×
Ad

ವಿಶ್ವಸಂಸ್ಥೆಯ ಮಹತ್ವದ ವೇದಿಕೆಗಳಿಂದ ಹಿಂದೆ ಸರಿದ ಅಮೆರಿಕ; ಭಾರತ-ಚೀನಾಗೆ ಶೇ 500 ಸುಂಕ ಬೆದರಿಕೆ

ಭಾರತದ ಮೇಲೆ ಶೇ 500ರಷ್ಟು ತೆರಿಗೆ ಬೆದರಿಕೆ

Update: 2026-01-08 18:19 IST

ಡೊನಾಲ್ಡ್ ಟ್ರಂಪ್ (Photo: PTI)

ರಷ್ಯದಿಂದ ತೈಲ ಖರೀದಿಸುವುದನ್ನು ಸಂಪೂರ್ಣ ನಿಲ್ಲಿಸದೆ ಇದ್ದರೆ ಮುಂದಿನ ಕೆಲವು ವಾರಗಳಲ್ಲಿ ಅಮೆರಿಕ ಮತ್ತು ಚೀನಾದಿಂದ ರಫ್ತುಗಳ ಮೇಲೆ ಶೇ 500ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕ ಹೇಳಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ 60 ಜಾಗತಿಕ ವೇದಿಕೆಗಳಿಂದ ಹಿಂದೆ ಸರಿದಿದ್ದಾರೆ. ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡುರೊ ಬಂಧನದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಅಮೆರಿಕ ಕಳೆದ ವರ್ಷ ಜನವರಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬಂದಿತ್ತು. ಆ ಸಂದರ್ಭದಲ್ಲಿ, ಅಮೆರಿಕದ ವಿಶ್ವಸಂಸ್ಥೆಯ ಶಾಖೆಗಳಿಗೆ ಹೆಚ್ಚು ಕೊಡುಗೆ ನೀಡುತ್ತಿದ್ದರೂ ಅಂತಾರಾಷ್ಟ್ರೀಯ ಸಂಸ್ಥೆಗಳು ಭಿನ್ನವಾದ ಜಾಗತಿಕ ಅಜೆಂಡಾವನ್ನು ಹೊಂದಿದೆ ಮತ್ತು ಚೀನಾವನ್ನು ಬೆಂಬಲಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದರು.

“ತುರ್ತಾಗಿ ಅಗತ್ಯವಿರುವ ಸುಧಾರಣೆಗಳನ್ನು ಅಳವಡಿಸಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ವಿಫಲವಾಗಿದೆ ಮತ್ತು ಸದಸ್ಯ ರಾಷ್ಟ್ರಗಳ ರಾಜಕೀಯ ಪ್ರಭಾವದಿಂದಾಗಿ ಸ್ವತಂತ್ರವಾಗಿ ನಡೆದುಕೊಳ್ಳುತ್ತಿಲ್ಲ” ಎಂದು ಟ್ರಂಪ್ ಆರೋಪಿಸಿದ್ದರು. ಚೀನಾದ ಜನಸಂಖ್ಯೆ 1.4 ಶತಕೋಟಿ ಇದೆ. ಅಮೆರಿಕಕ್ಕಿಂತ ಶೇ 300 ಪಟ್ಟು ಹೆಚ್ಚು ಜನಸಂಖ್ಯೆ ಇರುವ ಚೀನಾ ವಿಶ್ವ ಆರೋಗ್ಯ ಸಂಸ್ಥೆಗೆ ಶೇ 90ರಷ್ಟು ಕಡಿಮೆ ಕೊಡುಗೆ ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಇದೀಗ 66 ಅಂತಾರಾಷ್ಟ್ರೀಯ ಸಂಸ್ಥೆಗಳ ಸದಸ್ಯತ್ವದಿಂದ ಅಮೆರಿಕ ಹಿಂದೆ ಸರಿದಿದೆ. ಈ ಸಂಸ್ಥೆಗಳ “ಜಾಗತಿಕವಾದಿ ಕಾರ್ಯಸೂಚಿ”ಯನ್ನು ಅಮೆರಿಕ ವಿರೋಧಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಅಮೆರಿಕದ ತೆರಿಗೆದಾರರ ಹಣವನ್ನು ಹೆಚ್ಚು ಪ್ರಸ್ತುತವೆನಿಸುವ ವಿಚಾರಗಳಲ್ಲಿ ಹೂಡಿಕೆ ಮಾಡಲು ಅವರು ತೀರ್ಮಾನಿಸಿದ್ದಾರೆ. ಅಮೆರಿಕ ಹೊರಬಂದಿರುವ ಕೆಲವು ವಿಶ್ವಸಂಸ್ಥೆಯ ಶಾಖೆಗಳೆಂದರೆ ಪ್ರಮುಖ ಹವಾಮಾನ ಒಪ್ಪಂದ ಮತ್ತು ಲಿಂಗ ಸಮಾನತೆ ಮತ್ತು ಮಹಿಳಾ ಸ್ವಾವಲಂಬನೆಯನ್ನು ಪ್ರಾಯೋಜಿಸುವ ಸಂಸ್ಥೆಗಳಾಗಿವೆ.

ಹವಾಮಾನ ಒಪ್ಪಂದದಿಂದ ಹಿಂದೆ ಸರಿದ ಅಮೆರಿಕ

ಅಮೆರಿಕದ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಒಪ್ಪಂದದಿಂದಲೂ (UNFCCC) ಹಿಂದೆ ಸರಿದಿದೆ. ಹವಾಮಾನ ಬದಲಾವಣೆಗೆ ಸಹಕರಿಸಲು ಜಾಗತಿಕ ದೇಶಗಳ ಒಪ್ಪಂದವಾಗಿರುವ UNFCCC ಅನ್ನು ಜಾಗತಿಕ ಹವಾಮಾನ ಬದಲಾವಣೆ ವಿರುದ್ಧ ಕ್ರಮ ಕೈಗೊಳ್ಳಲು ತಳಹದಿ ಎಂದು ಭಾವಿಸಲಾಗಿದೆ. ಏಕೆಂದರೆ ಇದು 2015ರ ಪ್ಯಾರಿಸ್ ಹವಾಮಾನ ಒಪ್ಪಂದ ಸೇರಿದಂತೆ ಹಲವು ಒಪ್ಪಂದಗಳಿಗೆ ಕಾರಣವಾಗಿತ್ತು. 30 ವರ್ಷಗಳಲ್ಲಿ ಮೊದಲ ಬಾರಿಗೆ ಅಮೆರಿಕ ವಿಶ್ವಸಂಸ್ಥೆಯ ವಾರ್ಷಿಕ ಜಾಗತಿಕ ಹವಾಮಾನ ಶೃಂಗಸಮ್ಮೇಳನದಲ್ಲಿ ಭಾಗವಹಿಸಿರಲಿಲ್ಲ.

ಲಿಂಗತಾರತಮ್ಯ ಮತ್ತು ಮಹಿಳಾ ಸ್ವಾವಲಂಬನೆಗೆ ಕೆಲಸ ಮಾಡುವ ವಿಶ್ವಸಂಸ್ಥೆಯ ಮಹಿಳಾ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಜನಸಂಖ್ಯೆ ನಿಧಿಯಿಂದಲೂ (UNFPA) ಅಮೆರಿಕ ಹೊರಸರಿದಿದೆ. ಈ ಸಂಸ್ಥೆಗಳು 150 ದೇಶಗಳಲ್ಲಿ ತಾಯಂದಿರ ಆರೋಗ್ಯ ಮತ್ತು ಮಕ್ಕಳ ಆರೋಗ್ಯ ಜೊತೆಗೆ ಕುಟುಂಬ ಕಲ್ಯಾಣ ಯೋಜನೆಗಳತ್ತ ಗಮನಹರಿಸಿತ್ತು.

ಪ್ರಮುಖ ಸಂಸ್ಥೆಗಳಿಗೆ ಹಣಕಾಸು ನೆರವು ಸ್ಥಗಿತ

ಈ ಸಂಸ್ಥೆಗಳಿಂದ ಹಿಂದೆ ಸರಿಯುವುದು ಎಂದರೆ ಹಣಕಾಸು ನೆರವೂ ನೀಡುವುದಿಲ್ಲ ಎಂದು ಅರ್ಥವಾಗುತ್ತದೆ. ಅನೇಕ ವಿಶ್ವಸಂಸ್ಥೆ ಶಾಖೆಗಳಿಗೆ ಹಣಕಾಸು ನೆರವನ್ನು ಈಗಾಗಲೇ ಅಮೆರಿಕ ಕಡಿತಗೊಳಿಸಿದೆ. ಈ ಸಂಸ್ಥೆಗಳಿಂದ ಹಿಂದೆ ಸರಿದ ಮಾತ್ರಕ್ಕೆ ಅಮೆರಿಕದ ಜಾಗತಿಕ ಪ್ರಭಾವ ಕಡಿಮೆಯಾಗುವ ಸಾಧ್ಯತೆಯಿಲ್ಲ. ಮುಖ್ಯವಾಗಿ ತೆರಿಗೆ ಬೆದರಿಕೆ ಮತ್ತು ಅಮೆರಿಕದ ಸೇನಾ ಶಕ್ತಿಯ ಬೆದರಿಕೆಯನ್ನು ಟ್ರಂಪ್ ನೀಡುತ್ತಿದ್ದಾರೆ.

ಮಿಲಿಟರಿ ಶಕ್ತಿ ಬಳಸುವ ಬೆದರಿಕೆ

2025ರಲ್ಲಿ ಅಮೆರಿಕ ಸಿರಿಯಾ, ಇರಾಕ್, ನೈಜೀರಿಯ, ಸೋಮಾಲಿಯ, ಯೆಮನ್ ಮತ್ತು ಇರಾನ್ ಮೇಲೆ ದಾಳಿ ನಡೆಸಿದೆ. ಅಗತ್ಯವೆನಿಸಿದರೆ ಅಮೆರಿಕದ ಸೇನಾ ಶಕ್ತಿಯನ್ನು ಬಳಸುವ ಆಯ್ಕೆಯನ್ನು ಅಮೆರಿಕದ ಕಾಯ್ದಿರಿಸಲಿದೆ ಎಂದು ಅಧ್ಯಕ್ಷರ ಕಾರ್ಯದರ್ಶಿ ಕೆರೊಲಿನ್ ಲೀವಿಟ್ ಬಹಿರಂಗವಾಗಿಯೇ ಘೋಷಿಸಿದ್ದಾರೆ.

ಆದರೆ ವಿಶ್ವಸಂಸ್ಥೆಯಿಂದ ಸಂಪೂರ್ಣವಾಗಿ ಅಮೆರಿಕ ಹೊರಬರುವ ಸಾಧ್ಯತೆಯಿಲ್ಲ. ಜಾಗತಿಕ ಮಾನದಂಡಗಳನ್ನು ನಿರ್ಧರಿಸುವ ಮೈತ್ರಿಕೂಟದ ಭಾಗವಾಗಿರಲು ಬಯಸಬಹುದು. ಮುಖ್ಯವಾಗಿ ಚೀನಾ ವಿಟೋ ಪವರ್ ಹೊಂದಿರುವಾಗ ಅದನ್ನು ವಿರೋಧಿಸಲು ಅಮೆರಿಕ ಪ್ರಭಾವ ಬೀರುವುದನ್ನು ತಪ್ಪಿಸಿಕೊಳ್ಳದು. ಚೀನಾವನ್ನು ವಿರೋಧಿಸಲು ಅಗತ್ಯವಿರುವ ಕೆಲವು ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ಜೊತೆಗೆ ತನ್ನ ಸದಸ್ಯತ್ವವನ್ನು ಅಮೆರಿಕ ಮುಂದುವರಿಸಬಹುದು ಎಂದು ಅಮೆರಿಕದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮೇಲೆ ಶೇ 500ರಷ್ಟು ತೆರಿಗೆ ಬೆದರಿಕೆ

ಈ ನಡುವೆ ಭಾರತದ ಮೇಲೆ ಶೇ 500ರಷ್ಟು ತೆರಿಗೆ ವಿಧಿಸಲು ಅಮೆರಿಕ ಸಿದ್ಧವಾಗುತ್ತಿದೆ. ರಷ್ಯದಿಂದ ತೈಲ ಖರೀದಿಸುವುದನ್ನು ಸಂಪೂರ್ಣ ನಿಲ್ಲಿಸದೆ ಇದ್ದರೆ ಮುಂದಿನ ಕೆಲವು ವಾರಗಳಲ್ಲಿ ಅಮೆರಿಕ ಮತ್ತು ಚೀನಾದಿಂದ ರಫ್ತುಗಳ ಮೇಲೆ ಶೇ 500ರಷ್ಟು ತೆರಿಗೆ ವಿಧಿಸುವುದಾಗಿ ಅಮೆರಿಕ ಹೇಳಿದೆ. ರಷ್ಯದಿಂದ ಯುರೇನಿಯಂ ಖರೀದಿಸುವ ದೇಶಗಳ ಮೇಲೂ ಈ ಮಟ್ಟದ ತೆರಿಗೆ ಹೇರಿಗೆ ಮುಂದುವರಿಯಲಿದೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಹಾಂ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಭಾರತ, ಚೀನಾ ಮತ್ತು ಬ್ರೆಜಿಲ್ನಂತಹ ರಾಷ್ಟ್ರಗಳು ರಿಯಾಯಿತಿ ದರದಲ್ಲಿ ರಷ್ಯದಿಂದ ತೈಲ ಖರೀದಿಸುವುದರಿಂದ ಉಕ್ರೇನ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಹಣಕಾಸು ನೆರವು ರಷ್ಯಾಗೆ ಸಿಗುತ್ತಿದೆ ಎಂದು ಅಮೆರಿಕ ವಾದಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News