×
Ad

ಯಾದಗಿರಿ | ಸಚಿವ ಜಾರಕಿಹೋಳಿ‌ ಕುರಿತು ಡಾ.ಯತೀಂದ್ರ ಹೇಳಿಕೆಗೆ ಜಿಲ್ಲಾ ಅಹಿಂದ ಅಧ್ಯಕ್ಷರ ಸಹಮತ

Update: 2025-10-25 19:00 IST

ಯಾದಗಿರಿ: ಸಚಿವ ಸತೀಶ್‌ ಜಾರಕಿಹೋಳಿ ಕುರಿತಂತೇ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ನೂರಕ್ಕೆ ನೂರರಷ್ಟು ಸರಿ ಇದೆ ಎಂದು ಜಿಲ್ಲಾ ಅಹಿಂದ ಸಂಘಟನೆ ಅಧ್ಯಕ್ಷ ಹಣಮೇಗೌಡ ಮರಕಲ್ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ಸೈದ್ಧಾಂತಿಕ ಉತ್ತರಾಧಿಕಾರಿ ಸ್ಥಾನ ತುಂಬಲು ಸಚಿವ ಸತೀಶ್‌ ಜಾರಕಿಹೋಳಿ ಅವರು ಎಲ್ಲ ರೀತಿಯಿಂದಲ್ಲೂ ಸಮರ್ಥರಿದ್ದಾರೆಂಬ ಯತೀಂದ್ರ ಅವರ ಹೇಳಿಕೆ ನಾಡಿನ ಪ್ರಜ್ಞಾವಂತರೆಲ್ಲರೂ ಒಪ್ಪಿಕೊಳ್ಳುವಂತಹದ್ದೆ ಆಗಿದೆ. ಅಹಿಂದ ಚಳುವಳಿ ಮುಂದುವರೆಸುವಲ್ಲಿ ಬಲಿಷ್ಠ ಶಕ್ತಿ ಹೊಂದಿದ್ದಾರೆ. ಅಷ್ಠೆ ಅಲ್ಲ, ಸಿದ್ದರಾಮಯ್ಯನವರ ತರಹವೇ ಸಿಎಂ ಸ್ಥಾನವೂ ನಿಭಾಯಿಸುವ ಎಲ್ಲ ಜ್ಞಾನವನ್ನು ಹೊಂದಿದ್ದಾರೆಂದು ಮರಕಲ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಒಂದು ವೇಳೆ ಬದಲಾಗುವ ರಾಜಕೀಯ ಸನ್ನಿವೇಶಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಹಿರಿತನವೂ ಸಚಿವ ಸತೀಶ್‌ ಜಾರಕಿಹೋಳಿ ಅವರಿಗೆ ಇದೆ ಎಂದು ಹಣಮೇಗೌಡ ಮರಕಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News