ಕೆಲವು ಸಂದರ್ಭಗಳಲ್ಲಿ ಜಿಮ್ ಬಿಡುವುದು ಸೋಮಾರಿತನವಲ್ಲ,ಜಾಣತನ!: ಜಿಮ್‌ಗೆ ಹೋಗದಿರುವುದು ಯಾವಾಗ ಉತ್ತಮ?
ಕೆಲವೊಂದು ಸಂದರ್ಭಗಳಲ್ಲಿ ಜಿಮ್ ಬಿಡುವುದೇ ಉತ್ತಮ ಎಂದು ಜಿಮ್ ತರಬೇತುದಾರರು ಸಲಹೆ ನೀಡುತ್ತಾರೆ. ಹಾಗಿದ್ದರೆ ಆ ಸಂದರ್ಭಗಳು ಯಾವುವು?
ಜಿಮ್‌ಗೆ ಹೋಗುವ ಅಭ್ಯಾಸ ಹೊಂದಿರುವವರು ಒಂದು ದಿನವೂ ತಪ್ಪಿಸುವುದಿಲ್ಲ. ಆದರೆ ನಿಮ್ಮ ದೇಹದಲ್ಲಿರುವ ಶಕ್ತಿಯ ಪ್ರತಿ ಬಿಂದುವನ್ನೂ ತೊಡೆದು ಹಾಕುವುದು ಎಲ್ಲ ಸಂದರ್ಭಗಳಲ್ಲೂ ಬದ್ಧತೆ ಎಂದು ಹೇಳಲಾಗದು. ಕೆಲವೊಂದು ಸಂದರ್ಭಗಳಲ್ಲಿ ಜಿಮ್ ಬಿಡುವುದೇ ಉತ್ತಮ ಎಂದು ಜಿಮ್ ತರಬೇತುದಾರರು ಸಲಹೆ ನೀಡುತ್ತಾರೆ. ಹಾಗಿದ್ದರೆ ಆ ಸಂದರ್ಭಗಳು ಯಾವುವು?
ಕೆಲವೊಮ್ಮೆ ದೇಹ ಸುಸ್ತಿನಿಂದ ಜಡವಾಗುತ್ತದೆ ಮತ್ತು ಗಮನವಿಲ್ಲದೆ ಜಿಮ್ ಸಲಕರಣೆಗಳನ್ನು ಬಳಸಲು ಹೋಗಿ ಗಾಯಗಳೂ ಆಗಬಹುದು! ಅದೇ ಕಾರಣಕ್ಕೆ ಫಿಟ್‌ನೆಸ್ ತರಬೇತುದಾರರಾಗಿರುವ ಆದಿ ರ್‍ಯಾಡ್ ಅವರು ಇತ್ತೀಚೆಗೆ ಒಂದು ಪಟ್ಟಿಯನ್ನು ಮಾಡಿ ಯಾವ ಕ್ಷಣದಲ್ಲಿ ಜಿಮ್‌ಗೆ ಹೋಗುವುದನ್ನು ತಪ್ಪಿಸುವುದು ಸೋಮಾರಿತನವಲ್ಲ, ಬದಲಾಗಿ ಜಾಣತನ ಎಂದು ಹೇಳಿದ್ದಾರೆ.
ಯಾವ ಸಂದರ್ಭದಲ್ಲಿ ಜಿಮ್ ಬಿಡಬೇಕು?
ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅವರು ಬರೆದಿರುವ ಪ್ರಕಾರ, “ವಾಸ್ತವದಲ್ಲಿ ಜಿಮ್ ಬಿಡಬೇಕಾದ ದಿನಗಳು” ಯಾವುವು ಎಂದು ಹೇಳಿದ್ದಾರೆ. ಅವರು ಕೆಲವು ಸನ್ನಿವೇಶಗಳನ್ನು ಮುಂದಿಟ್ಟಿದ್ದು, ಅಂತಹ ಸನ್ನಿವೇಶದಲ್ಲಿ ಜಿಮ್‌ಗೆ ಹೋದರೆ ವಿರುದ್ಧ ಪರಿಣಾಮವಾಗಬಹುದು ಎಂದು ಎಚ್ಚರಿಸಿದ್ದಾರೆ.
ಅನಾರೋಗ್ಯವಿದ್ದರೆ ಜಿಮ್ ಬೇಡ
ನಿಮಗೆ ಅನಾರೋಗ್ಯವಿದ್ದಾಗ ಜಿಮ್‌ಗೆ ಹೋಗಲೇಬಾರದು. ಅಂದರೆ ಜ್ವರ, ಸೋಂಕು, ಫ್ಲೂ ಇದ್ದಾಗ! ದೇಹ ಸ್ವಲ್ಪ ಸುಸ್ತಾಗಿದೆ ಜಿಮ್‌ಗೆ ಹೋಗದೆ ಇರುವುದು ಸರಿಯಲ್ಲ ಎಂದು ಅಂದುಕೊಳ್ಳುವುದೇ ತಪ್ಪು. ನಿಮ್ಮ ದೇಹ ಸ್ವಲ್ಪ ಸುಸ್ತಾಗಿರುವುದಿಲ್ಲ, ನಿಜವಾಗಿಯೂ ಆರೋಗ್ಯ ಕೆಟ್ಟಿರುತ್ತದೆ. ಗುಣಮುಖರಾಗಲು ನಿಮ್ಮ ದೇಹಕ್ಕೆ ಶಕ್ತಿಯ ಅಗತ್ಯವಿರುತ್ತದೆ. ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದರಿಂದ ಸ್ಥಿತಿ ಹದಗೆಡಬಹುದು.
ಜಿಮ್ ನಿಯಮ “ಕುತ್ತಿಗೆ ಮೇಲೆ/ ಕುತ್ತಿಗೆ ಕೆಳಗೆ” ಕಟ್ಟುನಿಟ್ಟಾಗಿ ಅನುಸರಿಸಬೇಕು. ಕುತ್ತಿಗೆಯ ಮೇಲೆ ಅಂದರೆ ನೆಗಡಿ ಅಥವಾ ಕೆಮ್ಮು ಇದ್ದರೆ ಸ್ವಲ್ಪ ವ್ಯಾಯಾಮ ಮಾಡಬಹುದು. ಆದರೆ ಕುತ್ತಿಗೆ ಕೆಳಗೆ ಅಂದರೆ ಜ್ವರದಿಂದ ದೇಹ ಸುಸ್ತಾಗಿದ್ದರೆ, ಎದೆ ನೋವು, ಹೊಟ್ಟೆನೋವು ಮೊದಲಾದ ಸಂದರ್ಭದಲ್ಲಿ ವಿಶ್ರಮಿಸಬೇಕು.
ಹಸಿದಿದ್ದರೆ ಜಿಮ್ ಮಾಡಬಾರದು
ಅಥವಾ ನೀವು ಇಡೀ ದಿನ ಏನೂ ತಿಂದಿರದೆ ಇದ್ದರೆ ವ್ಯಾಯಾಮ ಮಾಡಬಾರದು. ದೇಹದಲ್ಲಿ ಶಕ್ತಿ ಇಲ್ಲದಿದ್ದರೆ ಜಿಮ್‌ಗೆ ಹೋಗುವುದರಿಂದ ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲು ಪ್ರೊಟೀನ್ + ಕಾರ್ಬೋಹೈಡ್ರೇಟ್ ಇರುವ ಆಹಾರ ಸೇವಿಸಬೇಕು. ನಂತರ ಜಿಮ್‌ನಲ್ಲಿ ವ್ಯಾಯಾಮ ಮಾಡಬೇಕು.
ನಿದ್ರೆ ಮಾಡದ ದಿನ ಜಿಮ್ ಮರೆಯಿರಿ
ಹಿಂದಿನ ರಾತ್ರಿ ನಿದ್ರೆ ಸರಿಯಾಗಿ ಮಾಡದ ದಿನ ಮನೆಯಲ್ಲೇ ಇರುವುದು ಒಳಿತು. ಸರಿಯಾಗಿ ನಿದ್ರೆಯಾಗದೆ ಇದ್ದರೆ ಗಮನ ಕುಂದುತ್ತದೆ ಮತ್ತು ಗಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಕೀಲು ನೋವು ಇದ್ದಾಗ ಜಿಮ್ ಬೇಡ
ಕೀಲು ನೋವು ಅಥವಾ ಇತರ ಕಡೆಗೆ ನೋವು ಇದ್ದಾಗ ವ್ಯಾಯಾಮಕ್ಕೆ ಇಳಿಯಬಾರದು. ಚಲನೆ ಸಾಧ್ಯವಿದೆ. ಆದರೆ ನೋವುಂಟು ಮಾಡುವ ಸ್ನಾಯು ಇದ್ದರೆ ಜಿಮ್ ಕಸರತ್ತು ತೊರೆಯಬೇಕು. ಅಂತಹ ಸಂದರ್ಭದಲ್ಲಿ ನಡೆಯುವುದು, ವ್ಯಾಯಾಮ ಮಾಡುವುದು ಉತ್ತಮ.
ಭಾವನಾತ್ಮಕ ಆರೋಗ್ಯ ಮುಖ್ಯ
ಭಾವನಾತ್ಮಕವಾಗಿಯೂ ಆರೋಗ್ಯವಾಗಿರಬೇಕು. ತೀವ್ರ ಹತಾಶೆಯ ನಂತರ ತಕ್ಷಣ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವುದು ಸರಿಯಲ್ಲ. ಆಗ ನಡಿಗೆ, ಉಸಿರಾಟದ ವ್ಯಾಯಾಮ ಮತ್ತು ಶಾಂತ ಸ್ಥಿತಿಗೆ ಮರಳುವುದು ಮುಖ್ಯವಾಗುತ್ತದೆ. ಮನಸ್ಸು ಶಾಂತವಾದಾಗ ಅದ್ಭುತ ಅನುಭವ ಸಿಗುತ್ತದೆ. ಬದಲಾಗಿ ಹತಾಶೆಯನ್ನು ಮರೆತು ದೇಹ ದಂಡಿಸಿದರೆ ಸಾಮರ್ಥ್ಯ ಕಳೆದುಕೊಳ್ಳಬಹುದು. ಗುಣಮುಖರಾಗದೆ ಇದ್ದಾಗ, ಗಮನ ಕೇಂದ್ರೀಕೃತವಾಗದೆ ಇದ್ದಾಗ, ಹಸಿವೆಯಿಂದ ಇದ್ದಾಗ ದೇಹ ದಂಡಿಸಬಾರದು ಬದಲಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು.
“ಕುತ್ತಿಗೆ ಮೇಲೆ/ ಕುತ್ತಿಗೆ ಕೆಳಗೆ” ನಿಯಮ ಸರಿಯೆ?
ಹಿರಿಯ ಫಿಟ್‌ನೆಸ್ ಮತ್ತು ಲೈಫ್‌ಸ್ಟೈಲ್ ಸಲಹೆಗಾರರಾದ ಸಾಧನಾ ಸಿಂಗ್ ಹೇಳುವ ಪ್ರಕಾರ, “ಕುತ್ತಿಗೆ ಮೇಲಿನ ಅಸ್ವಸ್ಥತೆಯಲ್ಲಿ ಜಿಮ್‌ಗೆ ಹೋಗಬಹುದು ಎನ್ನುವುದು ಸಾಮಾನ್ಯ ನಿರ್ದೇಶನಗಳು. ಆದರೆ ಅದನ್ನು ವೈದ್ಯಕೀಯವಾಗಿ ಸರಿ ಎಂದು ಹೇಳಲಾಗದು. ಜ್ವರ ಅಥವಾ ದೇಹದಲ್ಲಿ ನೋವಿಲ್ಲದೆ ನೆಗಡಿಗೆ ಸೀಮಿತವಾದ ರೋಗವಾಗಿದ್ದರೆ ಲಘು ವ್ಯಾಯಾಮ ಮಾಡಬಹುದು. ಆದರೆ ಜ್ವರ ಬಂದಾಗ, ಚಳಿ ಜ್ವರ ಇದ್ದಾಗಲೂ ವ್ಯಾಯಾಮ ಮಾಡುವುದು ತಪ್ಪು.
“ಜ್ವರ, ಶೀತ, ಏರಿದ ಹೃದಯಬಡಿತ, ಉಸಿರಾಟದ ತೊಂದರೆ, ಎದೆ ಬಿಗಿತ, ತಲೆ ತಿರುಗುವಿಕೆ ಅಥವಾ ತೀವ್ರ ಕೆಮ್ಮು ಇದ್ದರೆ ಜಿಮ್‌ನಲ್ಲಿ ಕಸರತ್ತು ಮಾಡಬಾರದು. ಅಂತಹ ಸಂದರ್ಭಗಳು ರೋಗ ನಿರೋಧಕ ವ್ಯವಸ್ಥೆ ಒತ್ತಡದಲ್ಲಿರುವುದರ ಸ್ಪಷ್ಟ ಚಿಹ್ನೆಯಾಗಿದೆ ಮತ್ತು ಕಸರತ್ತು ಮಾಡುವುದರಿಂದ ಗುಣಮುಖರಾಗಲು ತಡವಾಗಬಹುದು ಮತ್ತು ಹೃದಯಾಘಾತದ ಅಪಾಯ ಬರಬಹುದು” ಎನ್ನುತ್ತಾರೆ ಸಾಧನಾ ಸಿಂಗ್.
ನಿದ್ರಾ ರಾಹಿತ್ಯ, ಆಹಾರದ ಕೊರತೆ ಮತ್ತು ಅತಿಯಾದ ಭಾವನಾತ್ಮಕ ಒತ್ತಡವು ಕಸರತ್ತಿನ ಕಡೆಗೆ ಸಂಪೂರ್ಣ ಗಮನ ಕೊಡಲು ಸಾಧ್ಯವಾಗದಂತೆ ಮಾಡುತ್ತದೆ. ಅದರಿಂದ ಅಪಾಯ ಸಂಭವಿಸಬಹುದು. ಒಟ್ಟು ಕಸರತ್ತಿನ ಸುರಕ್ಷೆಯ ಮೇಲೆ ಪರಿಣಾಮ ಬೀರಬಹುದು.
ಮೆದುಳಿಗೆ ಸುಸ್ತಾಗಿದ್ದಾಗ ಚಲನೆಯ ನಿಯಂತ್ರಣ ನಿಖರವಾಗಿ ಇರುವುದಿಲ್ಲ. ಸಮತೋಲನ ತಪ್ಪುತ್ತದೆ. ಸಂಧಿಗಳ ಸ್ಥಿರತೆ ಕಡಿಮೆಯಾಗಬಹುದು. ಅದರಿಂದ ನೋವು, ಉಳುಕು ಉಂಟಾಗಬಹುದು.
ಉಪವಾಸ ಅಥವಾ ಹಸಿವೆ ಇರುವಾಗ ಕಸರತ್ತು ಮಾಡಲು ಹೋದರೆ ತಲೆ ತಿರುಗಬಹುದು, ನರ ದೌರ್ಬಲ್ಯ ಕಂಡುಬರಬಹುದು ಮತ್ತು ಕಸರತ್ತಿನ ಸಂದರ್ಭದಲ್ಲಿ ನಿಖರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇರಬಹುದು.