×
Ad

ಯಾದಗಿರಿ | ಜಪ್ತಿ ಮಾಡಿದ ಗಾಂಜಾ ನಾಶ ಪಡಿಸಿದ ಅಬಕಾರಿ ಇಲಾಖೆ

Update: 2025-10-31 20:33 IST

ಯಾದಗಿರಿ : ಯಾದಗಿರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಅಬಕಾರಿ ದಾಳಿ ಸಾಗಾಣಿಕೆ, ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳಲ್ಲಿ ವಶಪಡಿಸಿಕೊಂಡ ಗಾಂಜಾವನ್ನು ನಾಶಪಡಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತರು ಶಾರದಾ.ಸಿ. ಕೋಲಕಾರ ಅವರು ತಿಳಿಸಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೋರ ಗ್ರೀನ್ ಶುಗರ್ ಫ್ಯಾಕ್ಟರಿಯಲ್ಲಿ ಅ.29ರ ಮಧ್ಯಾಹ್ನ 12.30 ಗಂಟೆಗೆ ಅಬಕಾರಿ ದಾಳಿಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ವಶಪಡಿಸಿಕೊಂಡ ಗಾಂಜಾ ಪದಾರ್ಥಗಳನ್ನು ನಾಶಪಡಿಸಲಾಗಿದೆ.

ಅಬಕಾರಿ ದಾಳಿಯಲ್ಲಿ ಗಾಂಜಾ ಪದಾರ್ಥಗಳನ್ನು ಜಿಲ್ಲಾ ಕಚೇರಿಯಲ್ಲಿ (ಮಾಲ್-ಖಾನಾ) ಸಂಗ್ರಹಿಸಿಡಲಾಗಿರುತ್ತದೆ, ಸಂಗ್ರಹಿಸಿಡಲಾದ ಎಲ್ಲಾ ಗಾಂಜಾ ಪದಾರ್ಥಗಳನ್ನು ಸರ್ಕಾರದ ಮತ್ತು ಘನ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲೆಯ ವಡಗೇರಾ ತಾಲ್ಲೂಕಿನ ಕೋರ ಗ್ರೀನ್ ಶುಗರ್ ಫ್ಯಾಕ್ಟರಿಯಲ್ಲಿ ಅಬಕಾರಿ ಇಲಾಖೆಯ ಮಾನ್ಯ ಅಬಕಾರಿ ಜಂಟಿ ಆಯುಕ್ತರ ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತರು ಯಾದಗಿರಿ, ಅಬಕಾರಿ ಉಪ ಆಯುಕ್ತರು ರಾಯಚೂರು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬರುವ ಎಲ್ಲಾ ವಲಯ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಎಲ್ಲಾ ಗಾಂಜಾ ಪದಾರ್ಥಗಳನ್ನು ನಾಶಪಡಿಸಲಾಗಿದೆ. ಗಾಂಜಾ ಪದಾರ್ಥಗಳ ಗಾಂಜಾ ಗಿಡಗಳು 971, ಒಣಗಿದ ಗಾಂಜಾ 158.475, (ಗಾಂಜಾ ಮಿಶ್ರಿತ) ಚಾಕೋಲೇಟ್ ಗುಳಿಗೆಗಳು 7915 ಅಬಕಾರಿ ದಾಳಿಯಲ್ಲಿ ವಶಪಡಿಸಲಾಗಿದೆ.

ಈ ಸಂದರ್ಭದಲ್ಲಿ ಕಲಬುರಗಿ ವಿಭಾಗ ಅಬಕಾರಿ ಜಂಟಿ ಆಯುಕ್ತರು ಸಂಗಣ್ಣಗೌಡ, ಯಾದಗಿರಿ ಅಬಕಾರಿ ಉಪ ಆಯುಕ್ತರು ಶ್ರೀಮತಿ ಶಾರದಾ. ಸಿ. ಕೋಲಕಾರ, ರಾಯಚೂರು ಅಬಕಾರಿ ಉಪ ಆಯುಕ್ತರು ಸಿ.ಕೆ.ಮಹಿಂದ್ರ, ಯಾದಗಿರಿ ಅಬಕಾರಿ ಅಧಿಕ್ಷಕರು, ಶ್ರೀಮತಿ ಇಂದುದುಬಾಯಿ ಶಹಾಪೂರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು ಹರ್ಷರಾಜ್.ಬಿ. ಯಾದಗಿರಿ ವಿವಿಧ ವಲಯಗಳ ಅಬಕಾರಿ ನಿರೀಕ್ಷಕರು, ಉಪ ನಿರೀಕ್ಷಕರುಗಳಾದ, ಶ್ರೀಶೈಲ್ ಒಡೆಯರ್, ಕೇದಾರನಾಥ ಎಸ್.ಟಿ,ಶಿವಾನಂದ ಪಾಟೀಲ್, ಶರಣಗೌಡ ಬಿರಾದಾರ, ಪ್ರವೀಣಕುಮಾರ, ಪಾಂಡುರಂಗ, ಶ್ರೀಮತಿ ರೇಣುಕಮ್ಮಾ, ಮಹೇಶ ಚೌಧರಿ ಅಬಕಾರಿ ಮುಖ್ಯ ಪೇದೆಯಾದ ಅನಿಲ್ ಕುಮಾರ, ಶರೀಫ್ ವಾಲಿಕರ್, ಮುಹಮ್ಮದ್‌ ರಫೀ, ಮುಹಮ್ಮದ್‌ ಸುಭಾನಿ, ಮಡಿವಾಳಪ್ಪ, ಅಬಕಾರಿ ಪೇದೆಗಳಾದ ಪ್ರವೀಣಕುಮಾರ, ಶೇಖರ ಮೋಹನ, ಬಸ್ಸಪ್ಪ, ಶ್ರೀ ಶರಣಪ್ಪ, ಮತ್ತು ಡಿಸಿಇ ಕಛೇರಿ ಸಿಬ್ಬಂದಿಗಳಾದ ರಘುವೀರ ಸಿಂಗ ಠಾಕೂರ ಹಾಗೂ ಅರುಣಕುಮಾರ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News