×
Ad

ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿ ಮೃತಪಟ್ಟ ಪಾಕಿಸ್ತಾನಿ ವೀಡಿಯೊ ಬ್ಲಾಗರ್ ಪ್ಯಾರಿ ಮರಿಯಂ

Update: 2025-12-06 19:15 IST

Photo Credit : instagram.com/pyarimaryam_

ಲಾಹೋರ್: ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಅಥವಾ ವೀಡಿಯೋ ಬ್ಲಾಗರ್ ಆಗಿದ್ದ ಪ್ಯಾರಿ ಮರಿಯಮ್ ಹೆರಿಗೆ ಸಮಯದಲ್ಲಿ ತೀವ್ರ ತೊಂದರೆಗಳಿಂದ ಬಳಲುತ್ತಿದ್ದು, ಲಾಹೋರ್ ನಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಸ್ವಲ್ಪ ಸಮಯದ ನಂತರ 26ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅವರ ಪತಿ ಅಹ್ಸಾನ್ ಇನ್ಸ್ಟಾಗ್ರಾಮ್‌ ನಲ್ಲಿ ಮರಿಯಂ ಮೃತಪಟ್ಟ ವಿಷಯವನ್ನು ದೃಢಪಡಿಸಿದ್ದು, ನವಜಾತ ಶಿಶುಗಳು ಬದುಕಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಡಿದ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.


 



(Screenshot of Ahsan Ali's statement on his wife's Instagram Stories.(Instagram)

“ಇಬ್ಬರೂ ಪುಟ್ಟ ಪುತ್ರರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ. ದಯವಿಟ್ಟು ವದಂತಿಗಳಿಂದ ದೂರವಿರಿ ಮತ್ತು ನಮ್ಮ ಪ್ರೀತಿಯ ಮರಿಯಂಗಾಗಿ ಪ್ರಾರ್ಥಿಸಿ” ಎಂದು ಎಲ್ಲರಿಗೂ ಭರವಸೆ ನೀಡುವ ಉರ್ದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಮರಿಯಂ ನಿಧನವು ಪಾಕಿಸ್ತಾನದ ಪ್ರಭಾವಿಗಳು ಮತ್ತು ಅಭಿಮಾನಿಗಳ ಹೃದಯ ಒಡೆದಿದೆ. ಬ್ಲಾಗ್ ನಡೆಸುತ್ತಿರುವ ಇತರರಾದ ಫಾತಿಮಾ ಜಾಫರಿ ಮತ್ತು ಕೆನ್ ಡಾಲ್ ಮೊದಲಾದವರು ಮರಿಯಂ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News