ಯಾದಗಿರಿ | ಬುದ್ಧಘೋಷ್ ದೇವೇಂದ್ರ ಹೆಗಡೆ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ
ಯಾದಗಿರಿ: ಬೌದ್ಧ ಸಾಹಿತಿ ಹಾಗೂ ದಲಿತ ಚಳುವಳಿಯ ಹೋರಾಟಗಾರ ಬುದ್ಧಘೋಷ್ ದೇವೇಂದ್ರ ಹೆಗಡೆ ಅವರ ಸ್ಮರಣಾರ್ಥ ನುಡಿನಮನ ಕಾರ್ಯಕ್ರಮ ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಡಾ.ಗಾಳೆಪ್ಪ ಪೂಜಾರಿ ಮಾತನಾಡಿ, “ದಲಿತ ಸಂಘಟನೆಗಳಿಗೆ ಶಕ್ತಿಯಾಗಿದ್ದ ಹೆಗಡೆ ಅವರು ಶಿಸ್ತಿನ ಸಿಪಾಯಿಯಾಗಿದ್ದರು. ಕುಟುಂಬಕ್ಕೆ ಕಡಿಮೆ ಸಮಯ ನೀಡಿದರೂ ಸಮಾಜಮುಖಿ ಹೋರಾಟದಲ್ಲಿ ತೊಡಗಿಸಿಕೊಂಡು ಅಪಾರ ಸೇವೆ ಸಲ್ಲಿಸಿದರು. ಸ್ವಾಭಿಮಾನದಿಂದ ಬದುಕಿದ ಅವರು ಯಾವುದೇ ಆಸೆ-ಪಾಸೆಗಳಿಲ್ಲದೆ ಹೋರಾಡಿದ ಸಮಾಜಸೇವಕರು. ಹೆಗಡೆ ಅವರನ್ನು ಕಳೆದುಕೊಂಡಿರುವುದು ಸಮಾಜಕ್ಕೆ ಭಾರೀ ನಷ್ಟ ಎಂದರು.
ದಲಿತ ಹಿರಿಯ ಮುಖಂಡ ಮರೆಪ್ಪ ಚಟ್ಟೇರಕರ್ ಅವರು, “ನಾವು ಹೋರಾಟ ಮಾಡಬೇಕಾದಾಗ ಹೆಗಡೆ ಅವರ ಮಾರ್ಗದರ್ಶನ ಪಡೆದು ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೆವು. ಸಮಾಜದ ಹಿತಕ್ಕಾಗಿ ಸದಾ ಕಾಳಜಿ ವಹಿಸಿದ ಅವರ ಬದುಕು ನಮಗೆ ದಾರಿದೀಪವಾಗಿದೆ” ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಬೌದ್ಧ ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ದಲಿತ ಸಂಘಟನೆಗಳ ನಾಯಕರು ಹಾಗೂ ಗಣ್ಯರು ಪಾಲ್ಗೊಂಡು ದೇವೇಂದ್ರ ಹೆಗಡೆಗೆ ಭಾವಪೂರ್ಣ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಪೇಂದ್ರ ಹೊಠಾರ್, ಮಹೇಶ್ ಕುರಕುಂಬಳಕರ್, ಚನ್ನಯ್ಯ ಮಾಳಿಕೇರಿ, ಬಸವರಾಜ ಹೊಸ್ಮನಿ, ಶರಣು ಎಸ್. ನಾಟೇಕಾರ್, ಡಿ. ರಾಜಕುಮಾರ, ಸ್ವಾಮಿದೇವ ದಾಸನಕೇರಿ, ಗೋಪಾಲ ತೆಳಗೇರಿ, ನಿಂಗಪ್ಪ ಕೊಲ್ಲೂರುಕರ್, ಸುರೇಶ ಬೊಮ್ಮನ್, ಅಶೋಕ ಕಣಿಜಿಕರ್, ಮಲ್ಲಿಕಾರ್ಜುನ ಈಟೇ, ಚಂದ್ರಕಾಂತ ಮಲ್ಲಿಕಾರ್ಜುನ ಸುಂಗಲಕರ್, ಸೈದಪ್ಪ ಕೂಯಿಲೂರ್, ಮಲ್ಲಿಕಾರ್ಜುನ ಸಂತೋಷ ನಿರ್ಮಲಕರ್, ಪರಶುರಾಮ ಒಡೆಯರ್, ಶಿವುಪುತ್ರ ನಡಿಗೇರಿ, ಬಸವರಾಜ ಮೂಲಿಮನಿ, ಮಲ್ಲಿಕಾರ್ಜುನ ಕುರಕುಂಬಳಕರ್, ಶ್ರೀಕಾಂತ್ ಸುಂಗಲಕರ್, ಚಂದ್ರಕಾಂತ ಚಲವಾದಿ, ಮಲ್ಲಿಕಾರ್ಜುನ ಹತ್ತಿಕುಣಿ, ಈಶ್ವರ ದಿಮ್ಮೆ, ನಿಂಗಪ್ಪ ಬೀರನಾಳ, ಮಲ್ಲಿಕಾರ್ಜುನ ಸುಂಗಲಕರ್ ಸೇರಿದಂತೆ ಅನೇಕರು ಭಾಗವಹಿಸಿದರು.