ಯಾದಗಿರಿ | ಬಿಲ್ ಕಲೆಕ್ಟರ್ ನರಸಪ್ಪ ಲೋಕಾಯುಕ್ತ ಬಲೆಗೆ
Update: 2025-10-03 19:50 IST
ಯಾದಗಿರಿ : ನಗರಸಭೆಯ ಬಾಕಿ ಉಳಿದ ಇ-ಖಾತಾ ದಾಖಲೆ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಿಲ್ ಕಲೆಕ್ಟರ್ ನರಸಪ್ಪ ಮಣಿಕ್ಕಪ್ಪ ಲೋಕಾಯುಕ್ತ ಬಲೆಗೆ ಸಿಕ್ಕಿರುವ ಘಟನೆ ಶುಕ್ರವಾರ ಸಂಜೆ ಯಾದಗಿರಿ ನಗರದಲ್ಲಿ ನಡೆದಿದೆ.
ಅರ್ಜಿದಾರ ಶಶಿಕುಮಾರ ಜ್ಞಾನಮಿತ್ರರಿಂದ ದಾಖಲೆ ನೀಡಲು 8,000 ರೂ. ನೀಡುವಂತೆ ಬಿಲ್ ಕಲೆಕ್ಟರ್ ನರಸಪ್ಪ ಮಣಿಕ್ಕಪ್ಪ ಬೇಡಿಕೆ ಇಟ್ಟಿದ್ದರು. ಮೊತ್ತದ ಭಾಗವಾಗಿ 5,000 ರೂ. ಹಣವನ್ನು ಫೋನ್‌ಪೇ ಮೂಲಕ ಸ್ವೀಕರಿಸಿದ್ದರು. ಈ ಕುರಿತಾಗಿ ಅರ್ಜಿದಾರರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ಎಸ್ಪಿ ಹಾಗೂ ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಪಿಐ ಸಂಗಮೇಶ, ಸಿದ್ದರಾಮ್ ಬಳೂರ್ಗಿ ಸೇರಿದಂತೆ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಬಿಲ್ ಕಲೆಕ್ಟರ್‌ನ್ನು ನಡೆಸಿ ಬಿಲ್ ಕಲೆಕ್ಟರ್‌ನ್ನು ಬಲೆಗೆ ಬೀಳಿಸಿದರು.