×
Ad

ಪಶ್ಚಿಮ ಬಂಗಾಳ ಎಸ್ಐಆರ್‌| ಜನರು ಒತ್ತಡದಲ್ಲಿದ್ದಾರೆ ಎನ್ನುವುದನ್ನು ಚುನಾವಣಾ ಆಯೋಗ ಅರ್ಥ ಮಾಡಿಕೊಳ್ಳಬೇಕು: ಸುಪ್ರೀಂ ಕೋರ್ಟ್

‘ತಾರ್ಕಿಕ ವ್ಯತ್ಯಾಸ’ಗಳಡಿ ನೋಟಿಸ್ ಪಡೆದ ಮತದಾರರ ಹೆಸರುಗಳ ಬಿಡುಗಡೆಗೆ ಆದೇಶ

Update: 2026-01-19 23:01 IST

PC | PTI 

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆಯಿಂದಾಗಿ ಜನರು ‘ಒತ್ತಡ’ದಲ್ಲಿದ್ದಾರೆ ಎನ್ನುವುದನ್ನು ಚುನಾವಣಾ ಆಯೋಗವು ಅರ್ಥ ಮಾಡಿಕೊಳ್ಳಬೇಕು ಎಂದು ಸೋಮವಾರ ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ‘ತಾರ್ಕಿಕ ವ್ಯತ್ಯಾಸಗಳ’ ವರ್ಗದಡಿ ನೋಟಿಸ್‌ಗ ಳನ್ನು ಪಡೆದಿರುವವರ ಹೆಸರುಗಳನ್ನು ಬಿಡುಗಡೆ ಮಾಡುವಂತೆ ಆಯೋಗಕ್ಕೆ ಆದೇಶಿಸಿದೆ.

ಮ್ಯಾಪಿಂಗ್ ಮಾಡಲಾಗಿರುವ, ಮ್ಯಾಪಿಂಗ್ ಮಾಡದಿರುವ ಮತ್ತು ತಾರ್ಕಿಕ ವ್ಯತ್ಯಾಸಗಳನ್ನು ಹೊಂದಿರುವ: ಹೀಗೆ ಮೂರು ವರ್ಗಗಳ ಮತದಾರರಿಗೆ ಆಯೋಗವು ನೋಟಿಸ್‌ಗಳನ್ನು ನೀಡಿದೆ.

ಮ್ಯಾಪಿಂಗ್ ಮಾಡಲಾಗಿರುವ ವರ್ಗವು ಮತದಾರರ ದತ್ತಾಂಶಗಳಿಗೆ ದಾಖಲೆಗಳನ್ನು ಲಿಂಕ ಮಾಡಿರುವ, ಆದರೆ ಹೆಚ್ಚಿನ ಪರಿಶೀಲನೆಯ ಅಗತ್ಯವಿರುವವರನ್ನು ಒಳಗೊಂಡಿದ್ದರೆ, ಮ್ಯಾಪಿಂಗ್ ಮಾಡದಿರುವ ವರ್ಗವು ಚುನಾವಣಾ ದತ್ತಾಂಶಗಳೊಂದಿಗೆ ದಾಖಲೆಗಳು ಲಿಂಕ್ ಆಗಿರದ ಮತದಾರರನ್ನು ಒಳಗೊಂಡಿದೆ. ಹಿಂದಿನ ಎಸ್ಐಆರ್‌ ಮತದಾರರ ಪಟ್ಟಿಗಳಿಗೆ ಹೋಲಿಸಿದರೆ ಪೋಷಕರ ಹೆಸರುಗಳೊಂದಿಗೆ ಹೊಂದಾಣಿಕೆಯಾಗದ, ವಿಭಿನ್ನ ಕಾಗುಣಿತಗಳು, ವಯಸ್ಸಿನ ಅಂತರ ಇತ್ಯಾದಿಗಳು ಕಂಡು ಬಂದಿರುವ ಅನುಮಾನಾಸ್ಪದ ಮತದಾರರನ್ನು ‘ತಾರ್ಕಿಕ ವ್ಯತ್ಯಾಸಗಳ’ ವರ್ಗದಲ್ಲಿ ಸೇರಿಸಲಾಗಿದೆ.

ಎಸ್ಐಆರ್ ವಿಚಾರಣೆಗಳ ಸಂದರ್ಭದಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ನಿಯೋಜಿಸಬೇಕು ಮತ್ತು ಸ್ಥಳಿಯ ಅಧಿಕಾರಿಗಳು ಜನರಿಂದ ಸ್ವೀಕರಿಸಿದ ದಾಖಲೆಗಳಿಗೆ ರಸೀದಿಗಳನ್ನು ನೀಡಬೇಕು. ಆಕ್ಷೇಪಣೆಗಳ ಕುರಿತು ಅಂತಿಮ ನಿರ್ಧಾರಕ್ಕೆ ಕಾರಣಗಳನ್ನು ಹಂಚಿಕೊಳ್ಳಬೇಕು ಎಂದೂ ನ್ಯಾಯಾಲಯವು ಚು.ಆಯೋಗಕ್ಕೆ ತಾಕೀತು ಮಾಡಿದೆ.

ತಾರ್ಕಿಕ ವ್ಯತ್ಯಾಸಗಳ ವರ್ಗದಡಿ ನೋಟಿಸ್ ನೀಡಲಾಗಿರುವ 1.25 ಕೋಟಿ ಜನರ ಹೆಸರುಗಳನ್ನು ಬಿಡುಗಡೆ ಮಾಡುವಂತೆ ಚು.ಆಯೋಗಕ್ಕೆ ಆದೇಶಿಸಿರುವ ಸರ್ವೋಚ್ಚ ನ್ಯಾಯಾಲಯವು, ಈ ಹೆಸರುಗಳನ್ನು ಗ್ರಾಮ ಪಂಚಾಯತಿಗಳು,ಬ್ಲಾಕ್ ಕಚೇರಿಗಳು ಮತ್ತು ವಾರ್ಡ್ ಕಚೇರಿಗಳಲ್ಲಿ ಪ್ರದರ್ಶಿಸಬೇಕು ಹಾಗೂ ನೋಟಿಸ್ ಪಡೆದವರಿಗೆ ದಾಖಲೆಗಳನ್ನು ಸಲ್ಲಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News