆ ಉಬ್ಬರಿಸಬಹುದು ಅಥವಾ ವಾಕರಿಕೆಯ ಅನುಭವವಾಗಬಹುದು.

ಮಾಂಕ್ ಫ್ರುಟ್ ಅನ್ನು ಕರುಳಿನ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಅದು ಕರುಳಿನಲ್ಲಿ ಹುದುಗುವುದಿಲ್ಲ. ಹೊಟ್ಟೆ ಉಬ್ಬರಿಸುವುದಿಲ್ಲ. ಆಮ್ಲೀಯತೆ ಹೆಚ್ಚಿಸುವುದಿಲ್ಲ. ಐಬಿಎಸ್ ಇದ್ದ ಮಂದಿಗೂ ಉತ್ತಮವಾಗಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News