ನಟಿ ಐಶ್ವರ್ಯಾ ಲಕ್ಷ್ಮಿ | Photo Credit : Aishwarya Lekshmi \ instagram.com

ಸಾಮಾಜಿಕ ಜಾಲತಾಣದ ಗದ್ದಲದಿಂದ ದೂರವಿದ್ದರೂ ತಮ್ಮ ಅಥವಾ ಇತರ ಮಹಿಳಾ ನಟಿಯರ AI ಎಡಿಟ್ಗಳು ಆನ್ಲೈನ್ನಲ್ಲಿ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದನ್ನು ಐಶ್ವರ್ಯಾ ಲಕ್ಷ್ಮಿ ಒಪ್ಪಿಕೊಳ್ಳುತ್ತಾರೆ.

ಇತ್ತೀಚೆಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರ ‘ಚುಟಮಲ್ಲೆ’ ಹಾಡಿನ AI ಸೃಷ್ಟಿತ ಎಡಿಟ್ಗಳ ಕುರಿತು ವಿವಾದ ಸೃಷ್ಟಿಯಾಗುವ ಮೊದಲೇ ತಮಿಳು ನಟಿ ಐಶ್ವರ್ಯಾ ಲಕ್ಷ್ಮಿ ತಮ್ಮ AI ಸೃಷ್ಟಿತ ವಿಷಯಗಳ ವಿರುದ್ಧ ದೃಢ ನಿಲುವು ತಳೆದಿದ್ದರು. 34 ವರ್ಷದ ಈ ನಟಿ ತಮ್ಮ ಮ್ಯಾನೇಜ್ಮೆಂಟ್ ತಂಡದ ಆಕ್ಷೇಪಣೆಗಳ ಹೊರತಾಗಿಯೂ ಒಂದು ವರ್ಷದ ಹಿಂದೆ ಇನ್ಸ್ಟಾಗ್ರಾಂನಿಂದ ದೂರ ಸರಿಯಲು ನಿರ್ಧರಿಸಿದ್ದರು.

ಕಳೆದ ಒಂದು ವರ್ಷದಿಂದ ಏಕೆ ಇನ್ಸ್ಟಾಗ್ರಾಂನಿಂದ ದೂರ ಉಳಿದಿದ್ದೇವೆ ಎಂಬುದನ್ನು ಮಾಧ್ಯಮಕ್ಕೆ ವಿವರಿಸಿರುವ ಐಶ್ವರ್ಯಾ, “ನನಗೆ AI ಎಡಿಟ್ಗಳು ನಿಜವಾಗಿಯೂ ಇಷ್ಟವಿಲ್ಲ. ನಾನು ಹಾಕುವ ಯಾವುದೇ ಫೋಟೋವನ್ನು ಅವರು ತಮ್ಮ AI ಎಡಿಟ್ಗಳಿಗೆ ಹಿನ್ನೆಲೆಯಾಗಿ ಬಳಸಿಕೊಳ್ಳುತ್ತಾರೆ” ಎಂದು ಉತ್ತರಿಸಿದ್ದಾರೆ.

ಸಾಮಾಜಿಕ ಜಾಲತಾಣದ ಗದ್ದಲದಿಂದ ದೂರವಿದ್ದರೂ ತಮ್ಮ ಅಥವಾ ಇತರ ಮಹಿಳಾ ನಟಿಯರ AI ಎಡಿಟ್ಗಳು ಆನ್ಲೈನ್ನಲ್ಲಿ ಹರಡುವುದನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದನ್ನು ಐಶ್ವರ್ಯಾ ಲಕ್ಷ್ಮಿ ಒಪ್ಪಿಕೊಳ್ಳುತ್ತಾರೆ.

“AI ಎಡಿಟ್ಗಳನ್ನು ನಿಯಂತ್ರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ ಆ ಸಮಯದಲ್ಲಿ ನನಗೆ ಬೇಸರವಾಗಿತ್ತು ಮತ್ತು ಇನ್ನಷ್ಟು AI ವೀಡಿಯೋಗಳನ್ನು ನೋಡಲು ಇಷ್ಟವಿರಲಿಲ್ಲ. ಹೀಗಾಗಿ ಇನ್ಸ್ಟಾಗ್ರಾಮ್ನಿಂದ ಹೊರಬಂದೆ” ಎಂದು ಅವರು ಹೇಳಿದ್ದಾರೆ.

ಇನ್ಸ್ಟಾಗ್ರಾಂನಿಂದ ದೂರ ಉಳಿದ ಕಾರಣ ಅವರು ಕೆಲವು ಬ್ರಾಂಡ್ ಒಪ್ಪಂದಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಆದರೆ ನಟಿಯಾಗಿ ತಮ್ಮಲ್ಲಿ ಸುಧಾರಣೆಯಾಗಿದೆ ಎಂದು ಅವರು ಹೇಳಿದ್ದಾರೆ.

“ಒಬ್ಬ ನಟಿಯಾಗಿ ಇನ್ನು ಮುಂದೆ ತೋರಿಕೆಯ ನಟನೆಯ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಕೆಲವೊಮ್ಮೆ ನಿಮ್ಮ ವೃತ್ತಿಜೀವನವು ಚೆನ್ನಾಗಿ ನಡೆಯದಿದ್ದರೂ ಎಲ್ಲವೂ ಸುಗಮವಾಗಿದೆ ಮತ್ತು ವರ್ಣಮಯವಾಗಿದೆ ಎಂದು ತೋರಿಸುವಂತಹ ಪೋಸ್ಟ್ ಹಾಕುವ ಒತ್ತಡವಿದ್ದಾಗ, ಆ ಒತ್ತಡವು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ” ಎಂದು ಐಶ್ವರ್ಯಾ ವಿವರಿಸಿದರು.

ಇಂತಹ ಒತ್ತಡವು ಜೀವನದ ಒಂದು ಹಂತದಲ್ಲಿ ತಮ್ಮ ಮೇಲೂ ಪರಿಣಾಮ ಬೀರಿತ್ತು ಎಂದು ಅವರು ಒಪ್ಪಿಕೊಂಡರು. ಹಾಗಿದ್ದರೂ ಇನ್ಸ್ಟಾಗ್ರಾಂನಿಂದ ವಿರಾಮ ಪಡೆದಂದಿನಿಂದ ತಮ್ಮ ಬಗ್ಗೆ ಮತ್ತು ನಟಿಯಾಗಿ ತಮ್ಮ ಸಾಮರ್ಥ್ಯಗಳ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಬೆಳೆಸಿಕೊಂಡಿರುವುದಾಗಿ ಹೇಳಿದ್ದಾರೆ. “ಸದ್ಯಕ್ಕೆ, ಸಾಮಾಜಿಕ ಮಾಧ್ಯಮದಲ್ಲಿ ಬೇರೆಯವರಂತೆ ಇರಬೇಕೆಂಬ ಒತ್ತಡ ನನಗಿಲ್ಲ ಮತ್ತು ಹಾಗೆ ಆಗಲು ಬಯಸುವುದಿಲ್ಲ” ಎಂದು ಅವರು ಹೇಳಿದರು.

ಅಲ್ಲದೆ ಪ್ರಸ್ತುತ ಸಾಮಾಜಿಕ ಮಾಧ್ಯಮ ವೇದಿಕೆಗೆ ಮರಳುವಂತಹ ಯಾವುದೇ ಯೋಜನೆ ತಮಗಿಲ್ಲ ಎಂದು ಹೇಳಿದ್ದಾರೆ.

ಐಶ್ವರ್ಯ ಲಕ್ಷ್ಮಿ ಇತ್ತೀಚೆಗೆ ನೆಟ್ಫ್ಲಿಕ್ ಸರಣಿ ‘ಲವ್’ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಡೇಟಿಂಗ್ ಅಪ್ಲಿಕೇಶನ್ ಮಾಲಕರಾದ ತಾರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸರಣಿಯ ಮೂಲಕ ಅವರು ಮೊದಲ ಬಾರಿಗೆ ಸೀರೀಸ್ ಲೋಕದ ನಟನೆಗೆ ಪದಾರ್ಪಣೆ ಮಾಡಿದ್ದಾರೆ.

ಈ ನಡುವೆ ಇದೇ ವಾರದ ಆರಂಭದಲ್ಲಿ ಜಾನ್ವಿ ಕಪೂರ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ‘ಚುಟ್ಟಮಲ್ಲೆ’ ಹಾಡಿನ ವೈರಲ್ AI ಎಡಿಟಿಂಗ್ ಅನ್ನು ಟೀಕಿಸಿದ್ದರು. “ಮಹಿಳೆಯರನ್ನು ಇಂದ್ರಿಯ ವಿಷಯವಾಗಿ ತೋರಿಸುವ (objectify) ಮತ್ತು ಒಪ್ಪಿಗೆ ಇಲ್ಲದೆ ಕಾಲ್ಪನಿಕ ವಿಷಯವನ್ನು ಪ್ರಸಾರ ಮಾಡಲು ತಂತ್ರಜ್ಞಾನದ ಕ್ರಿಮಿನಲ್ ದುರುಪಯೋಗವು ಲೈಂಗಿಕ ದೌರ್ಜನ್ಯಕ್ಕೆ ಸಮವಾಗಿರುತ್ತದೆ. ಉದ್ಯಮದ ಬಹುತೇಕ ಪ್ರತಿ ಮಹಿಳೆ ಇದರ ಕೆಲವು ಆವೃತ್ತಿಗಳನ್ನು ಎದುರಿಸಿದ್ದಾರೆ ಮತ್ತು ಎಲ್ಲೆಡೆ ಮಹಿಳೆಯರು objectify ಆಗುತ್ತಿದ್ದಾರೆ” ಎಂದು ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor