ಸ್ಮಾರ್ಟ್‌ಫೋನ್ ಗ್ರಾಹಕರಿಗೆ AI ಬೇಕು, ಪರ್ಫಾರ್ಮೆನ್ಸ್ ಕೂಡ ಮುಖ್ಯ; ಹೊಸ ವರದಿಯಲ್ಲೇನಿದೆ

Update: 2026-08-19 15:46 IST

ಸಾಂದರ್ಭಿಕ ಚಿತ್ರ | Photo Credit : magnific.com

ಸುಮಾರು ಶೇ 25ರಷ್ಟು ಖರೀದಿದಾರರು ತಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅದಕ್ಕೆ ತಕ್ಕಂತೆ ಸಲಹೆ ನೀಡುವ ಫೋನ್ ಅಗತ್ಯವಿದೆ ಎಂದು ಹೇಳಿದ್ದಾರೆ.

ಬಹುತೇಕ ಸ್ಮಾರ್ಟ್ಫೋನ್ ಖರೀದಿದಾರರು ಅಂದರೆ ಶೇ. 82ರಷ್ಟು ಮಂದಿ ಇದೀಗ AI ಸಕ್ರಿಯಗೊಂಡಿರುವ ಫೋನ್ಗಳನ್ನು ಖರೀದಿಸಲು ಬಯಸುತ್ತಾರೆ. ಅಂದರೆ ಸಂದರ್ಭೋಚಿತ ಸಹಾಯ, ಜನರೇಟಿವ್ ಫೋಟೋ ಎಡಿಟಿಂಗ್ ಮತ್ತು ದೃಶ್ಯ ಹುಡುಕಾಟದಲ್ಲಿ ಸಹಾಯ ಮಾಡುವ AI ಸಕ್ರಿಯ ಫೋನ್ ಬಯಸುತ್ತಿದ್ದಾರೆ. ಜುಲೈನಲ್ಲಿ Amazon ನಡೆಸಿದ ಮಾರುಕಟ್ಟೆ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸಮೀಕ್ಷೆಯ ಪ್ರಕಾರ ಖರೀದಿದಾರರು ಹೊಂದಾಣಿಕೆಯ ಬ್ಯಾಟರಿ ನಿರ್ವಹಣೆ ಮಾಡಬಹುದಾದ ಫೋನ್ಗಳನ್ನು ಸಹ ಬಯಸುತ್ತಿದ್ದಾರೆ.

ಸುಮಾರು ಶೇ 25ರಷ್ಟು ಖರೀದಿದಾರರು ತಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅದಕ್ಕೆ ತಕ್ಕಂತೆ ಸಲಹೆ ನೀಡುವ ಫೋನ್ ಅಗತ್ಯವಿದೆ ಎಂದು ಹೇಳಿದ್ದಾರೆ. ಶೇ 18ರಷ್ಟು ಮಂದಿಗೆ ಜನರೇಟಿವ್ ಫೋಟೋ ಎಡಿಟಿಂಗ್ ಅಗತ್ಯವಿದೆ. ಶೇ 17ರಷ್ಟು ಮಂದಿ ದೃಶ್ಯ ಹುಡುಕಾಟವನ್ನು ಬಯಸಿದ್ದಾರೆ. ಶೇ 11ರಷ್ಟು ಮಂದಿ ಹೊಂದಾಣಿಕೆಯ ಬ್ಯಾಟರಿ ನಿರ್ವಹಣೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿದವರಲ್ಲಿ ಶೇ 87ರಷ್ಟು ಮಂದಿ ತಮ್ಮ ಫೋನ್ಗಳು ಕಾರ್ಯಕ್ಷಮತೆ ಪ್ರದರ್ಶಿಸಬೇಕು ಮತ್ತು ವೇಗ ಹೊಂದಿರಬೇಕು ಎಂದು ಬಯಸಿದ್ದಾರೆ. ಶೇ 79ರಷ್ಟು ಮಂದಿ ಬ್ಯಾಟರಿ ಬಾಳಿಕೆ ಮತ್ತು ಶೇ 77 ಮಂದಿ ಕ್ಯಾಮರಾ ಗುಣಮಟ್ಟ ಬಯಸುತ್ತಾರೆ. ಬ್ಯಾಟರಿ ಗುಣಮಟ್ಟ ಹೆಚ್ಚು ಬಯಸುವ ಆದರೆ ಹೆಚ್ಚು ಕೊರತೆ ಇರುವ ಸಮಸ್ಯೆಯಾಗಿದೆ. ಶೇ 22ರಷ್ಟು ಮಂದಿ ಕ್ಯಾಮರಾ (17%) ಮತ್ತು ಕಾರ್ಯಕ್ಷಮತೆಗೆ (12%) ಮೊದಲು ತಮ್ಮ ಬ್ಯಾಟರಿ ಸರಿಯಾಗಬೇಕು ಎಂದು ಬಯಸಿದ್ದಾರೆ.

ಮೂವರು ಸ್ಮಾರ್ಟ್ಫೋನ್ ಖರೀದಿದಾರರಲ್ಲಿ ಒಬ್ಬರು ತಮ್ಮ ಮುಂದಿನ ಫೋನ್ಗೆ 50,000 ರೂ. ಅಥವಾ ಹೆಚ್ಚು ಬೆಲೆ ತೆರಲು ಬಯಸಿದ್ದಾರೆ. ಇದರಲ್ಲಿ 50,000 ರೂ.ನಿಂದ 75,000 ರೂ. ಶ್ರೇಣಿಯಲ್ಲಿ ಶೇ 15ರಷ್ಟು ಮಂದಿ ಇದ್ದರೆ, 75,000 ರೂ. ಮೀರಿದ ಬಜೆಟ್ನ ಫೋನ್ ಖರೀದಿಸಲು ಬಯಸಿರುವುದಾಗಿ ಶೇ 17ರಷ್ಟು ಮಂದಿ ಹೇಳಿದ್ದಾರೆ. ಮಹಾನಗರಗಳಲ್ಲಿ ಶೇ 18ರಷ್ಟು ಮಂದಿ, ಟೈರ್ 2ನಲ್ಲಿ ಶೇ 17ರಷ್ಟು ಮತ್ತು ಟೈರ್ 3 ರಲ್ಲಿ ಶೇ 15ರಷ್ಟು ಮಂದಿ 75,000 ರೂ. ಮೀರಿದ ಫೋನ್ಗಳನ್ನು ಖರೀದಿಸಲು ಬಯಸಿರುವುದಾಗಿ ಹೇಳಿದ್ದಾರೆ.

ಅತಿದೊಡ್ಡ ಭಾಗ ಅಂದರೆ, ಶೇ 42ರಷ್ಟು ಮಂದಿ 25,000 ರೂ.ನಿಂದ 50,000 ರೂ. ನಡುವೆ ಫೋನ್ ಖರೀದಿಸಲು ಬಯಸಿದ್ದಾರೆ. ಶೇ 21ರಷ್ಟು ಮಂದಿ 25,000 ರೂ. ರಿಂದ 35,000 ರೂ. ಮತ್ತು 35,000 ರೂ. ರಿಂದ 50,000 ರೂ. ನಡುವೆ ಫೋನ್ ಖರೀದಿಗೆ ಬಯಸಿದ್ದಾರೆ. ಶೇ 19ರಷ್ಟು ಮಂದಿ 15,000 ರೂ. ರಿಂದ 25,000 ರೂ. ನಡುವೆ ಮತ್ತು ಶೇ 7ರಷ್ಟು ಮಂದಿ 15,000 ರೂ.ಗಿಂತ ಕಡಿಮೆ ಬೆಲೆಯ ಫೋನ್ ಖರೀದಿಗೆ ಬಯಸಿದ್ದಾರೆ.

ಅರ್ಧಕ್ಕಿಂತ ಹೆಚ್ಚು, ಅಂದರೆ ಶೇ 54ರಷ್ಟು ಮಂದಿ ತಮ್ಮ ಫೋನ್ಗಳನ್ನು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇಟ್ಟುಕೊಳ್ಳುತ್ತಾರೆ. ಆದರೆ ಶೇ 48ರಷ್ಟು ಮಂದಿ ಮುಂದಿನ ಮೂರು ತಿಂಗಳಲ್ಲಿ ಅಪ್ಗ್ರೇಡ್ ಮಾಡಲು ಯೋಜಿಸಿದ್ದಾರೆ. ಫೋನ್ ಖರೀದಿಗೆ ನಿರ್ಧಾರ ಕೈಗೊಳ್ಳುವಾಗ ವಿಮರ್ಶೆಗಳು ಮತ್ತು ರೇಟಿಂಗ್ಗಳು ರಿಯಾಯಿತಿಗಿಂತ ಹೆಚ್ಚು ಮುಖ್ಯ ಎಂದು ಶೇ 47ರಷ್ಟು ಮಂದಿ ಹೇಳಿದ್ದಾರೆ. ಶೇ 35ರಷ್ಟು ಮಂದಿಗೆ ಬೆಲೆ ಮತ್ತು ಕೊಡುಗೆಗಳು ಮುಖ್ಯವಾಗುತ್ತವೆ.

ಸಮೀಕ್ಷೆಯಲ್ಲಿ AI ಮಾತನಾಡುವ ಹಂತದಿಂದ ಮುಂದೆ ಸಾಗುವ ನಿರೀಕ್ಷೆ ಇದ್ದರೂ, ಗ್ರಾಹಕರಿಗೆ ಕಾರ್ಯಕ್ಷಮತೆ, ಬ್ಯಾಟರಿ, ಕ್ಯಾಮರಾದಂತಹ ಮೂಲಭೂತ ಅಂಶಗಳು ಚೆನ್ನಾಗಿರಬೇಕು ಎಂದು ಸ್ಪಷ್ಟವಾಗಿದೆ. ಅದಕ್ಕಾಗಿ ಅವರು ಹೆಚ್ಚಿನ ಬೆಲೆ ತೆರಲು ಸಿದ್ಧರಾಗಿದ್ದಾರೆ.

ಕೃಪೆ: thehindu.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News