×
Ad

ಯಾದಗಿರಿಯ ಬಸವಣ್ಣ ಮೌನಪ್ಪ ಬಡಿಗೇರಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ

Update: 2025-10-30 22:40 IST

ಬಸವಣ್ಣ ಮೌನಪ್ಪ ಬಡಿಗೇರ

ಯಾದಗಿರಿ : ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಬಸವಣ್ಣ ಮೌನಪ್ಪ ಬಡಿಗೇರ ಅವರು "ಶಿಲ್ಪಕಲೆ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸುರಪುರ ತಾಲೂಕಿನ ಅಂದ್ರಾಳ ಗ್ರಾಮದ ಹಿರಿಯ ಕಾಷ್ಠಶಿಲ್ಪಿ ಬಸವಣ್ಣ ಮೌನಪ್ಪ ಬಡಿಗೇರ (92) ಅವರು ಕಳೆದ ಏಳು ದಶಕಗಳಿಂದ ಕಾಷ್ಠಶಿಲ್ಪದ ಲೋಕದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

ಬಡಿಗೇರ ಅವರು ಚದರಂಗ ಪಡಶಾಲೆ, ಐದು ಅಂಕಣ, ಏಳು ಅಂಕಣ ಪಡಶಾಲೆ ಸೇರಿದಂತೆ ತೊಲೆ, ಬೋದು, ತೋರಣ, ಪ್ರಾಣಿ, ಪಕ್ಷಿ, ದೇವತೆಗಳ ಆಕರ್ಷಕ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಅವರ ಕೃತಿಗಳು ರಾಯಚೂರು ಹಾಗೂ ಕಲಬುರಗಿ ವಿಭಾಗಗಳಲ್ಲಿ ಪ್ರದರ್ಶನಕ್ಕಿದ್ದು, ಶಿಲ್ಪಾಸಕ್ತರನ್ನು ಮೆಚ್ಚುಗೆಗೆ ಒಳಪಡಿಸುತ್ತಿವೆ.

2005 ರಿಂದ 2010 ರವರೆಗೆ ಸುರಪುರದಲ್ಲಿ ನಡೆದ ‘ಸಗರನಾಡು ದರ್ಶನ’ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ದರ್ಶನಗಳಲ್ಲಿ ಅವರ ಕಲೆ ಪ್ರದರ್ಶನಗೊಂಡು ಪ್ರಶಂಸೆ ಪಡೆದಿತ್ತು.

ಕಾಷ್ಠಶಿಲ್ಪ ಕ್ಷೇತ್ರದಲ್ಲಿ ಅಮೂಲ್ಯ ಕೊಡುಗೆ ನೀಡಿದ ಬಡಿಗೇರ ಅವರಿಗೆ ಜಕಣಾಚಾರಿ ಪ್ರಶಸ್ತಿ ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ದೊರೆತಿವೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News