ಖಾಸಗಿ ವಲಯ ಮತ್ತು ಪ್ರಜಾಪ್ರಭುತ್ವದ ಪ್ರಶ್ನೆ
ಆಡಳಿತಾರೂಢ ಬಿಜೆಪಿಯ ಮಾತು ಮತ್ತು ನೀತಿಗಳು ಕಾರ್ಮಿಕರು ಮತ್ತು ಸಾಮಾಜಿಕವಾಗಿ ದಮನಿತ ವರ್ಗಗಳ ವಿರುದ್ಧ ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಸಂಪೂರ್ಣವಾಗಿ ಜಾಗ ಮಾಡಿಕೊಟ್ಟಿವೆ. 2019-2020ರಲ್ಲಿ ಜಾರಿಗೆ ತಂದ ಕಾರ್ಮಿಕ ಕಾನೂನು ‘ಸುಧಾರಣೆಗಳು’ ಖಾಸಗಿಯವರ ಲಾಭಕ್ಕೆ ಆದ್ಯತೆ ಮತ್ತು ಕಾರ್ಮಿಕರನ್ನು ದುರ್ಬಲರನ್ನಾಗಿಸುವ ಅಂಶಗಳನ್ನೇ ಸ್ಪಷ್ಟವಾಗಿ ತೋರಿಸುತ್ತವೆ. ‘ಸುಧಾರಣೆ’ ಹೆಸರಿನ ಈ ಕ್ರಮಗಳು ಮಾಲಕ ವರ್ಗ ಮತ್ತು ಕಾರ್ಮಿಕರ ನಡುವಿನ ಹಿತಾಸಕ್ತಿಗಳ ಸ್ಪಷ್ಟ ವಿಭಜನೆ ಮಾಡಿವೆ.
- ಅರ್ಜುನ್ ಬ್ಯಾನರ್ಜಿ
ನಿರುದ್ಯೋಗದ ಸಮಸ್ಯೆ ಭಾರತದಲ್ಲಿ ಪ್ರತಿಪಕ್ಷಗಳ ತೀವ್ರ ಟೀಕೆಗೆ ಮತ್ತು ನಿರಂತರ ಚರ್ಚೆಗೆ ವಿಷಯವಾಗಿದೆ. ಆಡಳಿತಾರೂಢ ಬಿಜೆಪಿ ದೇಶವನ್ನು, ಅದರಲ್ಲೂ ವಿಶೇಷವಾಗಿ ಅದರ ಯುವಜನರನ್ನು ಸಂಕಷ್ಟದಲ್ಲಿ ಸಿಲುಕಿಸಿದೆ ಎಂಬ ಪ್ರತಿಪಕ್ಷಗಳ ಆರೋಪ ಸತ್ಯವೂ ಆಗಿದೆ. ನಿರುದ್ಯೋಗ ಪರಿಸ್ಥಿತಿಯ ಚರ್ಚೆಯ ನಡುವೆ, ಉದ್ಯೋಗದ ಘನತೆ ಮತ್ತು ನ್ಯಾಯಯುತ ಪರಿಸ್ಥಿತಿಯ ಸಮಸ್ಯೆ ಗೌಣವಾಗಿರುವುದು ಮತ್ತೊಂದು ವಿಚಾರ. ದೇಶದ ಜನರು ಕನಿಷ್ಠಕ್ಕಿಂತ ಹೆಚ್ಚಿನದನ್ನು ಆಶಿಸಬಾರದು ಮತ್ತು ನ್ಯಾಯಯುತ ವೇತನ, ಕಟ್ಟುನಿಟ್ಟಾದ ಸೀಮಿತ ಕೆಲಸದ ಸಮಯ, ಉದ್ಯೋಗ ಭದ್ರತೆಯಂತಹ ಪ್ರಶ್ನೆಗಳನ್ನು ಎತ್ತುವ ಬದಲು, ಸಿಕ್ಕಿರುವ ಉದ್ಯೋಗಕ್ಕಾಗಿ ಸಮಾಧಾನದಿಂದಿರಬೇಕು ಎಂಬ ಧೋರಣೆಯೂ ಇರುವಂತಿದೆ.
ಆಡಳಿತಾರೂಢ ಬಿಜೆಪಿಯ ಮಾತು ಮತ್ತು ನೀತಿಗಳು ಕಾರ್ಮಿಕರು ಮತ್ತು ಸಾಮಾಜಿಕವಾಗಿ ದಮನಿತ ವರ್ಗಗಳ ವಿರುದ್ಧ ಬಂಡವಾಳಶಾಹಿ ಹಿತಾಸಕ್ತಿಗಳಿಗೆ ಸಂಪೂರ್ಣವಾಗಿ ಜಾಗ ಮಾಡಿಕೊಟ್ಟಿವೆ. 2019-2020ರಲ್ಲಿ ಜಾರಿಗೆ ತಂದ ಕಾರ್ಮಿಕ ಕಾನೂನು ‘ಸುಧಾರಣೆಗಳು’ ಖಾಸಗಿಯವರ ಲಾಭಕ್ಕೆ ಆದ್ಯತೆ ಮತ್ತು ಕಾರ್ಮಿಕರನ್ನು ದುರ್ಬಲರನ್ನಾಗಿಸುವ ಅಂಶಗಳನ್ನೇ ಸ್ಪಷ್ಟವಾಗಿ ತೋರಿಸುತ್ತವೆ. ‘ಸುಧಾರಣೆ’ ಹೆಸರಿನ ಈ ಕ್ರಮಗಳು ಮಾಲಕ ವರ್ಗ ಮತ್ತು ಕಾರ್ಮಿಕರ ನಡುವಿನ ಹಿತಾಸಕ್ತಿಗಳ ಸ್ಪಷ್ಟ ವಿಭಜನೆ ಮಾಡಿವೆ.
ನಂತರದ್ದು ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಗೊಳಿಸಿದ ಕ್ರಮ. ಸರಕಾರ ತನ್ನ ಒಂಭತ್ತು ವರ್ಷಗಳ ಅಧಿಕಾರದಲ್ಲಿ ಸಾರ್ವಜನಿಕರಿಂದ ಖಾಸಗಿ ಕೈಗಳಿಗೆ ಸಂಪತ್ತಿನ ವರ್ಗಾವಣೆಯ ನವ ಉದಾರವಾದಿ ಕಾರ್ಯಸೂಚಿಯನ್ನು ವೇಗಗೊಳಿಸಿತು. ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಸಾಂವಿಧಾನಿಕ ಕರ್ತವ್ಯ. ಆದರೆ ಅದನ್ನೊಂದು ಅಗತ್ಯವಾಗಿ ಪರಿಗಣಿಸಲಾಗುತ್ತಿಲ್ಲ. ಬದಲಿಗೆ, ಆದಾಯ ಮತ್ತು ಲಾಭದ ದೃಷ್ಟಿಕೋನ ಎಲ್ಲವನ್ನೂ ಬದಿಗೆ ಸರಿಸುತ್ತಿದೆ.
ಖಾಸಗೀಕರಣದ ಇನ್ನೊಂದು ಪ್ರಜಾಪ್ರಭುತ್ವ ವಿರೋಧಿ ಮುಖವನ್ನೂ ಇಲ್ಲಿ ಗಮನಿಸಬೇಕು. ಅದು ಉದ್ಯೋಗದಲ್ಲಿರುವವರ ಅನುಭವಕ್ಕೆ ಸಂಬಂಧಿಸಿದ್ದು. ಖಾಸಗೀಕರಣದ ಪ್ರಜಾಪ್ರಭುತ್ವ ವಿರೋಧಿ ಸ್ವಭಾವ ಕೇವಲ ಮಾಲಕತ್ವದ ಪ್ರಶ್ನೆಗೆ ಸೀಮಿತವಾಗುವುದಿಲ್ಲ. ಆದರೆ ಕೆಲಸದ ಸ್ಥಳದಲ್ಲಿ ದಬ್ಬಾಳಿಕೆಯ ಮತ್ತು ಶೋಷಣೆಯ ಸನ್ನಿವೇಶಕ್ಕೂ ದೊಡ್ಡ ಮಟ್ಟದ ಕಾರಣವಾಗಿದೆ ಅದು.
ಖಾಸಗಿ ಉದ್ಯೋಗ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದು ನಿಜ. ಕೌಶಲ್ಯಾಧಾರಿತ ಉನ್ನತ ಉದ್ಯೋಗಗಳು ಲಾಭದಾಯಕವಾಗಿದ್ದರೂ ಮತ್ತು ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ದಮನಿತ ವರ್ಗದವರಿಗೆ ಉತ್ತಮ ಬದುಕಿನೆಡೆಗೆ ಸಾಗಲು ಉತ್ತಮ ಅವಕಾಶವೇ ಆದರೂ, ಅದರ ಪರಿಣಾಮವಾಗಿ, ಕೌಶಲ್ಯ ರಹಿತ ಶ್ರಮದಾಯಕ ಕೆಲಸದಲ್ಲಿರುವ ಅಪಾರ ಸಂಖ್ಯೆಯ ಕಾರ್ಮಿಕರ ಶೋಷಣೆಯ ಮುಂದುವರಿಕೆಯಾಗಿದೆ.
ಕೆಲಸ ಮಾಡುವ ವೃತ್ತಿಪರರಿಗೆ, ವಿಶೇಷವಾಗಿ ಓದು ಮುಗಿಸಿ ಆಗಷ್ಟೇ ಕೆಲಸಕ್ಕೆ ಸೇರುವವರಿಗೆ ಮತ್ತು ಕೆಲವೊಮ್ಮೆ ಎರಡನ್ನೂ ನಿಭಾಯಿಸುವ ಯುವಕರಿಗೆ ಇರುವುದು ಅತ್ತ ದರಿ, ಇತ್ತ ಪುಲಿ ಎಂಬ ಎರಡೇ ಆಯ್ಕೆಗಳು. ಎರಡರಿಂದಲೂ ತಪ್ಪಿಸಿಕೊಂಡಿರಲು ಈ ಇಕ್ಕಟ್ಟನ್ನು ಅನುಭವಿಸಲೇಬೇಕು ಎನ್ನುವಂತಾಗಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಅದು ಸೃಷ್ಟಿಸುವ ಸಾಮಾಜಿಕ ಮತ್ತು ಆರ್ಥಿಕ ಒತ್ತಡಗಳೊಂದಿಗೆ ಹೋರಾಡುತ್ತಿರುವಾಗ, ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಒದ್ದಾಡುತ್ತಿರುವವರಿಗೆ, ಉದ್ಯೋಗವಿದ್ದರೆ ಸಾಕು ಎಂಬ ಸ್ಥಿತಿಯಲ್ಲಿರುವವರಿಗೆ ಒಂದೇ, ಕಡಿಮೆ ವೇತನ ನೀಡಲಾಗುತ್ತದೆ ಅಥವಾ ಇರುವ ವೇತನವನ್ನೂ ಕಡಿತಗೊಳಿಸಲಾಗುತ್ತದೆ.
ಉದ್ಯೋಗದಾತರು ಮತ್ತು ಅವರ ಉದ್ಯೋಗಿಗಳ ನಡುವೆ ಒಂದು ವಿಚಿತ್ರ ಬಗೆಯ ಅಸಮತೋಲನವಿದೆ. ಕೆಲಸದ ಸ್ಥಳದಲ್ಲಿ ಮತ್ತು ಹೆಚ್ಚು ನಿಯಂತ್ರಣ ಇರುವಲ್ಲಿ ಈ ಸಮಸ್ಯೆ ಇನ್ನೂ ದೊಡ್ಡ ಗಾತ್ರದ್ದಾಗಿದೆ, ಅಲ್ಲಿ ಕೆಲಸಗಾರರ ಹಕ್ಕುಗಳು ಮುಖ್ಯವಾಗುವುದಿಲ್ಲ. ಅದಕ್ಕೆ ಬದಲು ಯಾವುದನ್ನೂ ಪ್ರತಿಭಟಿಸದೆ ಕೆಲಸ ಮಾಡಿಕೊಂಡು ಹೋಗಬಲ್ಲ ಉದ್ಯೋಗಿಗಳ ಹರಿವು ಮಾತ್ರ ಇರಬೇಕೆಂದು ಬಯಸುವ ವ್ಯವಸ್ಥೆ ಅದಾಗಿದೆ. ಸರಕಾರ ಕೇವಲ ಉದ್ಯೋಗಗಳ ಸೃಷ್ಟಿಗಾಗಿ ಖಾಸಗಿ ವಲಯದತ್ತ ನೋಡುತ್ತಿದ್ದರೆ, ಅದು ತನ್ನದೇ ಸಾಮಾಜಿಕ ಮಾದರಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತದೆ, ಅಂಥ ವ್ಯವಸ್ಥೆಯಲ್ಲಿ ಬಂಡವಾಳದಾರರು ಮತ್ತು ತಲತಲಾಂತರದಿಂದ ಸಂಪತ್ತನ್ನು ಹೊಂದಿರುವವರು, ಇಲ್ಲದವರ ಮೇಲೆ ಭಯಂಕರ ಹತೋಟಿಯನ್ನು ಹೊಂದುತ್ತಾರೆ.
ಔಪಚಾರಿಕ ಆರ್ಥಿಕತೆಯ ಕಾರ್ಯಪಡೆ ಅದರ ಕಾರ್ಯಚಟುವಟಿಕೆ ಮತ್ತು ಸಂಯೋಜನೆಯಲ್ಲಿ ಸಮಾಜದ ಶ್ರೇಣಿಗಳನ್ನು ಪ್ರತಿಬಿಂಬಿಸುತ್ತದೆ. ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವವರು ಮತ್ತು ಮಾಲಕತ್ವ ಹೊಂದಿರುವವರು ಸಾಮಾನ್ಯವಾಗಿ ಮೇಲ್ಜಾತಿ ಪುರುಷರೇ ಆಗಿರುತ್ತಾರೆ. ಆದರೆ ಮಹಿಳೆಯರು ಒಂದು ಮಟ್ಟಿನ ವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಪುರುಷರಿಗೂ ಅವರ ವೇತನಕ್ಕೂ ಅಂತರ ಒಂದೆಡೆಯಾದರೆ, ಲೈಂಗಿಕ ಕಿರುಕುಳದಂಥ ಸ್ಥಿತಿ ಎದುರಿಸುವುದು ಮತ್ತೊಂದೆಡೆ. ಐಟಿ ಮತ್ತು ಮಾಧ್ಯಮದಂತಹ ಹೆಚ್ಚು ಎದ್ದು ಕಾಣಿಸುವ ಮತ್ತು ಪ್ರಭಾವಶಾಲಿ ಕ್ಷೇತ್ರಗಳಲ್ಲಿ ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಪ್ರಾತಿನಿಧ್ಯ ಗಮನಾರ್ಹವಾಗಿ ಕಡಿಮೆಯಿದೆ. ಕೆಲಸದ ಸ್ಥಳಗಳಲ್ಲಿನ ವ್ಯಾಪಕವಾದ ವ್ಯಕ್ತಿ ಪೂಜೆಯ ಸಂಸ್ಕೃತಿ ಕೂಡ ಇಂಥ ಕಡೆಗಳಲ್ಲಿ ಸ್ಥಾನಮಾನ ಮತ್ತು ಅಧೀನತೆಯ ಗೀಳು ಅನಿಯಂತ್ರಿತವಾಗಿ ಮುಂದುವರಿಯುವುದನ್ನು ತೋರಿಸುತ್ತದೆ.
ಶಿಕ್ಷಣದ ಪ್ರಕ್ರಿಯೆ ಮತ್ತು ಫಲಿತಾಂಶಗಳು ಯುವಜನರನ್ನು ‘ಉದ್ಯೋಗಯೋಗ್ಯ’ರನ್ನಾಗಿಸುತ್ತವೆ ಎಂಬ ಕಲ್ಪನೆಯೂ ಇದರ ಇನ್ನೊಂದು ಸ್ವರೂಪದ ಮುಂದುವರಿಕೆ. ಇದರರ್ಥ, ಇತರರನ್ನು ಹೊರತುಪಡಿಸಿ ಕೆಲವು ಕೌಶಲ್ಯಗಳನ್ನು ಹೊಂದಿರುವ ಉದ್ಯೋಗಿಗಳ ಬೇಡಿಕೆಗೆ ಅಗತ್ಯವಾದುದು ಸೃಷ್ಟಿಯಾಗುತ್ತದೆ ಎಂಬುದು. ಜೊತೆಗೇ ಇದು ‘ಕಟ್-ಥ್ರೋಟ್’ ಸಂಸ್ಕೃತಿಯನ್ನೂ ಪ್ರೇರೇಪಿಸುತ್ತದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಪರ್ಧೆ, ಟೆಕ್, ಫೈನಾನ್ಸ್ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಅರ್ಹರಾಗುವ ಧಾವಂತದಲ್ಲಿ ಲಕ್ಷಾಂತರ ಹದಿಹರೆಯದವರು ಶೋಷಣೆಯ ಖಾಸಗಿ ಶಾಲೆಗಳು ಮತ್ತು ‘ಕೋಚಿಂಗ್’ ಕೇಂದ್ರಗಳಿಗೆ ತಳ್ಳಲ್ಪಟ್ಟಿದ್ದಾರೆ, ಆದರೆ ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳು ‘ಗೌರವಾನ್ವಿತ’ ಉದ್ಯೋಗ ಎಂದು ಇವತ್ತಿನ ಸನ್ನಿವೇಶ ಪರಿಗಣಿಸುವಂಥ ಕೆಲಸವನ್ನು ಖಾತರಿಪಡಿಸಲು ಸಾಧ್ಯವಾಗದೆ ಹಿಂದಕ್ಕೆ ಸರಿಯುವಂತಾಗಿದೆ. ಇತಿಹಾಸ, ರಾಜಕೀಯ, ಸಮಾಜ ಮತ್ತು ಸಂಸ್ಕೃತಿಯ ವಿಚಾರಗಳನ್ನು ಕೇವಲ ಪೀತ ಪತ್ರಿಕೋದ್ಯಮ ಮತ್ತು ಬಲಪಂಥೀಯ ಟ್ರೋಲ್ ಸೇನೆಗಳಿಗೆ ಮೀಸಲಿಡುವ ರಾಜಕೀಯ ಇನ್ನೊಂದೆಡೆ ಪ್ರಬಲವಾಗಿದೆ.
ಸೃಜನಶೀಲ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಒಳಗೊಂಡಿರುವ ಕ್ಷೇತ್ರಗಳಿಗೆ ಅಂಟಿಕೊಳ್ಳುವವರು, ಕಾರ್ಪೊರೇಟ್ ಮತ್ತು ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಅನಿವಾರ್ಯವಾಗಿದ್ದರೂ ಅದು ತಮ್ಮ ಕೆಲಸವನ್ನು ಅಪವೌಲ್ಯಗೊಳಿಸುತ್ತದೆ ಎಂಬುದನ್ನು ಅರಿತಿದ್ದಾರೆ. ಯಾವುದೇ ಉತ್ಪನ್ನ ಅಥವಾ ಸೇವೆ ಮಾರ್ಕೆಟಿಂಗ್ ಮತ್ತು ಪ್ರಭಾವವಿಲ್ಲದೆ ಯಶಸ್ವಿಯಾಗುವುದಿಲ್ಲ ಎಂಬ ವಾಸ್ತವದ ಹೊರತಾಗಿಯೂ, ಸೃಜನಶೀಲ ಪ್ರಚಾರಗಳು, ಬರವಣಿಗೆ, ವಿಷಯ ತಂತ್ರಗಾರಿಕೆ ಇತ್ಯಾದಿ ಕೌಶಲ್ಯಗಳು ಗೊತ್ತಿರುವವರಿಗೆ ಉದ್ಯೋಗದಾತರು ತಾವು ಪಡೆಯುವ ಆದಾಯಕ್ಕೆ ಅನುಗುಣವಾಗಿ ಸಂಬಳ ನೀಡುವುದಿಲ್ಲ. ಮಾನವಿಕತೆಯನ್ನು ಅಧ್ಯಯನ ಮಾಡುವುದು ಕೆಟ್ಟ ವೃತ್ತಿ ಆಯ್ಕೆಯಾಗಿದೆ ಎಂದು ವಾದಿಸುವ ಮೂಲಕ, ಕಡಿಮೆ ಸಂಬಳದ ಸ್ಥಿತಿಯನ್ನು ತರ್ಕಬದ್ಧ ಎನ್ನುವಂತಾಗಿಸಲಾಗಿದೆ, ಆದರೆ ವಾಸ್ತವದಲ್ಲಿ, ಬದುಕಿಗೆ ಏನು ಬೇಕಿತ್ತೋ ಅದರಿಂದ ಮಾತ್ರ ದೂರ ಹೋಗುತ್ತಿದ್ದೇವೆ ಎಂಬ ಸರಳ ಸತ್ಯ ಮನವರಿಕೆಯಾಗದೆ ಉಳಿದಿದೆ.
ಐಟಿ ವಲಯದಲ್ಲಿಯೂ ಸಂಪತ್ತು ಮೇಲಕ್ಕೆ ಹರಿಯುವ ಪ್ರವೃತ್ತಿ ಹಾಗೇ ಉಳಿದಿದೆ, ಏಕೆಂದರೆ ಕಂಪೆನಿಗಳ ಅತ್ಯಧಿಕ ಮತ್ತು ಕಡಿಮೆ ಸಂಬಳದ ಉದ್ಯೋಗಿಗಳ ನಡುವಿನ ವೇತನದ ಅಂತರ ಹೆಚ್ಚುತ್ತಲೇ ಇದೆ. ಲಕ್ಷಾಂತರ ಜನರ ಕೆಲಸದಿಂದ ಉತ್ಪತ್ತಿಯಾಗುವ ವೌಲ್ಯವನ್ನು ಉನ್ನತ ನಿರ್ವಹಣೆ ಮತ್ತು ಶೇರುದಾರರು ಸ್ವಾಧೀನಪಡಿಸಿಕೊಳ್ಳುತ್ತಾರೆ. ಆದರೆ ಉಳಿದವರು ಅಲ್ಪಮೊತ್ತಕ್ಕೆ ಕೆಲಸ ಮಾಡುತ್ತಾರೆ. ಇದು ಭಾರತದಲ್ಲಿನ ಆರ್ಥಿಕ ಅಸಮಾನತೆಯ ನೈಜತೆಯನ್ನು ಪ್ರತಿಬಿಂಬಿಸುತ್ತದೆ.
ಇವೆಲ್ಲದರ ಹೊರತಾಗಿಯೂ, ಕಾರ್ಪೊರೇಟ್ ಮತ್ತು ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆ ದೇಶದ ಸಾಮಾಜಿಕ ಕೆನೆಯಾಗಿರುವವರನ್ನು ಪ್ರತಿನಿಧಿಸುತ್ತದೆ. ಅವರ ಬ್ರಾಹ್ಮಣ ಮನಸ್ಥಿತಿ ಬಲಪಂಥೀಯ ಹಿಂದುತ್ವವನ್ನು ಬೆಂಬಲಿಸಲು ಅವರನ್ನು ಉತ್ತೇಜಿಸುವಷ್ಟೇ ತೀವ್ರವಾಗಿ, ಕಾರ್ಮಿಕ ವರ್ಗದೊಂದಿಗೆ ಗುರುತಿಸಿಕೊಳ್ಳಲು ಅಥವಾ ಅವರೊಂದಿಗೆ ಒಗ್ಗಟ್ಟಿನಿಂದ ವರ್ತಿಸಲು ಬಯಸದವರನ್ನಾಗಿ ಮಾಡುತ್ತದೆ. ವಾಸ್ತವವಾಗಿ, ಅವರ ಮೇಲ್ಜಾತಿ ಹಿನ್ನೆಲೆ, ಕೆಳ ಸಮುದಾಯಗಳ ಯಾರೊಂದಿಗೂ ಅವರು ಒಗ್ಗಟ್ಟಾಗುವುದನ್ನು ಅಸಾಧ್ಯವಾಗಿಸುತ್ತದೆ, ಏಕೆಂದರೆ ಅದು ಜಾತಿಯ ರಚನೆಯಾಗಿದೆ. ಅವರ ಜನಾಂಗೀಯ, ರಾಷ್ಟ್ರೀಯತೆಯ ಬ್ರ್ಯಾಂಡ್ ಅವಕಾಶವಾದಿಯಾಗಿದೆ ಮತ್ತು ಮೊದಲ ಅವಕಾಶದಲ್ಲಿಯೇ ವಿದೇಶಕ್ಕೆ ತೆರಳಲು ಅವರನ್ನು ತಯಾರು ಮಾಡುತ್ತದೆ. ಇದು ಅಂತಿಮವಾಗಿ ಅನಿವಾಸಿ ಭಾರತೀಯ ಸಮುದಾಯದ ಪ್ರಾಬಲ್ಯವಾಗಿ ಪರಿಣಮಿಸುತ್ತದೆ.
ಫ್ಯಾಶಿಸಂನ ಎಲ್ಲಾ ತಳಿಗಳಂತೆ, ಹಿಂದುತ್ವ ಕೂಡ ಬಂಡವಾಳಶಾಹಿಯೊಂದಿಗೆ ನಂಟು ಹೊಂದಿದೆ ಮತ್ತು ಎರಡೂ ವ್ಯವಸ್ಥೆಗಳಿಗೆ ಭಾರತದ ಸವರ್ಣ ಬೂರ್ಜ್ವಾ ಕಾರ್ಮಿಕ ಶ್ರೀಮಂತ ವರ್ಗ ಸಂಪೂರ್ಣ ಸೈದ್ಧಾಂತಿಕ, ನೈತಿಕ ಮತ್ತು ರಾಜಕೀಯ ಬೆಂಬಲವನ್ನು ನೀಡುತ್ತದೆ. ಈ ಸ್ವಯಂಘೋಷಿತ ಮಧ್ಯಮ ವರ್ಗ ಸ್ವಾಭಿಮಾನವನ್ನು ಬಲಿಗೊಟ್ಟು ಆನಂದಿಸುವ ವರ್ಗವಾಗಿದೆ. ಕೆಲವೊಮ್ಮೆ ಅವರು ಕಿರುಕುಳಕ್ಕೊಳಗಾದ ತೆರಿಗೆದಾರರು. ಮತ್ತೆ ಕೆಲವರ ದೃಷ್ಟಿಯಲ್ಲಿ ಅವರು ತುಳಿತಕ್ಕೊಳಗಾದ ಹಿಂದೂಗಳು. ನಂತರ ‘ಸಾಮಾನ್ಯ ವರ್ಗ’ದ ದುರವಸ್ಥೆಯ ಪ್ರತಿನಿಧಿಗಳೆಂದು ಎತ್ತಿಕಟ್ಟುವುದೂ ನಡೆಯುತ್ತದೆ. ಅದು ಅಂತಿಮವಾಗಿ ಅವರಿಗೆ ಸುರಕ್ಷಿತವಾಗಿದೆ. ಅವರನ್ನು ಆರ್ಥಿಕವಾಗಿ ದುರ್ಬಲ ವರ್ಗದ (ಇವಿಎಸ್) ಕೋಟಾದಡಿ ಪರಿಗಣಿಸಲಾಗುತ್ತದೆ. ಈ ವರ್ಗದ್ದು ಯಥಾಸ್ಥಿತಿ. ಸ್ವಯಂ ನಿರ್ಮಿತ, ಆತ್ಮನಿರ್ಭರ ಉದ್ಯಮಿಗಳ ದೃಷ್ಟಿಕೋನದಲ್ಲಿ ಅವರು ಸಂಪೂರ್ಣವಾಗಿ ವಂಚಿತರು. ಎಲ್ಲೆಲ್ಲಿ ಜನಸಾಮಾನ್ಯರು ಅಶಕ್ತರಾಗುತ್ತಾರೆ ಮತ್ತು ವಿಭಜಿಸಲ್ಪಡುತ್ತಾರೆಯೋ ಅಲ್ಲಿ ಬಂಡವಾಳಶಾಹಿ ತನ್ನ ಕ್ರೂರ ಸ್ವಭಾವವನ್ನು ತೋರಿಸುತ್ತದೆ. ಉದಾರವಾದಿ ಪ್ರಜಾಪ್ರಭುತ್ವದ ರಚನೆಗಳು ಫ್ಯಾಶಿಸ್ಟ್ ರಾಜಕೀಯ ಪ್ರವೃತ್ತಿಗಳೊಂದಿಗೆ ಮಾತ್ರ ರಾಜಿ ಮಾಡಿಕೊಂಡಿವೆ ಮತ್ತು ಅದರ ಸಂಸ್ಥೆಗಳು ಫ್ಯಾಶಿಸ್ಟ್ ಆರೋಹಣ ಮತ್ತು ಆಕ್ರಮಣದ ಈ ಸಮಯದಲ್ಲಿ ಕುಸಿಯುತ್ತಿವೆ ಅಥವಾ ಸಂಕೀರ್ಣವಾಗಿವೆ. ಪ್ರಗತಿಪರ ಮತ್ತು ಸಾಮಾಜಿಕವಾಗಿ ಆಮೂಲಾಗ್ರವಾಗಿರುವ ಹೊಸ ಎಡಪಂಥ, ವರ್ಗ ಮತ್ತು ಅಸ್ಮಿತೆಯ ಸಂಘರ್ಷಗಳನ್ನು ಆದ್ಯತೆಯ ಮೇಲೆ ಪರಿಹರಿಸಬೇಕಿದೆ ಮತ್ತು ಕೇಸರಿ ಬಂಡವಾಳಶಾಹಿಗಳನ್ನು ಎದುರಿಸಬೇಕಿದೆ. ಆಯ್ಕೆ ಸರಳ: ಸಮಾಜವಾದವೋ ಅಥವಾ ಅನಾಗರಿಕ ನಡೆಯೋ ಎಂಬುದು. ಉತ್ತರ, ಸಮಾಜವಾದ ಮಾತ್ರ.
(ಕೃಪೆ:countercurrents.org)