×
Ad

ಮಕ್ಕಳು, ಹದಿಹರೆಯದವರ ವೀಕ್ಷಣಾ ಹವ್ಯಾಸ ಸುಧಾರಿಸಲು ಹೊಸ ಕಂಟ್ರೋಲ್ಗಳನ್ನು ಪರಿಚಯಿಸಲಿರುವ ಯೂಟ್ಯೂಬ್

Update: 2026-01-16 16:52 IST

ಸಾಂದರ್ಭಿಕ ಚಿತ್ರ | Photo Credit : freepik

ಮಕ್ಕಳಿಗೆ ಸುರಕ್ಷಿತ ವೀಕ್ಷಣೆಯನ್ನು ಖಚಿತಪಡಿಸಲು ಶಾರ್ಟ್ಸ್ಗಳಿಗೆ ಮಿತಿ ಹೇರುವ ಜೊತೆಗೆ ಆರೋಗ್ಯಕರ ವೀಕ್ಷಣೆಯನ್ನು ಉತ್ತೇಜಿಸುವಂತಹ ನವೀಕರಣಗಳನ್ನು ಯುಟ್ಯೂಬ್ ಪರಿಚಯಿಸುತ್ತಿದೆ

ಆನ್ಲೈನ್ ವೀಕ್ಷಣೆಯನ್ನು ಎಲ್ಲಾ ವಯಸ್ಸಿಗೆ ಸೂಕ್ತವೆನಿಸುವುದು ಮತ್ತು ಸುರಕ್ಷಿತಗೊಳಿಸುವ ಭಾಗವಾಗಿ ಯೂಟ್ಯೂಬ್ ಕುಟುಂಬದವರಿಗೆ ಹೆಚ್ಚಿನ ನಿಯಂತ್ರಣ ನೀಡುವ ನವೀಕರಣಗಳನ್ನು ಪ್ರಕಟಿಸಿದೆ.

ಯುವಜನರು ಹಲವು ಕಾರಣಗಳಿಗೆ ಯೂಟ್ಯೂಬ್ ಬಳಸುತ್ತಾರೆ. ಓದುವುದು, ಸಂಗೀತ ಅಥವಾ ಪಾಡ್ಕಾಸ್ಟ್ಗಳನ್ನು ಕೇಳುವುದು ಅಥವಾ ಕ್ರೀಡೆಗಳ ಮುಖ್ಯಾಂಶಗಳನ್ನು ತಿಳಿದುಕೊಳ್ಳುವುದು ಮೊದಲಾಗಿ ವಿವಿಧ ಕಾರಣಗಳಿಗೆ ಯೂಟ್ಯೂಬ್ ಬಳಸುತ್ತಾರೆ. ಯುವಜನರನ್ನು ಡಿಜಿಟಲ್ ಜಗತ್ತಿನಿಂದ ದೂರವಿಡುವ ಬದಲಾಗಿ ಜವಾಬ್ದಾರಿಯುತವಾಗಿ ಬಳಸಲು ಅವಕಾಶ ಕೊಡಲು ಯುಟ್ಯೂಬ್ ಬಯಸಿದೆ.

ವಯೋಸಹಜ ಕಂಟೆಂಟ್ ವೀಕ್ಷಣೆ

ಯೂಟ್ಯೂಬ್ ಪೋಷಕರು ಮತ್ತು ಮಕ್ಕಳ ಅಭಿವೃದ್ಧಿ ತಜ್ಞರ ಶಿಫಾರಸುಗಳ ಮೇಲೆ ಮೂರು ಕ್ಷೇತ್ರಗಳ ಮೇಲೆ ನವೀಕರಣಗಳನ್ನು ಕೇಂದ್ರೀಕರಿಸಿದೆ. ಆರೋಗ್ಯಕರ ವೀಕ್ಷಣೆಯನ್ನು ಮಕ್ಕಳಿಗೆ ಅಭ್ಯಾಸ ಮಾಡಿಸುವುದು, ಬಲವಾದ ಭದ್ರತೆ ಮತ್ತು ವಯಸ್ಸಿಗೆ ಸೂಕ್ತ ವಿಷಯ ನೋಡುತ್ತಾರೆ ಎಂದು ಖಾತರಿಪಡಿಸುವುದು. ಹೀಗೆ ಪ್ರತಿ ಮಗುವಿಗೆ ಕುಟುಂಬದವರು ಯಾವ ಅನುಭವ ನೀಡಲು ಬಯಸಿದ್ದಾರೆ ಎನ್ನುವುದರ ಮೇಲೆ ಖಾತೆ ಸೆಟಪ್ ಮಾಡುವುದು.

ಶಾರ್ಟ್ಸ್ಗಳಿಗೆ ಮಿತ ಹೇರುವುದು

ಮಕ್ಕಳು ಯೂಟ್ಯೂಬ್ ಶಾರ್ಟ್ಗಳನ್ನು ಎಷ್ಟು ಕಾಲ ನೋಡುತ್ತಾರೆ ಎನ್ನುವುದನ್ನು ಹೆತ್ತವರು ನಿಯಂತ್ರಿಸಬಹುದಾಗಿದೆ. ಹೊಸ ಸೆಟಪ್ ಶಾರ್ಟ್ಸ್ ಫೀಡ್ ಅನ್ನು ಮಿತಿಗೊಳಿಸಲು ಅವಕಾಶ ಕೊಡುತ್ತದೆ. ಈ ಸಮಯವನ್ನು ಶೂನ್ಯದವರೆಗೆ ಮಿತಿಗೊಳಿಸುವ ಅವಕಾಶವಿದೆ. ಮಕ್ಕಳು ಹೋಂವರ್ಕ್ಗಾಗಿ ಯುಟ್ಯೂಬ್ ಬಳಸುತ್ತಿರುವಾಗ ಹೆತ್ತವರು ಶಾರ್ಟ್ಸ್ಗಳನ್ನು ಬ್ಲಾಕ್ ಮಾಡಿ ಇಡಬಹುದು. ಮಲಗುವ ಸಮಯ ಮತ್ತು ಬ್ರೇಕ್ ಪಡೆಯಲು ಜ್ಞಾಪನೆಗಳು ಇಡುವುದು ಇತ್ಯಾದಿ ನವೀಕರಣಗಳನ್ನು ಮಾಡಲಾಗಿದೆ.

ಕಂಟೆಂಟ್ ಗುಣಮಟ್ಟದತ್ತವೂ ಗಮನ

ಕಂಟ್ರೋಲ್ಗಳ ಜೊತೆಗೆ ಯೂಟ್ಯೂಬ್ ಯುವಜನರು ನೋಡುವ ಕಂಟೆಂಟ್ ಗುಣಮಟ್ಟವನ್ನು ಸುಧಾರಿಸಲು ಯೂಟ್ಯೂಬ್ ಪ್ರಯತ್ನಿಸುತ್ತಿದೆ. ಅದಕ್ಕಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ. ಉನ್ನತ ಗುಣಮಟ್ಟದ ಕಂಟೆಂಟ್ ಯಾವುದು ಎಂದು ನಿರ್ಧರಿಸಲು ಯುವಜನರಿಂದಲೇ ಮಾಹಿತಿ ಪಡೆಯಲಾಗುತ್ತಿದೆ. ಜೊತೆಗೆ ಸಂಶೋಧಕರು, ಮಕ್ಕಳ-ಕಲ್ಯಾಣ ವಿಶೇಷಜ್ಞರ ಜೊತೆಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಯುಟ್ಯೂಬ್ ಹೇಳಿದೆ. ಈ ಮಾರ್ಗಸೂಚಿಗಳನ್ನು ಕಂಟೆಂಟ್ ಸೃಷ್ಟಿಸುವವರ ಜೊತೆಗೆ ಜಾಗತಿಕವಾಗಿ ಹಂಚಲಾಗುವುದು. ಜೊತೆಗೆ ಹದಿಹರೆಯದ ಬಳಕೆದಾರರಿಗೆ ವೀಡಿಯೋ ಶಿಫಾರಸು ಮಾಡುವುದರ ಮೇಲೂ ಅದರಿಂದ ಪ್ರಭಾವ ಬೀರಲಿದೆ.

ಕಲಿಕೆಗೆ ಅವಕಾಶ ಕೊಡುವ ಶಿಫಾರಸು

ಹದಿಹರೆಯದವರಿಗೆ ಶಿಫಾರಸು ಮಾಡುವ ವೀಡಿಯೋಗಳು ಹೆಚ್ಚು ಕಲಿಕೆ, ಕತೆ ಹೇಳಯವಿಕೆ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಒತ್ತು ನೀಡುವ ಬೋಧನಾ ಮತ್ತು ಮಾಹಿತಿಯುಕ್ತ ವಿಷಯಗಳನ್ನು ಒಳಗೊಂಡಿರುತ್ತವೆ. ಈಗಾಗಲೇ 13ರ ವಯೋಮಾನದ ಒಳಗಿರುವವರಿಗೆ ಸುರಕ್ಷತಾ ಕ್ರಮಗಳು ಮತ್ತು ಹದಿಹರೆಯದ ವೀಕ್ಷಕರಿಗೆ ಅಸ್ತಿತ್ವದಲ್ಲಿರುವ ರಕ್ಷಣೆಯ ಮೇಲೆ ಇದು ಕೆಲಸ ಮಾಡಲಿದೆ.

ಅಪ್ಡೇಟ್ ಮಾಡಿದ ಸೈನಪ್ ಅನುಭವ

ಯೂಟ್ಯೂಬ್ ಹೇಗೆ ಖಾತೆಗಳನ್ನು ಸೃಷ್ಟಿಸಲಾಗುತ್ತದೆ ಮತ್ತು ನಿರ್ವಹಿಸಲಾಗುತ್ತದೆ ಎನ್ನುವುದನ್ನು ಯೂಟ್ಯೂಬ್ ಸರಳಗೊಳಿಸಿದೆ. ಹದಿಹರೆಯದವರರನ್ನು 18ರೊಳಗಿನ ಖಾತೆಗಳೆಂದು ಈಗಾಗಲೇ ರಕ್ಷಣೆಯ ವಲಯಕ್ಕೆ ತರಲಾಗಿದೆ. ವೇದಿಕೆ ಶೀಘ್ರವೇ ಅಪ್ಡೇಟ್ ಮಾಡಿದ ಸೈನಪ್ ಅನುಭವವನ್ನು ನೀಡಲಿದೆ. ಹೆತ್ತವರು ಹೆಚ್ಚು ಸರಳವಾಗಿ ಮಕ್ಕಳ ಖಾತೆಗಳನ್ನು ಸೃಷ್ಟಿಸಲು ಸಾಧ್ಯವಾಗಲಿದೆ. ಕೆಲವೇ ಟ್ಯಾಪ್ಗಳ ಮೂಲಕ ಮೊಬೈಲ್ನಲ್ಲಿ ವಿಭಿನ್ನ ಖಾತೆಗಳಿಗೆ ಬದಲಿಸಲು ಸಾಧ್ಯವಾಗಲಿದೆ. ಯಾರು ವೀಕ್ಷಿಸುತ್ತಾರೆ ಎನ್ನುವುದನ್ನು ಅನುಸರಿಸಿ ಖಾತೆ ಬದಲಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News