ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ಹೋದ ವಿದ್ಯಾರ್ಥಿಗಳಿಗೆ ಗಡೀಪಾರಾಗುವ ಭೀತಿ!
ಸಾಂದರ್ಭಿಕ ಚಿತ್ರ | Photo Credit : freepik.com
ಹೈಬ್ರಿಡ್ ಕೋರ್ಸ್ ಗುರುತಿಸುವಿಕೆಯಲ್ಲಾದ ಸಮಸ್ಯೆ ಮತ್ತು ವೀಸಾ ಅನುಸರಣೆಯನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವ ಗೊಂದಲದಿಂದಾಗಿ ವಿದ್ಯಾರ್ಥಿಗಳು ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ.
ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ನೋಂದಣಿಯಾದ ನೂರಾರು ಭಾರತೀಯ ವಿದ್ಯಾರ್ಥಿಗಳು ಇದೀಗ ವೀಸಾ ಅನಿಶ್ಚಿತತೆ ಮತ್ತು ಭಾರತಕ್ಕೆ ಗಡೀಪಾರಾಗುವ ಆತಂಕದಲ್ಲಿದ್ದಾರೆ. ಹೈಬ್ರಿಡ್ ಕೋರ್ಸ್ ಗುರುತಿಸುವಿಕೆಯಲ್ಲಾದ ಸಮಸ್ಯೆ ಮತ್ತು ವೀಸಾ ಅನುಸರಣೆಯನ್ನು ಹೊಸ ರೀತಿಯಲ್ಲಿ ವ್ಯಾಖ್ಯಾನಿಸುತ್ತಿರುವ ಗೊಂದಲದಿಂದಾಗಿ ವಿದ್ಯಾರ್ಥಿಗಳು ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಿಕ್ಕಿಹಾಕಿಕೊಂಡಿದ್ದಾರೆ. ಈ ಒಟ್ಟಾರೆ ಪ್ರಕರಣವು ಜರ್ಮನಿಯ ಅಂತಾರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯ ಮೇಲೆ ಪ್ರಶ್ನೆಗಳನ್ನು ಎತ್ತಿದೆ.
ನೂರಾರು ಭಾರತೀಯರಿಗೆ ಜರ್ಮನಿಯಲ್ಲಿ ಓದುವುದು ಜೀವನದ ದೊಡ್ಡ ತಿರುವು ಆಗಿರುತ್ತದೆ. ಜಾಗತಿಕವಾಗಿ ಗೌರವಯುತ ಪದವಿ, ಉತ್ತಮ ವೃತ್ತಿ ಆಯ್ಕೆಗಳು ಮತ್ತು ಯುರೋಪ್ನಲ್ಲಿ ಜೀವನ ಕಂಡುಕೊಳ್ಳುವ ಅವಕಾಶವಾಗಿರುತ್ತದೆ. ಬದಲಾಗಿ ಇದೀಗ ಬರ್ಲಿನ್ ಇಂಟರ್ನ್ಯಾಷನಲ್ ಯುನಿವರ್ಸಿಟಿಯಲ್ಲಿ (ಐಯು) ನೋಂದಣಿಯಾದ ಹಲವರಿಗೆ ವೀಸಾ ನೋಟೀಸ್ಗಳು ಬಂದಿವೆ. ನ್ಯಾಯಾಲಯದ ಮೇಲ್ಮನವಿಗಳು ಮತ್ತು ಗಡೀಪಾರಿನ ಭೀತಿ ಎದುರಾಗಿದೆ.
Euronews ವರದಿಯ ಪ್ರಕಾರ ಲಕ್ಷಾಂತರ ಟ್ಯೂಷನ್ ಶುಲ್ಕ ಮತ್ತು ಶಿಕ್ಷಣ ಸಾಲವನ್ನು ತೆತ್ತು ಜರ್ಮನಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿರುವ ವಿದ್ಯಾರ್ಥಿಗಳಿಗೆ ದೇಶ ತೊರೆಯುವಂತೆ ಹೇಳಲಾಗಿದೆ. ವಿದ್ಯಾರ್ಥಿಗಳು ಕಾನೂನು ಉಲ್ಲಂಘಿಸಿದ್ದಾರೆ ಎನ್ನುವ ಕಾರಣಕ್ಕೆ ಅಲ್ಲ. ಇದೀಗ ವಲಸೆ ಪ್ರಧಿಕಾರ ವಿಶ್ವವಿದ್ಯಾಲಯದ ಪ್ರೋಗ್ರಾಂ ಅನ್ನು ಭಿನ್ನವಾಗಿ ವ್ಯಾಖ್ಯಾನಿಸಿರುವುದು ಕಾರಣವಾಗಿದೆ.
ಡೆಸರ್ಟೇಶನ್ಗಳು ಮತ್ತು ಅಂತಿಮ ಮೊಡ್ಯುಲ್ಗಳ ಕಡೆಗೆ ಗಮನ ಹರಿಸುವ ಬದಲಾಗಿ ವಿದ್ಯಾರ್ಥಿಗಳು ವಿದೇಶದಲ್ಲಿ ಓದುವ ತಮ್ಮ ಕಾನೂನಾತ್ಮಕ ಸ್ಥಿತಿ ಕೈಜಾರಿ ಹೋಗಿರುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ವ್ಯವಸ್ಥೆಯಲ್ಲಿ ಗೊಂದಲ ಏರ್ಪಟ್ಟರಿವುದೇಕೆ?
ಈ ಸಮಸ್ಯೆಯ ಮೂಲ ಇರುವುದು ಹೈಬ್ರಿಡ್ ಮತ್ತು ಆನ್ಲೈನ್ ಪ್ರೋಗ್ರಾಂಗಳನ್ನು ವಿದ್ಯಾರ್ಥಿಗಳಿಗೆ ಹೇಗೆ ನೀಡಲಾಗುತ್ತಿದೆ ಎನ್ನುವುದನ್ನು ವೀಸಾ ಅನುಸರಣೆಗಾಗಿ ಮೌಲ್ಯಮಾಪನ ಮಾಡಲಾಗುತ್ತಿರುವುದು. ವಿದ್ಯಾರ್ಥಿಗಳು ಕಾನೂನಾತ್ಮಕವಾಗಿಯೇ ಜರ್ಮನಿಯನ್ನು ಪ್ರವೇಶಿಸಿದ್ದರೂ, ಅವರು ಮಾನ್ಯತೆ ಹೊಂದಿರುವ ವೈಯಕ್ತಿಕವಾಗಿ ಕಾಲೇಜಿಗೆ ಹೋಗಿ ಕಲಿಯುವ ಪದವಿ ಪ್ರೋಗ್ರಾಂಗಳಿಗೆ ದಾಖಲಾಗಿದ್ದರೂ, ಈ ಕೋರ್ಸ್ಗಳಿಗೆ ಸ್ವತಃ ಸೇರ್ಪಡೆಯಾಗಿ ಕಲಿಯುವ ಅಗತ್ಯವಿದೆಯೇ ಅಥವಾ ಆನ್ಲೈನ್ನಲ್ಲಿ ಕಲಿಯಬಹುದೇ ಎಂದು ಅಧಿಕಾರಿಗಳು ಇದೀಗ ಪ್ರಶ್ನಿಸುತ್ತಿದ್ದಾರೆ.
ಇಂತಹ ಸನ್ನಿವೇಶಗಳು ಅಂತಾರಾಷ್ಟ್ರೀಯ ಶಿಕ್ಷಣದ ಹಾದಿಯಲ್ಲಿನ ಸಂಕೀರ್ಣತೆಯನ್ನು ಪ್ರದರ್ಶಿಸುತ್ತವೆ. ಶೈಕ್ಷಣಿಕ ಕೋರ್ಸ್ ನೀಡುವಿಕೆ, ನಿಯಂತ್ರಣ ವಿವರಣೆಗಳು ಮತ್ತು ವೀಸಾ ಅನುಸರಣೆಯ ವ್ಯವಸ್ಥೆಗಳ ನಡುವೆ ಹೊಂದಾಣಿಕೆ ಇರಬೇಕಾದ ಮಹತ್ವವನ್ನು ಎತ್ತಿ ತೋರಿಸುತ್ತವೆ. ನೋಂದಣಿಯ ಸಮಯದಲ್ಲಿ ನೀಡಲಾಗಿರುವ ಮಾಹಿತಿ ಮತ್ತು ವಿಶ್ವವಿದ್ಯಾಲಯಗಳು ಮತ್ತು ಮಧ್ಯವರ್ತಿಗಳು ನೀಡಿರುವ ಮಾಹಿತಿಯುನ್ನು ಅನುಸರಿಸಿ ಜೀವನ ಬದಲಾಗುವ ನಿರ್ಧಾರಗಳನ್ನು ವಿದ್ಯಾರ್ಥಿಗಳು ಕೈಗೊಂಡಿರುತ್ತಾರೆ. ಶೈಕ್ಷಣಿಕ ಪ್ರೋಗ್ರಾಂಗೆ ನಿಯಂತ್ರಣದ ವ್ಯಾಖ್ಯಾನ ಅಥವಾ ಅನುಸರಣೆಯ ಅಗತ್ಯವು ಕಾಲಾನುಸಾರ ಭಿನ್ನವಾಗಿ ಅನ್ವಯಿಸುವ ಸಾಧ್ಯತೆಯಿದೆ. ಸೂಕ್ತ ಸ್ಪಷ್ಟತೆ ಮತ್ತು ಅನುಕೂಲತೆ ಇಲ್ಲದಾಗ ವಿಶ್ವಾಸವಿಟ್ಟು ವಿದ್ಯಾಭ್ಯಾಸಕ್ಕಾಗಿ ಹೋದ ವಿದ್ಯಾರ್ಥಿಗಳಲ್ಲಿ ಅನಿಶ್ಚಿತತೆ ಮೂಡಿಸಬಹುದು.
ಅಧಿಕಾರಿಗಳು ಮತ್ತು ವಿಶ್ವವಿದ್ಯಾಲಯಗಳ ನಡುವೆ ಸಿಲುಕಿದ ವಿದ್ಯಾರ್ಥಿಗಳು
ಇದೀಗ ನಿಯಮದ ಮರುವಿಶ್ಲೇಷಣೆಯಿಂದ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಬಹಳಷ್ಟು ಮಂದಿ 20,000 ಡಾಲರ್ಗೂ ಮೀರಿ ಶಿಕ್ಷಣ ಸಾಲವನ್ನು ಪಡೆದು ವಿದ್ಯಾಭ್ಯಾಸಕ್ಕಾಗಿ ಹೋಗಿರುತ್ತಾರೆ. ಅವರಲ್ಲಿ ಕೆಲವರಿಗೆ ಜರ್ಮನಿಯ ಕ್ಯಾಂಪಸ್ನಲ್ಲಿ ಓದುವ ಅವಕಾಶ ನೀಡಲಾಗಿದ್ದರೂ, ಇದೀಗ ನಿಯಮದ ಅನುಸರಣೆಗೆ ಸಂಬಂಧಿಸಿ ಭಾರತದಿಂದಲೇ ಆನ್ಲೈನ್ ಮೂಲಕ ವಿದ್ಯಾಭ್ಯಾಸವನ್ನು ಮಾಡುವಂತೆ ಸೂಚಿಸಲಾಗಿದೆ. ಅಂತಾರಾಷ್ಟ್ರೀಯ ವಿದ್ಯಾಭ್ಯಾಸವು ಸಂಸ್ಥೆಗಳು, ಮಧ್ಯವರ್ತಿಗಳು ಮತ್ತು ವಲಸೆ ಅಧಿಕಾರಿಗಳ ನಡುವಿನ ಸಂವಹನದಲ್ಲಿ ನಡೆಯುತ್ತದೆ. ಆದರೆ ಈ ಸಂವಹನದಲ್ಲಿ ಏನೇ ಸಮಸ್ಯೆ ಕಂಡುಬಂದರೂ ವಿದ್ಯಾರ್ಥಿಗಳು ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಅದನ್ನು ಅವರು ಸ್ವತಃ ನಿರ್ವಹಿಸಲು ಸಾಧ್ಯವಿಲ್ಲ.
ಭಾರತೀಯ ಕುಟುಂಬಗಳಿಗೆ ಎಚ್ಚರಿಕೆಯ ಗಂಟೆ
ಜರ್ಮನಿಯ ಪ್ರಕರಣ ತಮ್ಮ ಮಕ್ಕಳನ್ನು ವಿದೇಶಿ ಶಿಕ್ಷಣಕ್ಕೆ ಕಳುಹಿಸುವ ಭಾರತೀಯ ಕುಟುಂಬಗಳಿಗೆ ಎಚ್ಚರಿಕೆಯ ಗಂಟೆಯಾಗಲಿದೆ. ಜರ್ಮನಿ ಬಹಳ ದೀರ್ಘಕಾಲದಿಂದ ವಿದ್ಯಾರ್ಥಿಗಳಿಗೆ ಅನುಕೂಲಕರ ವಿದ್ಯಾಭ್ಯಾಸದ ತಾಣವಾಗಿದೆ. ಅಮೆರಿಕ ಮತ್ತು ಯುಕೆಗೆ ಹೋಲಿಸಿದರೆ ಪಾರದರ್ಶಕ ವ್ಯವಸ್ಥೆಯಿತ್ತು. ಇಂತಹ ಪ್ರಕರಣಗಳು ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡಲಿದೆ.
ದಾಖಲಾತಿ ಮತ್ತು ಶುಲ್ಕ ಪಾವತಿಯನ್ನು ಮೀರಿ ಪ್ರೋಗ್ರಾಂಗಳ ವಿವರಪಡೆಯುವುದು, ಟ್ಯೂಷನ್ ವಿವರ ಮತ್ತು ಕಾಲೇಜಿಗೆ ಹೋಗಿ ಕಲಿಯುವ ಅಗತ್ಯವಿದೆಯೇ, ವೀಸಾ ಲಭ್ಯತೆ ಇದೆಯೇ ಎನ್ನುವುದನ್ನು ಅಧಿಕೃತ ಮೂಲಗಳಿಂದ ತಿಳಿದುಕೊಳ್ಳಬೇಕಾಗುತ್ತದೆ. ಇದು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ಹೊರಿಸುತ್ತದೆ.
ಈಗಿನ ಅನಿಶ್ಚಿತತೆಯು ಹೊಸ ಶಿಕ್ಷಣ ಮಾದರಿಗಳು ಮತ್ತು ಹಳೇ ನಿಯಂತ್ರಣ ಚೌಕಟ್ಟುಗಳ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನೂ ತೋರಿಸುತ್ತದೆ. ಹೈಬ್ರಿಡ್ ಮತ್ತು ಫ್ಲೆಕ್ಸಿಬಲ್ ಪದವಿಗಳು ಜಾಗತಿಕವಾಗಿ ಸಾಮಾನ್ಯವೆನಿಸಿವೆ. ಆದರೆ ವಲಸೆ ನಿಯಮಗಳು ಇದಕ್ಕೆ ತಕ್ಕಂತೆ ರೂಪುಗೊಂಡಿಲ್ಲ.
ಇದು ಬರ್ಲಿನ್ಗೆ ಮಾತ್ರ ಸೀಮಿತ ಸಮಸ್ಯೆಯಲ್ಲ
ಪ್ರಸ್ತುತ ಅನೇಕ ವಿದ್ಯಾರ್ಥೀಗಳು ಬರ್ಲಿನ್ನಲ್ಲಿ ಗಡೀಪಾರಾಗುವ ಆತಂಕ ಎದುರಿಸುತ್ತಿದ್ದಾರೆ. ಕಾನೂನಾತ್ಮಕವಾಗಿ ಅಸ್ತಿತ್ವದಲ್ಲಿದ್ದಾರೆ, ದಾಖಲಾತಿ ಆಗಿದೆ ಆದರೆ ಪದವಿ ಪೂರ್ಣಗೊಳ್ಳುವವರೆಗೆ ದೇಶದಲ್ಲಿ ಇರಲು ಅವಕಾಶವಿಲ್ಲ.
ಅಂತಾರಾಷ್ಟ್ರೀಯ ವಿದ್ಯಾಭ್ಯಾಸದಲ್ಲಿ ವಿಶ್ವಾಸ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಸಮಯ, ಸಂಪನ್ಮೂಲ ಮತ್ತು ವೈಯಕ್ತಿಕ ಆಶೋತ್ತರಗಳನ್ನು ಇಟ್ಟುಕೊಂಡು ವಿದೇಶಿ ವಿದ್ಯಾಭ್ಯಾಸಕ್ಕೆ ಹೋಗಿರುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಾಧ್ಯವಾಗುವಂತಹ ನಿರಂತರ ಮಾಹಿತಿ, ಸಂಬಂಧಿತ ವ್ಯವಸ್ಥೆಗಳು ಮತ್ತು ಎರಡೂ ಕಡೆ ಬದ್ಧತೆ ಇರಬೇಕಾಗುತ್ತದೆ.
ಜಾಗತಿಕವಾಗಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸಂಚರಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಬರ್ಲಿನ್ ವಿಶ್ವವಿದ್ಯಾಲಯದ ಅನಿಶ್ಚಿತತೆ ಇತರೆಡೆಗಳಲ್ಲೂ ವ್ಯವಸ್ಥೆ ವಿಫಲವಾಗವ ಆತಂಕವನ್ನು ಒಡ್ಡಲಿದೆ.
ಕೃಪೆ: India Today