×
Ad

ಯಾದಗಿರಿ | ಮತಗಳ್ಳನ ತಡೆಯುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ : ಸಚಿವ ಶರಣಬಸಪ್ಪ ದರ್ಶನಾಪುರ ಆರೋಪ

Update: 2025-10-12 20:02 IST

ಯಾದಗಿರಿ: ಸಂವಿಧಾನದ ವ್ಯವಸ್ಥೆಯಲ್ಲಿ ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆಯಾಗಿದ್ದರೂ ಮತಗಳ್ಳನ ತಡೆಯುವಲ್ಲಿ ವಿಫಲವಾಗಿದೆ. ಇದು ಪ್ರಜಾಪ್ರಭುತ್ವದ ದುರಂತವೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಗಾಂಧಿ ಸರ್ಕಲ್ ನಲ್ಲಿ ಜಿಲ್ಲಾ‌ ಕಾಂಗ್ರೆಸ್ ಸಮಿತಿ ರವಿವಾರ ಹಮ್ಮಿಕೊಂಡಿದ್ದ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಇಲ್ಲಿ ಜನಪ್ರತಿನಿಧಿಗಳ ಆಯ್ಕೆಗೆ ಮತದಾನ ನಡೆಯುತ್ತದೆ.‌ ಇದನ್ನು ಚಾಚು ತಪ್ಪದಂತೆ ಪ್ರಮಾಣಿಕ ಮತ್ತು ನಿರ್ಭಯವಾಗಿ ನಡೆಸಿಕೊಂಡು ಹೋಗುವುದೇ ಚುನಾವಣಾ ಆಯೋಗ. ಆದರೇ ರಾಜ್ಯ ಸೇರಿದಂತೆಯೇ ದೇಶದ ಎಲ್ಲಡೇ ಮತಗಳ್ಳತನ ನಡೆದು ಪ್ರಜಾತಂತ್ರದ ವ್ಯವಸ್ಥೆಯೇ ಬುಡಮೇಲು ಮಾಡುವಲ್ಲಿ‌ ಬಿಜೆಪಿ ಪ್ರಮುಖ ಪಾತ್ರ ವಹಿಸಿದೆ ಎಂದು ಸಚಿವರು ಆರೋಪಿಸಿದರು.

ಕರ್ನಾಟಕದ ಮಹದೇವಪುರ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಮತಗಳ ಕಳ್ಳತನ ನಡೆದಿರುವ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಹೋರಾಟದ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಈಗಲೂ ಕೂಡ ನಾವು ಸಹಿ ಸಂಗ್ರಹ ಮೂಲಕ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಇದನ್ನು ಮನವರಿಕೆ ಮಾಡಿಕೊಡಲು ಅಭಿಯಾನ ನಡೆಸುತ್ತಿದ್ದೇವೆ ಎಂದು  ಸಚಿವರು ಹೇಳಿದರು.  

ಎಐಸಿಸಿ ಕಾರ್ಯದರ್ಶಿ ಗೋಪಿನಾಥ ಪಳೆಯಪ್ಪನ್ ಮಾತನಾಡಿ, ದೇಶದಲ್ಲಿ ಬಿಜೆಪಿ ಮತಗಳ್ಳನ ಮಾಡುವ‌ ಮೂಲಕ ನೈಜ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿ ಚುನಾವಣೆ ವ್ಯವಸ್ಥೆಯ ವಿರುದ್ದವೇ ಗೆದ್ದಿರುವುದು ದುರಂತವೇ ಸರಿ ಎಂದರು.

ಎಂಎಲ್ ಸಿ ವಸಂತ ಕುಮಾರ್‌ ಮಾತನಾಡಿ, ಇದೊಂದು ಪ್ರಜಾಪ್ರಭುತ್ವದ ವಿರೋಧಿ ಕೆಲಸ.‌ ಸಂವಿಧಾನಕ್ಕೆ ಮಾಡಿದ ಅಪಚಾರ. ಇದನ್ನು ಕಾಂಗ್ರೆಸ್ ಪಕ್ಷ ಬಯಲಿಗೆಳೆದು ದೇಶದ ಜನರಲ್ಲಿ ಸತ್ಯ, ಅಸತ್ಯದ ದರ್ಶನ ಮಾಡಿಸಬೇಕು ಎಂದರು.  

ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಬಿಜೆಪಿಯವರು ಮಾಡಿದ ಮತಗಳ್ಳನದಿಂದಾಗಿ ನಮ್ಮ ಅಭ್ಯರ್ಥಿಗಳು ಬಹಳ ಕಡೆ ಸೋಲುಂಡರು. ಮತ ಹಾಕಲು ಒಂದೇ ಕಡೆ ಹೆಸರು ಇರಬೇಕೆಂಬ ನಿಯಮ ಕಟ್ಟುನಿಟ್ಟಾಗಿ ಇದ್ದರೂ ಇದನ್ನು ಆಯೋಗ ತಡೆಯುವಲ್ಲಿ‌ ವಿಫಲವಾಗಿದೆ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಮಾಲಿ ಪಾಟೀಲ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸದಲಾಪೂರ್, ನಿಜ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗದದ ಅಧ್ಯಕ್ಷ ಬಾಬುರಾವ್‌ ಚಿಂಚನಸೂರ್, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್‌ ಕಾಡ್ಲೂರ್, ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಸ್ಸುಗೌಡ ಬಿಳ್ಹಾರ್, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಲ್ಲಮ್ಮ ಕೋಮಾರ್, ಡಾ.ಶರಣ ಕಾಮರೆಡ್ಡಿ, ವೆಂಕಟರೆಡ್ಡಿ ವನಕೇರಿ, ಚನ್ನಕೇಶವ ಬಾಣತಿಹಾಳ, ಗಣೇಶ ದುಪ್ಪಲಿ, ಚಿದಾನಂದಪ್ಪ ಕಾಳೆಬೆಳಗುಂದಿ, ಮಲ್ಲಿಕಾರ್ಜುನ ಈಟೆ, ಸಾಬಣ್ಣಾ ಕೆಂಗೂರಿ, ಅನೀಲ ಹೆಡಗಿಮದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News