×
Ad

ಯಾದಗಿರಿ | ಕಾನೂನು ಬದ್ಧ ದತ್ತು ಪ್ರಕ್ರಿಯೆ “ಜೀವ ಸೆಲೆ” ವಿಡಿಯೋ ವೀಕ್ಷಿಸಲು ಜಿಲ್ಲಾಧಿಕಾರಿಯಿಂದ ಸೂಚನೆ

Update: 2025-11-07 21:44 IST

ಯಾದಗಿರಿ: ರಾಷ್ಟ್ರೀಯ ದತ್ತು ಮಾಸಾಚರಣೆ 2025ರ ನವೆಂಬರ್ ಅಂಗವಾಗಿ ಕಾನೂನು ಬದ್ಧ ದತ್ತು ಪ್ರಕ್ರಿಯೆ ಕುರಿತು ಸಿದ್ದಪಡಿಸಲಾದ “ಜೀವ ಸೆಲೆ” ವಿಡಿಯೋ ವೀಕ್ಷಿಸಲು ಮತ್ತು ಸಂಕಲ್ಪ ಸಂದೇಶ ಪಡೆಯಲು ಆದೇಶವನ್ನು ಯಾದಗಿರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಹೊರಡಿಸಿದ್ದಾರೆ.

ಪ್ರತಿ ವರ್ಷ ನವೆಂಬರ್ ತಿಂಗಳನ್ನು ರಾಷ್ಟ್ರೀಯ ದತ್ತು ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು, ಅದರಂತೆ 2025-26ನೇ ಸಾಲಿನ ದತ್ತು ನಿಯಮಾವಳಿ-2022ರ ನಿಯಮ 41 (1) ಮತ್ತು 35 (2) (ಜಿ) ರನ್ವಯ ದತ್ತು ಮಾಸಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ವರ್ಷದ ಘೋಷವಾಕ್ಯ “ವಿಶೇಷ ಚೇತನ ಮಕ್ಕಳ ದತ್ತು ಪ್ರಕ್ರಿಯೆ” (Adoption of Children Having Special Needs) ವಾಗಿರುತ್ತದೆ.

ಇದರ ಅಂಗವಾಗಿ ಸಾರ್ವಜನಿಕರಲ್ಲಿ ಕಾನೂನು ಬದ್ಧ ದತ್ತು ಮತ್ತು ಕಾನೂನು ಬಾಹಿರವಾಗಿ ಮಕ್ಕಳನ್ನು ದತ್ತು ಪಡೆದಲ್ಲಿ ವಿಧಿಸಬಹುದಾದ ಶಿಕ್ಷೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕವಾದ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಅಂಗನವಾಡಿ, ವೈದ್ಯರು ಮತ್ತು ಶುಶ್ರೂಷಕರು, ಆಶಾ ಮತ್ತು ಅಂಕನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್‌ ಅಧಿಕಾರಿಗಳು, ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಖಾಸಗಿ ಮತ್ತು ಹೆರಿಗೆ ವಿಭಾಗದ ವೈದ್ಯರು ಮತ್ತು ಶುಶ್ರೂಷಕರು, ಮತ್ತು ಸಿಬ್ಬಂದಿಗಳು, ಮಕ್ಕಳ ಪಾಲನಾ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ದತ್ತು ಪ್ರಕ್ರೀಯೆ ಕುರಿತು “ಸಂಕಲ್ಪ ಸಂದೇಶ” ಪಡೆಯುವಂತೆ ಮತ್ತು “ಜೀವ ಸೆಲೆ” ವಿಡಿಯೋ ವೀಕ್ಷಣೆಯನ್ನು ಮಾಡಲು ತಿಳಿಸಿದೆ.

ಅದರಂತೆ ನವೆಂಬರ್ ತಿಂಗಳಲ್ಲಿ 2025ರ ನ.17 ರಂದು ಬೆಳಿಗ್ಗೆ 10.30 ಗಂಟೆಗೆ ಸುಭಾಷ್ ಚೌಕ್‌ನಿಂದ ಪದವಿ ಮಹಾವಿದ್ಯಾಲಯದವರೆಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು, ನಂತರ ಪದವಿ ಮಹಾವಿದ್ಯಾಲಯದ ಸಭಾಂಗಣ, ಯಾದಗಿರಿ ಇಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಂತರ 2025ರ ನವೆಂಬರ್ 18 ರಂದು ಯಾದಗಿರಿ, ಶಹಾಪುರ, ಸುರಪುರ, ಗುರುಮಿಠಕಲ್, ವಡಗೇರಾ, ಹುಣಸಗಿ ತಾಲ್ಲೂಕೂಗಳಲ್ಲಿ ರಾಷ್ಟ್ರೀಯ ದತ್ತು ಮಾಸಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳುವುದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ “ಜೀವ ಸೆಲೆ” ವಿಡಿಯೋ ವೀಕ್ಷಿಸಲು ಮತ್ತು ಸಂಕಲ್ಪ ಸಂದೇಶ ಪಡೆಯುವ ಮೂಲಕ ಕಾನೂನಾತ್ಮಕ ದತ್ತು ಪ್ರಕ್ರಿಯೆಯನ್ನು ಪ್ರೋತ್ಸಾಹಿಸುವುದು ಹಾಗೂ ತಮ್ಮ ಕಛೇರಿಗಳಲ್ಲಿ, ಆಸ್ಪತ್ರೆಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ, ತಾಲೂಕು ಕಚೇರಿಗಳಲ್ಲಿ “ಜೀವ ಸೆಲೆ” ವಿಡಿಯೋ ವೀಕ್ಷಿಸಲು ಮತ್ತು ಸಂಕಲ್ಪ ಸಂದೇಶ ಪಡೆಯಲು ಆದೇಶ ಹೊರಡಿಸಿದೆ.

ಅದರಂತೆ ಸಂಕಲ್ಪ ಪಡೆಯುವುದು ಹಾಗೂ “ಜೀವ ಸೆಲೆ” ವಿಡಿಯೋ ವೀಕ್ಷಿಸಲು ಕಾರ್ಯಕ್ರಮ ಆಯೋಜಿಸಿ ಛಾಯಾ ಚಿತ್ರಗಳೊಂದಿಗೆ ವರದಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ ಕಟ್ಟಡ, ಮೋದಲನೇ ಮಹಡಿ, ರೂ.ಸಿ-17, ಚಿತ್ತಾಪುರ ರಸ್ತೆ, ಯಾದಗಿರಿ ಈ ಕಚೇರಿಗೆ ಅಥವಾ ಈ ಕಚೇರಿಯ E-mail ID: dcpoyadgir@gmail.com ಮೂಲಕ ವರದಿಯನ್ನು ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News