×
Ad

ಯಾದಗಿರಿ | ಮದ್ರಕ್ಕಿ ಬಳಿ ನಡೆದ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ವಿತರಣೆ

Update: 2025-11-03 17:18 IST

ಯಾದಗಿರಿ: ಮದ್ರಕ್ಕಿ ಬಳಿ ನಡೆದ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಸರಕಾರದ ವತಿಯಿಂದ ತಲಾ 2 ಲಕ್ಷ ರೂ.ಪರಿಹಾರ ವಿತರಿಸಿದರು. 

ರಾಜ್ಯ ಸರಕಾರ ನೀಡಿರುವ ಪರಿಹಾರದ  ತಲಾ 2 ಲಕ್ಷ ರೂ. ಮಕ್ಕಳ‌ ಶಿಕ್ಷಣ, ಆರೋಗ್ಯ ಇತರೇ ಉತ್ತಮ‌ ಕೆಲಸಗಳಿಗೆ ಬಳಸಿಕೊಳ್ಳಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಕಳೆದ ಏ.10 ರಸ್ತೆ ಅಪಘಾತದಲ್ಲಿ ಮೃತಪಟ್ಟ ವರ್ಕನಳ್ಳಿ ಗ್ರಾಮದ ಏಳು ಕುಟುಂಬಗಳಿಗೆ ಗ್ರಾಪಂ ಕಚೇರಿ ಆವರಣದಲ್ಲಿ  ಶಾಸಕ ಚನ್ನಾರೆಡ್ಡಿ ಪಾಟೀಲ್ ಚೆಕ್‌ ವಿತರಿಸಿದ್ದಾರೆ. 

ಮದ್ರಕ್ಕಿ ಬಳಿ ನಡೆದ ಅಪಘಾತದಲ್ಲಿ ಸೂಮವ್ವ, ಶರಣಪ್ಪ, ತಗಮ್ಮ, ಶಿವಣ್ಣ, ಬಾರಮ್ಮ, ಹಣಮಂತಿ ಮತ್ತು ಸುನೀತಾ ಅವರು ಮೃತಪಟ್ಟಿದ್ದರು.  

ಈ ವೇಳೆ ಕಾಂಗ್ರೆಸ್ ಮುಖಂಡರಾದ ಸುದರ್ಶನ ನಾಯಕ, ಬಸವರಾಜಪ್ಪ ಗೌಡ ದಳಪತಿ, ತಹಶೀಲ್ದಾರ್‌ ಸುರೇಶ ಅಂಕಲಗಿ, ಕಂದಾಯ ನಿರೀಕ್ಷಾಣಾಧಿಕಾರಿ ಗಿರೀಶ್, ವರ್ಕನಳ್ಳಿ ಗ್ರಾಪಂ ಪಿಡಿಒ ವಿಜಯಲಕ್ಷ್ಮೀ, ಸಾಮಾಜಿಕ ಹೋರಾಟಗಾರ ಉಮೇಶ ಮುದ್ನಾಳ್, ಹಣಮಂತ ನಾಯಕ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News