ಯಾದಗಿರಿ | ಪತ್ನಿಯ ಶೀಲ ಶಂಕಿಸಿ ತಂದೆಯಿಂದಲೇ ಮಕ್ಕಳಿಬ್ಬರ ಹತ್ಯೆ
ಮತ್ತೋರ್ವ ಪುತ್ರ ಗಂಭೀರ
Update: 2025-09-25 13:33 IST
ಯಾದಗಿರಿ : ಪತ್ನಿಯ ಶೀಲ ಶಂಕಿಸಿ ತಂದೆಯೇ ತನ್ನ ಮಕ್ಕಳಿಬ್ಬರನ್ನು ಹತ್ಯೆ ಮಾಡಿದ್ದು, ಮತ್ತೋರ್ವ ಪುತ್ರನನ್ನು ಕೊಲ್ಲಲು ಯತ್ನಿಸಿರುವ ಘಟನೆ ಯಾದಗಿರಿ ತಾಲೂಕಿನ ದುಗನೂರ ಕ್ಯಾಂಪ್‌ನಲ್ಲಿ ನಡೆದಿದೆ.
ಆರೋಪಿಯನ್ನು ಶರಣಪ್ಪ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಭಾರ್ಗವ್ (5) ಹಾಗೂ ಸಾನ್ವಿ (3) ಮೃತಪಟ್ಟಿದ್ದಾರೆ. ಹಿರಿಯ ಮಗ ಹೇಮಂತ (8) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಶರಣಪ್ಪ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.