×
Ad

ತಾಪಮಾನ ಏರಿಕೆ ತಡೆಯಲು ಮರಗಳನ್ನು ನೆಡುವುದು ಪರಿಹಾರವಲ್ಲ!

ಅಧ್ಯಯನ ವರದಿ ಹೇಳುವುದೇನು?

Update: 2026-01-05 19:39 IST

ಸಾಂದರ್ಭಿಕ ಚಿತ್ರ | Photo Credit : freepik

ಮರಗಳನ್ನು ನೆಡುವುದು ನಗರದ ತಾಪಮಾನಕ್ಕೆ ಸರಳವಾದ ಪರಿಹಾರವಲ್ಲ, ದಾರಿ ತಪ್ಪಿದ ಹಸಿರೀಕರಣದ ಅಪಾಯಗಳು ನಗರದ ತಾಪಮಾನ ಏರಿಕೆಯನ್ನು ಇನ್ನಷ್ಟು ಹದಗೆಡಿಸಲಿವೆ.

ನಗರಗಳಲ್ಲಿ ಹವಾಮಾನದ ಧಗೆ ಏರುತ್ತಿರುವುದು ಸಹಜವಾಗಿ ಜಾಗತಿಕವಾಗಿ ಕಂಡುಬಂದಿರುವ ಬದಲಾವಣೆ. ನಗರ ಪ್ರದೇಶಗಳು ಬಿಸಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳುವ ಕಾರಣದಿಂದ ತಾಪಮಾನ ಏರಿಕೆಯಾಗುತ್ತದೆ. ಈ ತಾಪಮಾನ ಏರಿಕೆಯನ್ನು ತಡೆಯಲು ಸರಳ ಕ್ರಮವಾಗಿ ‘ಹಸಿರೇ ಉಸಿರು’ ಎಂದು ಸಸ್ಯಗಳನ್ನು ಮತ್ತು ಮುಖ್ಯವಾಗಿ ಮರಗಳನ್ನು ನೆಡಲಾಗುತ್ತಿದೆ. ನಗರಗಳನ್ನು ತಂಪು ಮಾಡುವ ಈ ಜನಪ್ರಿಯ ಮಾದರಿ ಎಷ್ಟು ಸರಿ? ವಾಸ್ತವದಲ್ಲಿ ಇದರಿಂದ ಎಷ್ಟು ನೆರವಾಗಲಿದೆ?

ಆಸ್ಟ್ರೇಲಿಯ, ಚೀನಾ, ಸೌದಿ ಅರೆಬಿಯ ಮತ್ತು ಸ್ವಿಝರ್ಲೆಂಡ್‌ನ ಸಂಶೋಧಕರು ಇತ್ತೀಚೆಗೆ ವಿವಿಧ ನಗರಗಳ ತಾಪಮಾನವನ್ನು ಹೋಲಿಸಿ ಅಧ್ಯಯನ ನಡೆಸಿದ್ದಾರೆ. ನಗರ ಪ್ರದೇಶಗಳಲ್ಲಿ ಮರಗಳು ಇರುವ ನಗರ, ಹುಲ್ಲುಗಾವಲು, ಕೃಷಿ ಭೂಮಿಗಳು ಮತ್ತು ಕಾಂಕ್ರೀಟ್ ಮತ್ತು ಅಸ್ಪಾಲ್ಟ್ ನಿರ್ಮಾಣಗಳೇ ಹೆಚ್ಚಿರುವ ನಗರಗಳನ್ನು ಪರೀಕ್ಷಿಸಿದ್ದಾರೆ. ಒಟ್ಟು ಜಾಗತಿಕವಾಗಿ 105 ದೇಶಗಳ 761 ಮಹಾನಗರಗಳನ್ನು ಅಧ್ಯಯನ ಮಾಡಿದ್ದಾರೆ, ಅದರಲ್ಲಿ ಭಾರತವೂ ಸೇರಿದೆ.

ಈ ಅಧ್ಯಯನದಲ್ಲಿ ‘ತಾಪಮಾನದ ನಿಯಂತ್ರಣ ಸಾಮರ್ಥ್ಯ’ ಎಂದು ವ್ಯಾಖ್ಯಾನಿಸಿದ ಅಳತೆಯನ್ನು ಸಂಶೋಧಕರು ಬಳಸಿಕೊಂಡಿದ್ದಾರೆ. ಅಂದರೆ ಸಸ್ಯವರ್ಗದ ಪ್ರದೇಶದ ತಾಪಮಾನದಿಂದ ನಿರ್ಮಾಣ ಪ್ರದೇಶದ ತಾಪಮಾನವನ್ನು ಕಳೆಯುವುದು. ಸಂಖ್ಯೆ ಋಣಾತ್ಮಕವಾಗಿ ಬಂದರೆ ಸಸ್ಯವರ್ಗ ತಂಪಾಗಿರುತ್ತದೆ ಮತ್ತು ಧನಾತ್ಮಕವಾಗಿ ಬಂದರೆ ಸಸ್ಯವರ್ಗ ಬಿಸಿಯಾಗಿರುತ್ತದೆ.

ಅಧ್ಯಯನಕಾರರು ಜನವರಿ 2ರಂದು ಸೈನ್ಸ್ ಅಡ್ವಾನ್ಸಸ್‌ನಲ್ಲಿ ಅಧ್ಯಯನದ ವಿವರಗಳನ್ನು ಪ್ರಕಟಿಸಿದ್ದಾರೆ.

ಅಧ್ಯಯನದಲ್ಲಿ ಕಂಡುಕೊಂಡ ದತ್ತಾಂಶವನ್ನು ವಿಶ್ಲೇಷಿಸಿದಾಗ ಸಂಶೋಧಕರಿಗೆ ವಿರೋಧಾಭಾಸಗಳು ಕಂಡುಬಂದವು. ಅನೇಕ ನಗರಗಳಲ್ಲಿ ಸಸ್ಯವರ್ಗ ತಂಪಾಗಿಸಿದ್ದವು. ಆದರೆ ಒಣ ಪ್ರದೇಶಗಳಲ್ಲಿ ಅವು ಬಿಸಿಯಾಗಿಸಿದ್ದವು. ಎಲ್ಲಾ ನಗರಗಳಲ್ಲಿ ಶೇ 78ರಷ್ಟು ಪ್ರಕರಣಗಳಲ್ಲಿ ಹುಲ್ಲುಗಾವಲುಗಳು ನಿರ್ಮಾಣ ಪ್ರದೇಶಗಳನ್ನು ತಂಪಾಗಿಸಿದ್ದವು. ಆದರೆ ಮರಗಳು ಶೇ 98ರಷ್ಟು ತಂಪಾಗಿಸಿದ್ದವು. ಆದರೆ ನಾಲ್ಕನೇ ಒಂದು ಭಾಗದಷ್ಟು ನಗರಗಳಲ್ಲಿ, ಮುಖ್ಯವಾಗಿ 1000 ಮಿಮೀರಷ್ಟು ಮಳೆ ಬೀಳುವ ಪ್ರದೇಶಗಳಲ್ಲಿ ನಗರದ ಹುಲ್ಲುಗಾವಲು ಮತ್ತು ಕೃಷಿ ಭೂಮಿಗಳು ನಿರ್ಮಾಣ ಹಂತಗಳಿಗಿಂತ ಹೆಚ್ಚು ಬಿಸಿಯಾಗಿದ್ದವು. ಹೀಗಾಗಿ ಒಟ್ಟು ನಗರವನ್ನು ಬಿಸಿಯಾಗುವಂತೆ ಮಾಡಿದ್ದವು. ಇಂತಹ ನೀರಡಗಿದ (ಶುಷ್ಕ) ನಗರಗಳಲ್ಲಿ ಮರಗಳು ಶೇ 2ರಷ್ಟು ಬಿಸಿಯಾಗಿದ್ದವು.

ಭೌತಿಕ ಪರಿಣಾಮಗಳ ಸಂಯೋಜನೆಯನ್ನು ಬಳಸಿ ಅವರು ಈ ವಿರೋಧಾಭಾಸವನ್ನು ವಿವರಿಸಿದ್ದಾರೆ. ಆವಿಭಾಷ್ಪವಿಸರ್ಜನೆ ಮೂಲಕ ಸಸ್ಯವರ್ಗವು ಒಂದು ಪ್ರದೇಶವನ್ನು ತಂಪಾಗಿಸಬಲ್ಲವು. ಅಂದರೆ ನೆಲದಿಂದ ನೀರು ಆವಿಯಾಗುವಿಕೆ ಮತ್ತು ಎಲೆಗಳಿಂದ ನೀರು ಆವಿರೂಪದಲ್ಲಿ ಹೊರಬಿಡುವಾಗ ಬಿಸಿಯನ್ನು ಹೊರದಬ್ಬುತ್ತದೆ. ಆದರೆ ಸಸ್ಯವರ್ಗಗಳು ಕೆಲವು ನಿರ್ಮಾಣ ಹೊರಮೈಗಳಿಗಿಂತ ಕಡಿಮೆ ಬೆಳಕನ್ನು ಪ್ರತಿಫಲಿಸಿದಾಗ ಹೆಚ್ಚು ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತವೆ. ಅಂತಹ ನೀರಡಗಿದ (ಶುಷ್ಕ) ನಗರಗಳಲ್ಲಿ ನೀರಿನ ಕೊರತೆಯಿರುವ ಕಾರಣದಿಂದ ತಂಪಾಗುವ ಸಾಮರ್ಥ್ಯ ದುರ್ಬಲವಾಗುತ್ತದೆ. ಹೀಗಾಗಿ ಆವಿಭಾಷ್ಪವಿಸರ್ಜನೆ ಸೀಮಿತವಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ಹೆಚ್ಚು ಬಿಸಿಯಾಗುತ್ತದೆ. ಅಂದರೆ ಪ್ರತಿಫಲನ ಚಾಲಿತ ಬಿಸಿ ಜೊತೆಗೆ ಸಂಗ್ರಹಿತ ಶಾಖವು ದುರ್ಬಲವಾದ ತಂಪಾಗಿಸುವಿಕೆಯನ್ನು ಮೀರುತ್ತದೆ.

ಅತಿಯಾದ ಬೇಸಗೆಯ ಧಗೆ ಇರುವಾಗ ನಗರಗಳಲ್ಲಿ ಏನಾಗುತ್ತದೆ ಎನ್ನುವುದನ್ನೂ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಶೇ 75ರಷ್ಟು ನಗರಗಳಲ್ಲಿ ನಿರ್ಮಾಣ ಪ್ರದೇಶಗಳಿಗೆ ಹೋಲಿಸಿದರೆ ಮರಗಳು ಏರುತ್ತಿರುವ ತಾಪಮಾನವನ್ನು ಕಡಿಮೆಗೊಳಿಸಿವೆ. ಹುಲ್ಲುಗಾವಲು ಮತ್ತು ಕೃಷಿಭೂಮಿಗಳು ಅದಕ್ಕೆ ವಿರುದ್ಧವಾದ ಪ್ರತಿಕ್ರಿಯೆ ತೋರಿಸಿ, ಶೇ 82ರಷ್ಟು ನಗರಗಳಲ್ಲಿ ಶೇ 71ರಷ್ಟು ಪ್ರಮಾಣದ ತಾಪಮಾನವನ್ನು ಹದಗೆಡಿಸಿವೆ. ಅದಕ್ಕೆ ಒಂದು ಮುಖ್ಯ ಕಾರಣ ಅತಿಯಾದ ಧಗೆಯು ಆವಿಯ ಒತ್ತಡದಲ್ಲಿ ದೊಡ್ಡ ಕೊರತೆಯೊಂದಿಗೆ ಬರುತ್ತದೆ. ಅದರಿಂದ ಅನೇಕ ಹುಲ್ಲುಗಾವಲುಗಳು ಮತ್ತು ಕೃಷಿ ಭೂಮಿಗಳು ಹೆಚ್ಚು ಬಲವಾಗಿ ನೀರಿನ ನಷ್ಟವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಆವಿಭಾಷ್ಪವಿಸರ್ಜನೆಯಿಂದ ತಂಪಾಗಿಸುವಿಕೆಯನ್ನು ಕಡಿಮೆಗೊಳಿಸಿದೆ.

ಹೀಗಾಗಿ ಮರಗಳನ್ನು ನೆಡುವುದು ನಗರದ ತಾಪಮಾನಕ್ಕೆ ಸರಳವಾದ ಪರಿಹಾರವಲ್ಲ, ದಾರಿ ತಪ್ಪಿದ ಹಸಿರೀಕರಣದ ಅಪಾಯಗಳು ನಗರದ ತಾಪಮಾನ ಏರಿಕೆಯನ್ನು ಇನ್ನಷ್ಟು ಹದಗೆಡಿಸಲಿವೆ.

ಕೃಪೆ: thehindu.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News